ಗಂಡ-ಹೆಂಡತಿ ಜಗಳ ಕೊಲೆಯಲ್ಲಿ ಅಂತ್ಯವಿಜಯವಾಣಿ ಸುದ್ದಿಜಾಲ ಮಳವಳ್ಳಿ
ತಾಲೂಕಿನ ಕಿರುಗಾವಲು ಗ್ರಾಮದಲ್ಲಿ ಗಂಡ-ಹೆಂಡತಿ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಪತಿಯೇ ಪತ್ನಿಯನ್ನು ಕೊಲೆ ಮಾಡಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕ್ಷುಲ್ಲಕ ಕಾರಣಕ್ಕೆ ಭಾನುವಾರ ರಾತ್ರಿ ಕುಮಾರಸ್ವಾಮಿ- ಸೌಮ್ಯಾ(29) ದಂಪತಿಯ ನಡುವೆ ಜಗಳ ನಡೆದಿದೆ. ಈ ಹಿನ್ನೆಲೆಯಲ್ಲಿ ಸೋಮವಾರ ಬೆಳಗಿನ ಜಾವ ನಿದ್ರಿಸುತ್ತಿದ್ದ ಸೌಮ್ಯಾ ಅವರ ಕತ್ತನ್ನು ಆಕ್ಸಲ್ ಬ್ಲೇಡ್‌ನಿಂದ ಕೊಯ್ದು ಕುಮಾರಸ್ವಾಮಿ ಕೊಲೆ ಮಾಡಿದ್ದಾನೆ.
ಡಿವೈಎಸ್‌ಪಿ ಶೈಲೇಂದ್ರ, ಗ್ರಾಮಾಂತರ ಸಿಪಿಐ ಧರ್ಮೇಂದ್ರ ಸ್ಥಳ ಪರಿಶೀಲನೆ ನಡೆಸಿದರು. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಮಂಡ್ಯ ಮಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.
ಈ ಸಂಬಂಧ ಕಿರುಗಾವಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಲೂಕಿನ ಕಲ್ಕುಣಿ ಗ್ರಾಮದ ಕುಮಾರಸ್ವಾಮಿ ಮತ್ತು ಕಿರುಗಾವಲು ಗ್ರಾಮದ ರಾಜು ಎಂಬುವರ ಪುತ್ರಿ ಸೌಮ್ಯಾ ಅವರ ವಿವಾಹ 10 ವರ್ಷಗಳ ಹಿಂದೆ ನಡೆದಿತ್ತು. ಈ ದಂಪತಿಗೆ ಇಬ್ಬರು ಮಕ್ಕಳಿದ್ದು, ಕೌಟುಂಬಿಕ ಕಲಹದಿಂದ ಬೇಸತ್ತು ಸೌಮ್ಯಾ, ಗಂಡನ ಮನೆ ಬಿಟ್ಟು, ಕಿರುಗಾವಲಿನಲ್ಲಿರುವ ತವರು ಮನೆಯಲ್ಲಿ ನೆಲೆಸಿದ್ದರು ಎನ್ನಲಾಗಿದೆ.
ಇತ್ತೀಚೆಗೆ ಪತಿ ಕುಮಾರಸ್ವಾಮಿ ಮಕ್ಕಳನ್ನು ನೋಡುವ ನೆಪದಲ್ಲಿ ಕಿರುಗಾವಲಿಗೆ ಬಂದು ಹೋಗುತ್ತಿದ್ದನು. ಅದರಂತೆ, ಭಾನುವಾರ ಬಂದಿದ್ದ ವೇಳೆ ಪತಿ-ಪತ್ನಿ ನಡುವೆ ಜಗಳ ನಡೆದು ದುರ್ಘಟನೆ ಸಂಭವಿಸಿದೆ.

Leave a Reply

Your email address will not be published. Required fields are marked *