ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಬೆನ್ನಟ್ಟಿದ ಬಿಜೆಪಿ: ಮಮತಾ ಬ್ಯಾನರ್ಜಿ ಟ್ವೀಟ್​ನಲ್ಲಿ ಹೇಳಿದ್ದೇನು?

ಕೋಲ್ಕತ್ತ: ಈ ಬಾರಿ ಬಿಜೆಪಿ ಹವಾ ಸಿಕ್ಕಾಪಟೆ ಇದೆ. ಕಳೆದ ಬಾರಿ ಪಶ್ಚಿಮ ಬಂಗಾಳದಲ್ಲಿ ಬರೀ ಒಂದು ಸ್ಥಾನ ಮಾತ್ರ ಗೆದ್ದಿದ್ದ ಬಿಜೆಪಿ ಈ ಬಾರಿ ಸದ್ಯ 19 ಕ್ಷೇತ್ರಗಳಲ್ಲಿ ತೀವ್ರ ಮುನ್ನಡೆ ಸಾಧಿಸಿದ್ದು, ಅಲ್ಲಿನ ಬಲವಾದ ಪಕ್ಷ ತೃಣಮೂಲ ಕಾಂಗ್ರೆಸ್​ 23ರಲ್ಲಿ ಮುಂದಿದೆ.

ಮುಖ್ಯಮಂತ್ರಿ ಬ್ಯಾನರ್ಜಿ ರಾಜ್ಯವನ್ನು ತಮ್ಮ ವಶದಲ್ಲಿಯೇ ಇಟ್ಟುಕೊಳ್ಳಲು ತೀವ್ರ ಹೋರಾಟ ನಡೆಸಿದ್ದರು. ಸದಾ ಬಿಜೆಪಿ ಹಾಗೂ ಪ್ರಧಾನಿ ಮೋದಿಯವರ ವಿರುದ್ಧ ವಾಗ್ದಾಳಿ ನಡೆಸುತ್ತ ಆರೋಪ ಮಾಡುತ್ತಿದ್ದರು.

ಈಗ ಜಯ ಸಾಧಿಸಿದ ನಮ್ಮ ಪಕ್ಷದ ಅಭ್ಯರ್ಥಿಗಳಿಗೆ ಅಭಿನಂದನೆ. ನಾವು ಎಲ್ಲವನ್ನೂ ವಿಮರ್ಶೆ ಮಾಡಿಕೊಂಡ ಬಳಿಕ ನಮ್ಮ ಅಭಿಪ್ರಾಯ ತಿಳಿಸುತ್ತೇವೆ. ಮತ ಎಣಿಕೆ ಕಾರ್ಯ ಸಂಪೂರ್ಣಗೊಂಡು, ವಿವಿಪ್ಯಾಟ್​ ಹೊಂದಾಣಿಕೆಯಾಗಲಿ ಎಂದು ಮಮತಾ ಬ್ಯಾನರ್ಜಿ ಇಂದು ಟ್ವೀಟ್​ ಮಾಡಿದ್ದಾರೆ.

Leave a Reply

Your email address will not be published. Required fields are marked *