ಮಮತಾ ಬ್ಯಾನರ್ಜಿ ಪಶ್ಚಿಮ ಬಂಗಾಳದ ಅಭಿವೃದ್ಧಿಯ ಸ್ಪೀಡ್​ ಬ್ರೇಕರ್​ ಇದ್ದಂತೆ: ಮೋದಿ

ಸಿಲಿಗುರಿ: ಪಶ್ವಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪಶ್ಚಿಮ ಬಂಗಾಳದ ಅಭಿವೃದ್ಧಿ ಪಥದ ಸ್ಪೀಡ್​ ಬ್ರೇಕರ್​ ಇದ್ದಂತೆ ಎಂದು ದೀದಿ ವಿರುದ್ಧ ಪ್ರಧಾನ ಮಂತ್ರಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ.

ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಮೋದಿ, ಕೇಂದ್ರ ಸರ್ಕಾರ ಬಡವರ ಅಭಿವೃದ್ಧಿಗಾಗಿ ರೂಪಿಸಿರುವ ಹಲವು ಯೋಜನೆಗಳ ಅನುಷ್ಠಾನಕ್ಕೆ ಸಿಎಂ ಮಮತಾ ಬ್ಯಾನರ್ಜಿ ತಡೆಯೊಡ್ಡಿದ್ದಾರೆ. ಮುಖ್ಯವಾಗಿ ಆಯುಷ್ಮಾನ್​ ಭಾರತ್​ ಯೋಜನೆಯ ಲಾಭ ಪಶ್ಚಿಮ ಬಂಗಾಳದ ಜನರಿಗೆ ಸಿಗದಂತೆ ಸ್ಪೀಡ್​ಬ್ರೇಕರ್​ ದೀದಿ ತಡೆದಿದ್ದಾರೆ. ರಾಜ್ಯ ಅಭಿವೃದ್ಧಿಯ ಪಥಕ್ಕೆ ಮರಳಲು ನಾನು ಈ ಸ್ಪೀಡ್​ ಬ್ರೇಕರ್​ ಯಾವಾಗ ದಾರಿಯಿಂದ ಪಕ್ಕಕ್ಕೆ ಸರಿಯುತ್ತದೆ ಎಂದು ಕಾಯುತ್ತಿದ್ದೇನೆ ಎಂದು ಮೋದಿ ತಿಳಿಸಿದರು.

ಮತ್ತೊಂದೆಡೆ ಕಾಂಗ್ರೆಸ್​ ಪಕ್ಷ ನಮ್ಮ ಸೇನಾ ಪಡೆಗಳಿಗೆ ಭಯೋತ್ಪಾದಕರ ವಿರುದ್ಧ ಹೋರಾಡಲು ರಕ್ಷಣಾ ಕೋಟೆಯಂತೆ ನೆರವಾಗುವ ಸೇನಾ ಪಡೆಗಳ ವಿಶೇಷ ಅಧಿಕಾರ ಕಾಯ್ದೆ (AFSPA)ಯನ್ನು ತಿದ್ದುಪಡಿ ಮಾಡುವುದಾಗಿ ತಿಳಿಸಿದೆ. ಅವರು ನಮ್ಮ ಭದ್ರತಾ ಪಡೆಗಳನ್ನು ಅಸಹಾಯಕರನ್ನಾಗಿಸಲು ಹೊರಟಿದ್ದಾರೆ. ಅವರ ಕೈಗಳು ಮತ್ತು ಕಾಲುಗಳನ್ನು ಕಟ್ಟಿ ಹೋರಾಟಕ್ಕೆ ಕಳುಹಿಸಲು ಯೋಜನೆ ರೂಪಿಸುತ್ತಿದ್ದಾರೆ ಎಂದು ಕಾಂಗ್ರೆಸ್​ ಪ್ರಣಾಳಿಕೆ ವಿರುದ್ಧ ಮೋದಿ ವಾಗ್ದಾಳಿ ನಡೆಸಿದರು. (ಏಜೆನ್ಸೀಸ್​)

Leave a Reply

Your email address will not be published. Required fields are marked *