ದೇಶ ಬಿಡುವಾಗ 300 ಬ್ಯಾಗ್​ ಕೊಂಡೊಯ್ಯಲಿಲ್ಲ ಎಂದ ಮಲ್ಯ ಪರ ವಕೀಲ

ನವದೆಹಲಿ: ಮದ್ಯದೊರೆ ವಿಜಯ್​ ಮಲ್ಯ ಎರಡು ವರ್ಷಗಳ ಹಿಂದೆ ಭಾರತದಿಂದ ತೆರಳಿದ್ದು ಜರ್ಮನಿಯಲ್ಲಿ ನಡೆಯುತ್ತಿದ್ದ ವಿಶ್ವ ಮೋಟಾರ್ಸ್​ ಸ್ಪೋರ್ಟ್​ ಕೌನ್ಸಿಲ್​ ಸಮ್ಮೇಳನಕ್ಕೆ. ಫಾರ್ಮುಲಾ 1 ರ ನಿರ್ದೇಶಕರಾಗಿ ಭೇಟಿ ಕೊಟ್ಟಿದ್ದರು. ಅವರು ಯುರೋಪ್​ಗೆ ತೆರಳುವಾಗ 300 ಬ್ಯಾಗ್​ಗಳನ್ನು ತೆಗೆದುಕೊಂಡು ಹೋಗಿರಲಿಲ್ಲ ಎಂದು ಮಲ್ಯ ಪರ ವಕೀಲ ಅಮಿತ್​ ದೇಸಾಯಿ ನ್ಯಾಯಾಲಯಕ್ಕೆ ಅಫಿಡವಿಟ್​ ಸಲ್ಲಿಸಿದ್ದಾರೆ.

ಮನಿ ಲ್ಯಾಂಡರಿಂಗ್​ ನಿಯಂತ್ರಣ ಕಾಯ್ದೆಯಡಿ ವಿಜಯ್​ ಮಲ್ಯ ಆರ್ಥಿಕ ಅಪರಾಧಿ ಎಂದು ಆದೇಶ ನೀಡಬೇಕು ಎಂದು ಒತ್ತಾಯಿಸಿ ಜಾರಿ ನಿರ್ದೇಶನಾಲಯ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿತ್ತು.

ಮಲ್ಯ ಭಾರತ ಬಿಟ್ಟು ಹೋಗುವಾಗ ಅವರ ಜತೆ 300 ಬ್ಯಾಗ್​ಗಳನ್ನು ತೆಗೆದುಕೊಂಡು ಹೋಗಿದ್ದರು. ಅವರಿಗೆ ಮತ್ತೆಂದೂ ಭಾರತಕ್ಕೆ ವಾಪಸ್​ ಬರುವ ಇಂಗಿತ ಇರಲಿಲ್ಲ. ಮಲ್ಯ ವ್ಯವಹಾರಕ್ಕೆ ಸಂಬಂಧಪಟ್ಟ ಸಮ್ಮೇಳನಕ್ಕೆ ಹೋಗಿದ್ದರು ಎಂದು ಅವರ ಕಾನೂನು ಸಲಹೆಗಾರರು ಹೇಳುತ್ತಾರೆ. ಆದರೆ, ಸಮ್ಮೇಳನಕ್ಕೆ 300 ಬ್ಯಾಗ್​ಗಳು ಬೇಕಾಗುತ್ತವೆಯೇ ಎಂದು ಇ.ಡಿ. ವಕೀಲ ಡಿ.ಎನ್.ಸಿಂಗ್​ ಪ್ರಶ್ನಿಸಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಅಮಿತ್ ದೇಸಾಯಿ, ಮಲ್ಯಾ 2016 ರ ಮಾರ್ಚ್​ 2ರಂದು ದೇಶ ಬಿಟ್ಟು ಯುರೋಪ್​ಗೆ ಹೋಗುವಾಗ ಕೇವಲ 5 ಬ್ಯಾಗ್​ಗಳನ್ನು ಒಯ್ದಿದ್ದರು ಎಂದು ಹೇಳಿದರು.

ವಿಶ್ವ ಮೋಟಾರ್ಸ್​ ಸ್ಪೋರ್ಟ್​ ಕೌನ್ಸಿಲ್ ನ 2015ರ ಸಮ್ಮೇಳನದಲ್ಲಿ ಮಲ್ಯ ಭಾಗವಹಿಸಿದ್ದರು ಎಂಬುದಕ್ಕೆ ಸಾಕ್ಷಿ ಇದೆ. ಅಲ್ಲದೆ, ಮತ್ತೊಂದು ಸಮ್ಮೇಳನ 2016ರ ಮಾರ್ಚ್​ 4ರಂದು ನಡೆಯುತ್ತದೆ ಎಂದು ಅಂದೇ ನಿರ್ಧಾರವಾಗಿತ್ತು. ಹಾಗಾಗಿ ಅವರು 2016ರ ಮಾರ್ಚ್​ 2ರಂದೇ ದೇಶ ಬಿಟ್ಟಿದ್ದರು ಎಂದು ಅಮಿತ್​ ದೇಸಾಯಿ ಅಫಿಡವಿಟ್​ನಲ್ಲಿ ತಿಳಿಸಿದ್ದಾರೆ.​

ಇದನ್ನು ಓದಿ

ಮಲ್ಯಗೆ ಮತ್ತೊಂದು ಸಂಕಷ್ಟ