ಕಲಬುರಗಿ: ದಾವಣಗೆರೆ ವೃತ್ತಿ ರಂಗಾಯಣದ ನಿರ್ದೇಶಕರಾಗಿ ಮೂಲತಃ ಯಡ್ರಾಮಿ ತಾಲೂಕಿನ ಕಡಿಕೋಳ ಗ್ರಾಮದ ಮಲ್ಲಿಕಾರ್ಜುನ ಕಡಕೋಳ ಅವರು ನೇಮಕವಾಗಿದ್ದಾರೆ.
ಕಲಬುರಗಿ ಮೂಲದ ಮಲ್ಲಿಕಾರ್ಜುನ ಕಡಕೋಳ ಅವರು, ಹಲವು ದಶಕದಿಂದ ದಾವಣಗೆರೆಯನ್ನು ಕಾರ್ಯಕ್ಷೇತ್ರ ಮಾಡಿಕೊಂಡು ಅಲ್ಲಿಯೇ ಸೇವೆ ಸಲ್ಲಿಸುತ್ತಿದ್ದಾರೆ. ಕರ್ನಾಟಕ ನಾಟಕ ಅಕಾಡೆಮಿ ಮತ್ತು ರಂಗ ಸಮಾಜದ ಸದಸ್ಯರಾಗಿ ಬಾ ಅತಿಥಿ, ರಂಗ ಸಮಾಗಮ, ತಿಂಗಳ ಬೆಳಕಲಿ ರಂಗದ ಮೆರಗು ಮೊದಲಾದ ಕಾರ್ಯಕ್ರಮಗಳ ಮೂಲಕ ಕಡಕೋಳ ಅವರು ರಂಗಾಸಕ್ತರು ಮತ್ತು ಸರ್ಕಾರದ ಗಮನ ಸೆಳೆದಿದ್ದರು. ದಾವಣಗೆರೆ ವೃತ್ತಿ ರಂಗಾಯಣ ಸ್ಥಾಪನೆಯಲ್ಲೂ ಅವರ ಪರಿಶ್ರಮ ಗಮನಾರ್ಹ. ವೃತ್ತಿ ರಂಗಭೂಮಿ : ವರ್ತಮಾನದ ಸವಾಲುಗಳು ವಿಷಯದ ಮೇಲೆ ಫೆಲೋಶಿಪï ಮಾಡಿz್ದÁರೆ.
ಕಲಬುರಗಿಗೆ ಎರಡು ನಿರ್ದೇಶಕ
ರಾಜ್ಯದ ಆರು ರಂಗಾಯಣಗಳಿಗೆ ಸೋಮವಾರ ನಿರ್ದೇಶಕರನ್ನು ನೇಮಿಸಿ ಆದೇಶ ಹೊರಡಿಸಲಾಗಿದ್ದು, ಇದರಲ್ಲಿ ಕಲಬುರಗಿ ಜಿಲ್ಲೆಯವರೇ ಇಬ್ಬರು ನಿರ್ದೇಶಕರಾಗಿ ಆಯ್ಕೆಯಾಗಿದ್ದು, ವಿಶೇಷ. ಕಲಬುರಗಿ ರಂಗಾಯಣಕ್ಕೆ ನಗರದ ಡಾ.ಸುಜಾತಾ ಜಂಗಮಶೆಟ್ಟಿ ನೇಮಕವಾಗಿದ್ದು, ದಾವಣಗೆರೆಯ ವೃತ್ತಿ ರಂಗಾಯಣಕ್ಕೆ ಯಡ್ರಾಮಿ ಜಿಲ್ಲೆ ಕಡಕೋಳ ಗ್ರಾಮ ಮೂಲದ ಮಲ್ಲಿಕಾರ್ಜುನ ಕಡಕೋಳ ನೇಮಕವಾಗುವ ಮೂಲಕ ಜಿಲ್ಲೆಗೆ ಎರಡು ನಿರ್ದೇಶಕ ಸ್ಥಾನ ದೊರೆತಂತೆ ಆಗಿದೆ.