ಬಿಎಸ್‌ವೈ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಮಲ್ಲಿಕಾರ್ಜುನ ಖರ್ಗೆ

ಬೆಂಗಳೂರು: ಯಡಿಯೂರಪ್ಪ ಏನೇ ಹೇಳಲಿ. ಅವರು‌ ಮಾಡಿದ್ದು ಸರಿಯಲ್ಲ. ನಿನ್ನೆ ಪ್ರಧಾನಿ ಮೋದಿಯವರ ಮ‌ನೆಯಲ್ಲಿ‌ ಮೀಟಿಂಗ್ ಇತ್ತು. ಆಗ ಪಿಎಂ ಜತೆ ಆಪರೇಷನ್ ಕಮಲದ ಬಗ್ಗೆ ಮಾತನಾಡಿದ್ದೇನೆ ಎಂದು ಕಾಂಗ್ರೆಸ್‌ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.

ಪ್ರಧಾನಿಯವರು ಕರ್ನಾಟಕದಲ್ಲಿ ಏನು ನಡೆಯುತ್ತಿದೆ ಎಂದು ಕೇಳಿದರು. ನಿಮ್ಮವರು ಸರ್ಕಾರ ಕೆಡವಲು ಪ್ರಯತ್ನ ಪಡುತ್ತಿದ್ದಾರೆ. ಆದರೆ ಅದರಲ್ಲಿ ನಿಮ್ಮವರು ಯಶಸ್ವಿ ಆಗುವುದಿಲ್ಲ ಎಂದು ಹೇಳಿದ್ದೇನೆ.

ಕಾಂಗ್ರೆಸ್‌ನವರು ಬಿಜೆಪಿ ಶಾಸಕರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಅದಕ್ಕೆ ಒಂದು ಕಡೆ ಎಲ್ಲ ಇದೀವಿ ಎಂದು ನಿಮ್ಮವರು ಹೇಳುತ್ತಿದ್ದಾರೆ ಎಂದು ಹೇಳಿದ್ದೇನೆ ಎಂದರು.

ನಿಮ್ಮ ಶಾಸಕರು ಗಟ್ಟಿ ಇದ್ದರೆ, ಒಗ್ಗಟ್ಟಿದ್ದರೆ ಗುರುಗ್ರಾಮದಲ್ಲಿ ಏಕಿರಬೇಕು. ಪ್ರಜಾಪ್ರಭುತ್ವದಲ್ಲಿ ಇದನ್ನೆಲ್ಲ ಮಾಡಬಾರದು. ಪ್ರಜಾಭುತ್ವದ ತತ್ತ್ವಗಳು ಉಳಿಯಬೇಕು. ಎಲ್ಲ ಸದಸ್ಯರು ಒಂದಾಗಿದ್ದರೆ ಸರ್ಕಾರ ಸುಭದ್ರವಾಗಿರುತ್ತದೆ. ಗೋವಾ, ಅರುಣಾಚಲ ಪ್ರದೇಶ, ಮಣಿಪುರ, ಉತ್ತರಾಖಂಡ್ ಗಳಲ್ಲಿ ಬಿಜೆಪಿಯವರು ಪಕ್ಷ ಒಡೆದರು. ಅಲ್ಲೆಲ್ಲ ಹಾಗೆ ಮಾಡಿದ್ದರಿಂದಲೇ ಬೇರೆ ಕಡೆಯೂ ಅಸ್ಥಿರತೆ ಮುಂದುವರಿಯುತ್ತದೆ. ಇಂಥದ್ದೆಲ್ಲ ಮಾಡಿದರೆ ಬೇರೆಯವರೂ ಅದನ್ನೇ ಅನುಸರಿಸುತ್ತಾರೆ. ಕರ್ನಾಟಕದಲ್ಲೂ ಅದೇ ಆಗಿದ್ದು ಎಂದು ಹೇಳಿದರು. (ದಿಗ್ವಿಜಯ ನ್ಯೂಸ್)

Leave a Reply

Your email address will not be published. Required fields are marked *