ಕಲಬುರಗಿ : ನಗರದ ಲೋಹಾರ ಗಲ್ಲಿಯ ಮಹಾದೇವ ನಗರ, ಆಸೀಫ್ ಗಂಜ್‌ನ ಶ್ರೀ ಮಲ್ಲಿಕಾರ್ಜುನ ಪಂಚ ಮಂಡಳಿ (ಮಹಾದೇವ ಮಂದಿರ)ದಲ್ಲಿ ಭಾನುವಾರ ಮುಂಜಾನೆ ರುದ್ರಾಭಿಷೇಕ, ಮಹಾಪ್ರಸಾದ, ರಾತ್ರಿ ಭಜನೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿವೆ. ಸೆ.೨೫ ರಂದು ಶ್ರೀ ಮಲ್ಲಿಕಾರ್ಜುನ ದೇವರ ಪಲ್ಲಕ್ಕಿ ಉತ್ಸವ ಜರುಗಲಿದೆ. ಮಧ್ಯಾಹ್ನ ೨ ಗಂಟೆಗೆ ಶ್ರೀ ಮಂದಿರದಿAದ ಉತ್ಸವದ ಮೆರವಣಿಗೆ ಶುರುವಾಗಿ ಹುಮನಾಬಾದ ಬೇಸ್, ಕಿರಾಣಾ ಬಜಾರ, ಚೌಕ್ ಸರ್ಕಲ್, ಕೋಟೆ ರಸ್ತೆ, ಲೋಹಾರಗಲ್ಲಿ ಮಾರ್ಗವಾಗಿ ರಾತ್ರಿ೯ ಗಂಟೆಗೆ ಮಹಾದೇವ ಮಂದಿರಕ್ಕೆ ತಲುಪಲಿದೆ ಎಂದು ಎಂದು ಪಂಚ ಕಮೀಟಿ ಕಾರ್ಯದರ್ಶಿ ಮಲ್ಲಿನಾಥ ಪಾಟೀಲ್ ತಿಳಿಸಿದ್ದಾರೆ.