ಬದುಕಿನುದ್ದಕ್ಕೂ ಅಯ್ಯಪ್ಪ ಮಾಲೆ ಹಾಕಿದರೆ ಜನಸಂಖ್ಯೆ ಕಡಿಮೆಯಾಗುತ್ತೆ: ಹಂಪಿ ವಿವಿ ಕುಲಪತಿ

ಧಾರವಾಡ: ಬದುಕಿನುದ್ದಕ್ಕೂ ಅಯ್ಯಪ್ಪ ಮಾಲೆ ಹಾಕಿದರೆ ಜನಸಂಖ್ಯೆ ಕಡಿಮೆಯಾಗುತ್ತದೆ ಎಂದು ಹಂಪಿ ವಿಶ್ವವಿದ್ಯಾಲಯ ಕುಲಪತಿ ಡಾ.ಮಲ್ಲಿಕಾ ಘಂಟಿ ಹೇಳಿ ಅಚ್ಚರಿ ಮೂಡಿಸಿದ್ದಾರೆ.

ಡಾ.ಪಾಟೀಲ ಪುಟ್ಟಪ್ಪ ಜನ್ಮಶತಮಾನೋತ್ಸವದಲ್ಲಿ ಮಾತನಾಡುತ್ತಾ, ಪುರುಷರು ಬದುಕಿನುದ್ದಕ್ಕೂ ಮಾಲೆ ಹಾಕಿಕೊಂಡು ಬಿಡಲಿ. ಅಯ್ಯಪ್ಪನ ಧಿರಿಸಿನಲ್ಲಿದ್ದರೆ ಹೆಣ್ಣು ಮಕ್ಕಳ ಬಳಿ ಹೋಗಲು ಸಾಧ್ಯವಿಲ್ಲ. ಆಗ ಜನಸಂಖ್ಯೆ ತನ್ನಷ್ಟಕ್ಕೆ ತಾನೇ ಕಡಿಮೆ ಆಗುತ್ತೆ. ಮದ್ಯ ಸೇವನೆ ಚಟವೂ ನಿಂತು ಹೋಗುತ್ತದೆ ಎಂದಿದ್ದಾರೆ.

ಕುಡಿತ ಮತ್ತಿತರೆ ಚಟಗಳು ಕೂಡ ಮಾಲೆ ಹಾಕಿದರೆ ನಿಂತು‌ಹೋಗಿ ಬಿಡುತ್ತವೆ. ಹಾಗಾಗಿ ಎಲ್ಲರೂ ಅಯ್ಯಪ್ಪ ಮಾಲೆ ಧರಿಸಲಿ ಎಂದು ಅವರು, ಶಬರಿಮಲೆಗೆ ಮಹಿಳೆಯರ ಪ್ರವೇಶದ ನಂತರ ಶುದ್ಧೀಕರಣ ಕಾರ್ಯ ನಡೆದಿರುವುದು ಇದೇ ಮೊದಲಲ್ಲ. ಈ ಹಿಂದೆ ಬೇರೆಡೆಯೂ ಈ ಕಾರ್ಯಗಳು ನಡೆದಿವೆ ಎಂದರು. (ದಿಗ್ವಿಜಯ ನ್ಯೂಸ್)

2 Replies to “ಬದುಕಿನುದ್ದಕ್ಕೂ ಅಯ್ಯಪ್ಪ ಮಾಲೆ ಹಾಕಿದರೆ ಜನಸಂಖ್ಯೆ ಕಡಿಮೆಯಾಗುತ್ತೆ: ಹಂಪಿ ವಿವಿ ಕುಲಪತಿ”

  1. ಮೇಡಂ ಜನಸಂಖ್ಯೆ ಹೆಚ್ಚಾಗ್ತಿರೋದು ಕೇವಲ ಹಿಂದೂಗಳದ್ದು ಮಾತ್ರವಲ್ಲ. ಹಾಗೆ ನೋಡಿದರೆ ಪ್ರಮಾಣಕ್ಕನುಸಾರವಾಗಿ ಹೆಚ್ಚಳ ಎನಿಸುವಂತೆ ಹೆಚ್ಚಾಗತೊಡಗಿರುವುದು ಅಲ್ಪಸಂಖ್ಯಾತರೆಂದು ಹೇಳಿಕೊಳ್ಳುವ ಮುಸಲ್ಮಾನರು ಹಾಗೂ ಕ್ರೈಸ್ತರದ್ದು. ಅಲ್ಲದೇ ಅಪರಾಧ ಪ್ರಕರಣಗಳಲ್ಲಿ ಕೂಡಾ ಅವರ ಸಂಖ್ಯೆ ಹೆಚ್ಚಾಗಿದೆ. ಇದಕ್ಕೇನು ಹೇಳ್ತೀರಿ?

  2. ಜೀವನದುದ್ದಕ್ಕೂ ಅಯ್ಯಪ್ಪ ಮಾಲೆ ಧರಿಸಿ ವಿ. ವಿ. ಕುಲಪತಿಯವರ ಕುಟುಂಬದವರು ಮೊದಲು 20 ವರ್ಷಗಳ ವರೆಗೆ ಪಾಲಿಸಿ ತೋರಿಸಲಿ, ಅದರಂತೆ ಉಳಿದವರು ಪಾಲಿಸಬಹುದು.
    ಭಾಷಣ ಬಿಗಿಯಲು ನಮಗೂ ಬರುತ್ತೆ. ಅಧಿಕಾರದ ಮದ ತಲೆಗೆ ಏರಿದೆ, ಅದಕ್ಕೆ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ.

Comments are closed.