25 C
Bangalore
Thursday, November 14, 2019

ರೋಗಿ ಸಹವರ್ತಿಗೆ ಆಹಾರ

Latest News

ಈ ಪುಟ್ಟ ಪಕ್ಷಿಗಳು ಜಗತ್ತಿನ ಅತಿ ಸಣ್ಣ ಹಮ್ಮಿಂಗ್​ ಬರ್ಡ್​ಗಳಾ? ಅಸಲಿ ವಿಷಯ ಬೇರೆನೇ ಇದೆ…ಅಷ್ಟಕ್ಕೂ ಇವು ಏನು ಗೊತ್ತಾ?

ನವದೆಹಲಿ: ಮಾನವನ ಉಗುರಿಗಿಂತಲೂ ಸಣ್ಣ ಗಾತ್ರದ ಎರಡು ಪಕ್ಷಿಗಳ ಫೋಟೋ ಇಂಟರ್​ನೆಟ್​ನಲ್ಲಿ ವೈರಲ್​ ಆಗುತ್ತಿದೆ. ವ್ಯಕ್ತಿಯೋರ್ವನ ಹೆಬ್ಬೆರಳಿನ ಉಗುರಿನ ಮೇಲೆ ಹಾಗೂ ತೋರುಬೆರಳಿನ ಮೇಲೆ ಈ...

ಉಪ ಚುನಾವಣೆಯ 10 ಕ್ಷೇತ್ರಗಳ ಜೆಡಿಎಸ್​ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ: ನಾಳೆ 4 ಕ್ಷೇತ್ರಗಳ ಅಭ್ಯರ್ಥಿ ಹೆಸರು ಬಹಿರಂಗ

ಬೆಂಗಳೂರು: ಶಾಸಕರ ಅನರ್ಹತೆಯಿಂದ ತೆರವಾಗಿರುವ 17 ಕ್ಷೇತ್ರಗಳ ಉಪ ಚುನಾವಣೆಗೆ ಜೆಡಿಎಸ್​ 10 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಪಟ್ಟಿ ಪ್ರಕಟಿಸಿದೆ. ಪಕ್ಷದ ಕಚೇರಿ...

ನ್ಯಾಯಾಲಯದ ತೀರ್ಪಿಗೂ ಬೆಲೆಕೊಡದ ಪತಿ; ಪತ್ನಿಯನ್ನ ಮನೆಗೆ ಸೇರಿಸಲು ನಕಾರ

ಮಂಡ್ಯ: ವಿಚ್ಛೇದನ ಪಡೆಯಲು ನ್ಯಾಯಾಲಯದ ಮೆಟ್ಟಿಲೇರಿದ್ದ ಪತಿಗೆ ನ್ಯಾಯಾಲಯ ಪತ್ನಿಯನ್ನು ಮನೆಗೆ ಕರೆದುಕೊಂಡು ಹೋಗುವಂತೆ ತೀರ್ಪು ನೀಡಿ 10 ತಿಂಗಳು ಉರುಳಿದ್ದರೂ, ತನ್ನನ್ನು...

ವಿದ್ಯುಕ್ತವಾಗಿ ಬಿಜೆಪಿ ಸೇರಿದ 16 ಅನರ್ಹ ಶಾಸಕರು: ರೋಷನ್​ಬೇಗ್​ಗೆ ಇನ್ನೂ ಸಿಕ್ಕಿಲ್ಲ ಗ್ರೀನ್​ ಸಿಗ್ನಲ್​

ಬೆಂಗಳೂರು: ರಾಜ್ಯ ಬಿಜೆಪಿ ಕಚೇರಿಯಲ್ಲಿ 16 ಅನರ್ಹ ಶಾಸಕರು ಗುರುವಾರ ವಿದ್ಯುಕ್ತವಾಗಿ ಬಿಜೆಪಿ ಸೇರಿದರು. ಮಲ್ಲೇಶ್ವರಂನಲ್ಲಿರುವ ಪಕ್ಷದ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ...

ಮಧುಮೇಹ ನಿರ್ವಹಣೆ ಸುಲಭ: ನಿಯಂತ್ರಣ ತಪ್ಪಿದರೆ ಹುಟ್ಟುವ ಮಗುವಿಗೂ ಮಾರಕ

ಗರ್ಭಧಾರಣೆ ಸಂದರ್ಭದಲ್ಲಿ ಕಾಣಿಸಿಕೊಳ್ಳುವ ಮಧುಮೇಹವನ್ನು ನಿಯಂತ್ರಿಸಿಕೊಳ್ಳದಿದ್ದರೆ ತಾಯಿಗೆ ಮಾತ್ರವಲ್ಲ, ಹುಟ್ಟುವ ಮಗುವಿಗೂ ಅಪಾಯವಾಗಲಿದೆ. ಸಹಜ ಹೆರಿಗೆ ಕಷ್ಟವಾಗಲಿದ್ದು,...

ಭರತ್‌ರಾಜ್ ಸೊರಕೆ ಮಂಗಳೂರು

ನಗರದ ವೆನ್ಲಾಕ್ ಆಸ್ಪತ್ರೆ ಲಕ್ಷಾಂತರ ಬಡವರಿಗೆ ಚಿಕಿತ್ಸೆ ನೀಡಿರುವ ಆಸ್ಪತ್ರೆ. ಇಲ್ಲಿ ದಾಖಲಾಗುವ ರೋಗಿಗಳಿಗೆ ಸರ್ಕಾರದಿಂದಲೇ ಊಟೋಪಾಚಾರದ ವ್ಯವಸ್ಥೆಗಳಿವೆ. ಆದರೆ ಸಮಸ್ಯೆಯಾಗುವುದು ರೋಗಿಗಳ ಜತೆಗಾರರಿಗೆ.

ಇದನ್ನು ಮನಗಂಡ ಮಂಗಳೂರಿನ ಎಂ. ಫ್ರೆಂಡ್ಸ್ ಬಳಗ ಒಂದು ವರ್ಷದಿಂದ ರೋಗಿಗಳ ಜತೆಗಾರರಿಗೆ ರಾತ್ರಿಯ ಉಚಿತ ಆಹಾರ ಒದಗಿಸುವ ಶ್ರೇಷ್ಠ ಕಾರ್ಯ ನಡೆಸಿಕೊಂಡು ಬರುತ್ತಿದೆ. ‘ಕಾರುಣ್ಯ’ ಯೋಜನೆ ಹೆಸರಲ್ಲಿ ಹಸಿದವವರ ಪಾಲಿಗೆ ಅನ್ನದಾತವಾಗಿದ್ದಾರೆ.

ಎಂ ಫ್ರೆಂಡ್ಸ್ ಸದಸ್ಯರು 6 ವರ್ಷಗಳಿಂದ ವಿವಿಧ ಸೇವಾ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ಆಸ್ಪತ್ರೆ ಬಿಲ್ ಕಟ್ಟಲು ಅಸಹಾಯಕರಾದ ಬಡಕುಟುಂಬಗಳಿಗೆ ನೆರವು, ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸಹಕಾರ, ವೈದ್ಯಕೀಯ ಶಿಬಿರ, ರಕ್ತದಾನ, ಅಶಕ್ತರಿಗೆ ಕೊಡುಗೆ ಮೊದಲಾದ ಸೇವಾ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ಈವರೆಗೆ ಐವತ್ತು ಲಕ್ಷ ರೂ.ಗೂ ಅಧಿಕ ಹಣವನ್ನು ಸಮಾಜಸೇವೆಗೆ ಅರ್ಪಿಸಿದ್ದಾರೆ.

ವೆನ್ಲಾಕ್ ಆಸ್ಪತ್ರೆಗೆ ವಿವಿಧ ಸೇವಾ ಕಾರ್ಯಗಳನ್ನು ಮಾಡಲು ಸದಸ್ಯರು ಭೇಟಿ ಕೊಡುತ್ತಿದ್ದಾಗ ರೋಗಿಗಳ ಜತೆಗಿರುವವರಿಗೆ ರಾತ್ರಿ ಆಹಾರವಿಲ್ಲದಿರುವುದು ತಿಳಿದುಬಂದಿದೆ. ಆಸ್ಪತ್ರೆಗೆ ಉಡುಪಿ, ದಕ್ಷಿಣ ಕನ್ನಡ ಮಾತ್ರವಲ್ಲ, ಕಾಸರಗೋಡು, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ, ಭಟ್ಕಳ, ದಾವಣಗೆರೆ ಪ್ರದೇಶದಿಂದ ನಿತ್ಯ ನೂರಾರು ಮಂದಿ ಚಿಕಿತ್ಸೆಗೆಂದು ಬರುತ್ತಾರೆ. ಈ ಹಿನ್ನೆಲೆಯಲ್ಲಿ ವಿವಿಧ ಸಂಘಟನೆಗಳ ಮತ್ತು ದಾನಿಗಳ ಸಹಕಾರದೊಂದಿಗೆ ಉಪಹಾರದ ಯೋಜನೆಗೆ ಚಾಲನೆ ನೀಡಿದ್ದಾರೆ. ಈ ಯೋಜನೆ ಒಂದು ವರ್ಷ ಎರಡು ತಿಂಗಳಿನಿಂದ ಸರಾಗವಾಗಿ ನಡೆಯುತ್ತಿದೆ. ಇಲ್ಲಿ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ನಗರದ ಸ್ನೇಹಾಲಯದ ಜೋಸೆಫ್ ಮಾಡುತ್ತಿದ್ದಾರೆ.

ತಿಂಗಳಿಗೆ 2.5 ಲಕ್ಷ ರೂ. ವೆಚ್ಚ: ಪ್ರತಿದಿನ ಸಾಯಂಕಾಲ 6.30ರಿಂದ 7ರ ತನಕ ವೆನ್ಲಾಕ್ ಆಸ್ಪತ್ರೆಯ ಫಿಸಿಯೋಥೆರಪಿ ವಿಭಾಗ ಹಾಗೂ ಬರ್ನ್ಸ್ ಸೆಂಟರ್‌ನಲ್ಲಿ ರಾತ್ರಿಯ ಉಚಿತ ಉಪಹಾರ ನೀಡಲಾಗುತ್ತದೆ. ಒಂದು ದಿನ ಇಡ್ಲಿ ಸಾಂಬಾರು, ಇನ್ನೊಂದು ದಿನ ಚಪಾತಿ, ತರಕಾರಿ ಪಲ್ಯ ಒದಗಿಸುತ್ತಾರೆರೆ. ನಿತ್ಯ 400ರಿಂದ 500 ಮಂದಿ ಆಹಾರ ಸೇವಿಸುತ್ತಿದ್ದು, ಇದಕ್ಕೆ 7,500ರೂ. ಖರ್ಚಾಗುತ್ತದೆ. ತಿಂಗಳಿಗೆ ಸುಮಾರು 2 ಲಕ್ಷ 50 ಸಾವಿರ ರೂ. ವೆಚ್ಚವಾಗುತ್ತದೆ. ವಾರಕ್ಕೆ ಒಂದು ಸದಸ್ಯರ ತಂಡ ನಿರ್ವಹಣೆ ನಡೆಸುತ್ತದೆ.

ವಾಟ್ಸಾಪ್‌ನಿಂದ ಸಮಾಜಸೇವೆ ಕಡೆಗೆ: ಎಂ ಫ್ರೆಂಡ್ಸ್ 2013ರಲ್ಲಿ ಆರಂಭವಾದ ವಾಟ್ಸಾಪ್ ಗ್ರೂಪ್ ಆರಂಭದಲ್ಲಿ ಕಷ್ಟ,ಸುಖ ಹಂಚಿಕೊಳ್ಳುವುದಕ್ಕೆ ಸೀಮಿತವಾಗಿತ್ತು. ಬಳಿಕ ಸಾಮಾಜಿಕ ಸೇವಾ ಸಂಘಟನೆಯಾಗಿ ಬೆಳೆದಿದೆ. ಎಂ ಫ್ರೆಂಡ್ಸ್ ಎಂದರೆ ಮರ್ಸಿ (ಕರುಣೆ) ಫ್ರೆಂಡ್ಸ್ ಎಂದರ್ಥ. ಪ್ರಸ್ತುತ ಈ ತಂಡದಲ್ಲಿ ಕರಾವಳಿ ಜಿಲ್ಲೆ ಮಾತ್ರವಲ್ಲದೆ ಹಾಸನ, ಮಡಿಕೇರಿ, ಬೆಂಗಳೂರು ಮೊದಲಾದೆಡೆಯಿಂದ ವಿವಿಧ ಉದ್ಯೋಗದಲ್ಲಿರುವ 48 ಸಮಾನ ಮನಸ್ಕ ಸದಸ್ಯರಿದ್ದಾರೆ. ಈ ಪೈಕಿ 18 ಮಂದಿ ಎನ್‌ಆರ್‌ಐಗಳು. ಇವರ ಕಾರ್ಯಚಟುವಟಿಕೆ ಕಂಡು ಕೆಲವರು ಮಕ್ಕಳಹುಟ್ಟು ಹಬ್ಬ, ಮದುವೆ ವಾರ್ಷಿಕೋತ್ಸವದ ಹೆಸರಲ್ಲಿ ಈ ಸೇವಾ ಕಾರ್ಯಕ್ಕೆ ಕೊಡುಗೆ ನೀಡುತ್ತಾರೆ.

ಯಾರೂ ಆಹಾರವಿಲ್ಲದೆ ಹಸಿವಿನಿಂದ ಕೊರಗುವಂತಾಗಬಾರದು ಎಂಬುದು ನಮ್ಮ ಉದ್ದೇಶ. ಆಹಾರ ಸ್ವೀಕರಿಸಿದ ರೋಗಿಗಳ ಮನೆಯವರ ಮನಸ್ಸಿನ ಸಂತೃಪ್ತಿ ನಮಗೆ ನೆಮ್ಮದಿ ನೀಡುತ್ತದೆ. ಹಲವರ ಸಹಕಾದೊಂದಿಗೆ ಕಳೆದ ಒಂದು ವರ್ಷಗಳಿಂದ ಬಿಡದೆ ಈ ಸೇವಾ ಕಾರ್ಯ ನಡೆಯುತ್ತಿದೆ.
|ಮುಹಮ್ಮದ್ ಹನೀಫ್, ಗೋಳ್ತಮಜಲು ಎಂ. ಫ್ರೆಂಡ್ಸ್ ಅಧ್ಯಕ್ಷ

- Advertisement -

Stay connected

278,453FansLike
561FollowersFollow
607,000SubscribersSubscribe

ವಿಡಿಯೋ ನ್ಯೂಸ್

ಒಸಮಾ ಬಿನ್​ ಲಾಡೆನ್​,...

ಇಸ್ಲಮಾಬಾದ್​: ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನೆ ವಿರುದ್ಧ ಹೋರಾಡಲು ಕಾಶ್ಮೀರಿಗಳಿಗೆ ಉಗ್ರ ತರಬೇತಿ ನೀಡಲಾಗುತ್ತಿತ್ತು ಎಂಬುದನ್ನು ಪಾಕಿಸ್ತಾನದ ಮಾಜಿ ಅಧ್ಯಕ್ಷ, ಪಾಕ್​ ಸೇನೆಯ ಮಾಜಿ ಜನರಲ್​ ಫರ್ವೇಜ್​ ಮುಷರಫ್​ ಅವರು ಒಪ್ಪಿಕೊಂಡಿದ್ದಾರೆ....

VIDEO: ಅವಿಸ್ಮರಣೀಯ ಕ್ಷಣಗಳು:...

ಹ್ಯೂಸ್ಟನ್​: ಇಲ್ಲಿ ಭಾನುವಾರ ಆಯೋಜನೆಗೊಂಡಿದ್ದ ಹೌಡಿ ಮೋದಿ ಕಾರ್ಯಕ್ರಮ ಮುಗಿದ ಬಳಿಕ ವೇದಿಕೆಯಿಂದ ಇಳಿದ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ತೆರಳುತ್ತಿದ್ದರು. ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ...

VIDEO: ಅಮೆರಿಕ ತಲುಪಿದ...

ಹ್ಯೂಸ್ಟನ್​: ಪ್ರಧಾನಿ ನರೇಂದ್ರ ಮೋದಿ ಶನಿವಾರ ಅಮೆರಿಕ ತಲುಪಿದರು. ಹ್ಯೂಸ್ಟನ್​ನ ಜಾರ್ಜ್ ಬುಷ್​ ಇಂಟರ್​ಕಾಂಟಿನೆಂಟಲ್​ ಏರ್​ಪೋರ್ಟ್​ಗೆ ಬಂದಿಳಿದ ಅವರನ್ನು ಭಾರತದಲ್ಲಿನ ಅಮೆರಿಕ ರಾಯಭಾರಿ ಕೆನ್ನೆತ್​ ಜಸ್ಟರ್​, ಅಮೆರಿಕದಲ್ಲಿನ ಭಾರತದ ರಾಯಭಾರಿ...

ಹೈಕೋರ್ಟ್ ಜಡ್ಜ್​ ವಿರುದ್ಧ...

ಹೈದರಾಬಾದ್​: ಹೈಕೋರ್ಟ್​ನ ನಿವೃತ್ತ ನ್ಯಾಯಮೂರ್ತಿ ನೂಟಿ ರಾಮಮೋಹನ ರಾವ್​ ವಿರುದ್ಧ ಅವರ ಸೊಸೆಯೇ ಕೌಟುಂಬಿಕ ದೌರ್ಜನ್ಯದ ದೂರು ದಾಖಲಿಸಿದ್ದಾರೆ. ಬರೀ ಮಾವನ ವಿರುದ್ಧವಷ್ಟೇ ಅಲ್ಲದೆ, ಅತ್ತೆ ನೂಟಿ ದುರ್ಗಾ ಜಯ ಲಕ್ಷ್ಮೀ ಮತ್ತು...

ಉಪಚುನಾವಣೆಯಲ್ಲಿ ಮೈತ್ರಿ ಕುರಿತು...

ಬೆಂಗಳೂರು: ಉಪಚುನಾವಣೆಯಲ್ಲಿ ಎಲ್ಲಾ 15 ಕ್ಷೇತ್ರಗಳಲ್ಲಿ ಜೆಡಿಎಸ್​ ಏಕಾಂಗಿಯಾಗಿ ಸ್ಪರ್ಧಿಸಲಿದೆ. ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಚುನಾವಣೆ ಎದುರಿಸಲಾಗುವುದು ಎಂದು ಜೆಡಿಎಸ್​ ಟ್ವೀಟ್​ ಮಾಡಿದೆ. ಇದರ ಬೆನ್ನಲ್ಲೇ ಸುದ್ದಿಗೋಷ್ಠಿ ನಡೆಸಿದ...

ಮಸ್ಕಿ ಮತ್ತು ಆರ್​.ಆರ್​....

ಬೆಂಗಳೂರು: ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗಳ ಜತೆಯಲ್ಲೇ ರಾಜ್ಯದಲ್ಲಿ ತೆರವಾಗಿದ್ದ 17 ಕ್ಷೇತ್ರಗಳ ಪೈಕಿ 15 ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾಗಿದೆ. ಆದರೆ ಮಸ್ಕಿ ಮತ್ತು ರಾಜರಾಜೇಶ್ವರಿ ನಗರ ಕ್ಷೇತ್ರಗಳಿಗೆ ಚುನಾವಣಾ ಆಯೋಗ...

ಅಕ್ರಮ ಹಣ ಪತ್ತೆ...

ನವದೆಹಲಿ: ಅಕ್ರಮ ಹಣ ಪತ್ತೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾಗಿ ಸದ್ಯ ನ್ಯಾಯಾಂಗ ಬಂಧನದಲ್ಲಿರುವ ಡಿ.ಕೆ. ಶಿವಕುಮಾರ್ ಅವರ ಜಾಮೀನು ಅರ್ಜಿ ವಿಚಾರಣೆ ತೀರ್ಪನ್ನು ಸೆ.25ಕ್ಕೆ ಕಾಯ್ದಿರಿಸಲಾಗಿದೆ. ಇಂದು ಇ.ಡಿ. ವಿಶೇಷ...

VIDEO: ರೋಹಿತ್​ ಶರ್ಮಾ...

ಟೀಂ ಇಂಡಿಯಾ ಓಪನರ್​ ರೋಹಿತ್​ ಶರ್ಮಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಶಿಖರ್​ ಧವನ್​ ಅವರ ಕ್ಯೂಟ್​ ವಿಡಿಯೋವೊಂದನ್ನು ಶೇರ್ ಮಾಡಿದ್ದಾರೆ. ವಿಡಿಯೋವನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ. ಸಿಕ್ಕಾಪಟೆ, ಲೈಕ್ಸ್​, ಕಾಮೆಂಟ್ಸ್​ಗಳು ಬರುತ್ತಿವೆ. ರೋಹಿತ್​ ಶರ್ಮಾ ಹಾಗೂ...

VIDEO: ಹೊಸ ಟ್ರಾಫಿಕ್​...

ಸದ್ಯಕ್ಕಂತೂ ಹೊಸ ಮೋಟಾರು ವಾಹನ ಕಾಯ್ದೆಯಡಿ ಟ್ರಾಫಿಕ್​ ರೂಲ್ಸ್​ ಬ್ರೇಕ್​ ಮಾಡಿದವರಿಗೆ ವಿಧಿಸುತ್ತಿರುವ ದಂಡದ ಬಗ್ಗೆಯೇ ಚರ್ಚೆ. ಇದೇ ವಿಚಾರವಾಗಿ ಹಲವು ರೀತಿಯ ವಿಡಿಯೋಗಳು, ಮೆಸೇಜ್​ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿವೆ. ಮೊದಲಿದ್ದ...

VIDEO| ಈ​ ವಿಡಿಯೋ...

ಬೀಜಿಂಗ್​: ಕಣ್ಣಿಗೆ ಕಾಣುವುದೆಲ್ಲಾ ಸತ್ಯವಲ್ಲ ಎಂಬುದಕ್ಕೆ ಈ ಘಟನೆ ಒಳ್ಳೆಯ ಉದಾಹರಣೆ. ಚೀನಾದ ಯಾಂಗ್ಜೆ ನದಿಯಲ್ಲಿ ನಿಗೂಢವಾಗಿ ಹಾಗೂ ವಿಚಿತ್ರವಾಗಿ ಗೋಚರವಾದ ಕಪ್ಪುಬಣ್ಣದ ಜೀವಿಯನ್ನು ಹೋಲುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲ...