18 C
Bangalore
Friday, December 6, 2019

ಹೊರಹೋಗದ ಮಲೇಷ್ಯಾ ಹೊಯಿಗೆ

Latest News

ನೀರಿದೆ, ಪೂರೈಕೆ ವ್ಯವಸ್ಥೆ ಇಲ್ಲ

ಚಿಕ್ಕಮಗಳೂರು: ಈ ವರ್ಷ ಮಳೆ ಚೆನ್ನಾಗಿಯೇ ಆಗಿದೆ. ಎಲ್ಲ ನೀರಿನ ಮೂಲಗಳೂ ಭರ್ತಿಯಾಗಿವೆ. ನೀರು ಕೊಡಲು ಇನ್ನೇನು ಸಮಸ್ಯೆ? ನಾಗರಿಕರ ಇಂತಹ ಮಾತು,...

ಕುಕ್ಕರಹಳ್ಳಿ ಕೆರೆಯಲ್ಲಿ ಎರಡು ದ್ವೀಪ ನಿರ್ಮಿಸಿ

ಮೈಸೂರು: ಕುಕ್ಕರಹಳ್ಳಿ ಕೆರೆಯಲ್ಲಿ ಹೊಸದಾಗಿ ಎರಡು ದ್ವೀಪಗಳನ್ನು ನಿರ್ಮಾಣ ಮಾಡುವಂತೆ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದ ಮಾಜಿ ಸದಸ್ಯ ಡಾ.ಕೆ.ಎಂ.ಜಯರಾಮಯ್ಯ ಮೈಸೂರು...

ಅಖಾಡದಲ್ಲಿ ಕುರುಡು ಕಾಂಚಾಣದ ಸದ್ದು

ಮೈಸೂರು: ತೀವ್ರ ಕುತೂಹಲ ಕೆರಳಿಸಿರುವ ಹುಣಸೂರು ಅಖಾಡದಲ್ಲಿ ಕುರುಡು ಕಾಂಚಾಣದ ಸದ್ದು ಮಾಡಿರುವುದರ ಜತೆಗೆ ಹೆಂಡದ ಘಾಟು ಹೆಚ್ಚು ವಿಜೃಂಭಿಸಿದೆ! ಮತದಾರರನ್ನು ಸೆಳೆಯಲು ಇಲ್ಲಿ...

ಯುವತಿ ಮೇಲೆ ಹಲ್ಲೆ ನಡೆಸಿದ್ದ ಆರೋಪಿ ಸೆರೆ

ಮೈಸೂರು: ಪ್ರೀತಿಸಲು ನಿರಾಕರಿಸಿದ ಯುವತಿಯ ಮೇಲೆ ಹಲ್ಲೆ ನಡೆಸಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಪಿರಿಯಾಪಟ್ಟಣ ಮೂಲದ ಮಂಚೇಗೌಡನಕೊಪ್ಪಲು ನಿವಾಸಿ, ಖಾಸಗಿ ಕಂಪನಿಯ ಉದ್ಯೋಗಿ ಅಮೃತ್...

ಹುಣಸೂರು ಉಪಕದನ ಬಹುತೇಕ ಶಾಂತಿಯುತ

ಮೈಸೂರು: ಜಿದ್ದಾಜಿದ್ದಿನ ಕಣವಾಗಿರುವ ಹುಣಸೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಗುರುವಾರ ಶೇ.76ರಷ್ಟು ಮತದಾನವಾಗಿದೆ. 2018ರ ಸಾರ್ವತ್ರಿಕ ಚುನಾವಣೆಯಲ್ಲಿ ಶೇ.82.54ರಷ್ಟು ಮತ್ತು ಆರು ತಿಂಗಳ...

«ಲೋಡ್‌ಗೆ 25ಸಾವಿರ ರೂ! *ಸ್ಥಳೀಯವಾಗಿ ಲಭ್ಯವಾದ ಮರಳು»

ವೇಣುವಿನೋದ್ ಕೆ.ಎಸ್ ಮಂಗಳೂರು

ಒಂದೆಡೆ ದುಬಾರಿ ದರ…ಇನ್ನೊಂದೆಡೆ ಸ್ಥಳೀಯವಾಗಿ ಲಭ್ಯವಾಗುತ್ತಿರುವ ಮರಳು…ಇದರಿಂದಾಗಿ ಮಲೇಷ್ಯಾದಿಂದ ಆಮದು ಮಾಡಿಕೊಂಡಿರುವ ಟನ್‌ಗಟ್ಟಲೆ ಮರಳು ಬಂದರಿನಲ್ಲೇ ಉಳಿಯುವ ಸಾಧ್ಯತೆ ಗೋಚರಿಸಿದೆ.

ಇನ್ನೊಂದೆಡೆ ಕೇರಳ ರಾಜ್ಯಕ್ಕೆ ಜಿಲ್ಲೆಯಿಂದ ಕಳ್ಳ ಸಾಗಾಟ ತಡೆಗಟ್ಟಲು ಮಲೇಷ್ಯಾ ಮರಳನ್ನು ಅತ್ತ ಕಡೆಗೆ ಕಳುಹಿಸುವ ಪ್ರಯತ್ನವೂ ನಡೆದಿಲ್ಲ. ಈ ಬಗ್ಗೆ ಸೂಕ್ತ ಕಾನೂನನ್ನು ರಾಜ್ಯ ಸಚಿವ ಸಂಪುಟ ಕೈಗೊಳ್ಳುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಹೇಳಿದ್ದರೂ ಇದುವರೆಗೆ ಅಂತಹ ಪ್ರಯತ್ನಗಳು ಆಗಿಲ್ಲ.

ಸದ್ಯ ರಾಜ್ಯದ ಒಳಗಡೆ ಎಲ್ಲಿಗೆ ಬೇಕಾದರೂ ಮರಳು ಸಾಗಿಸಲು ಮಲೇಷ್ಯಾ ಮರಳು ಆಮದು ಮಾಡಿಕೊಂಡವರಿಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ಅನುಮತಿ ನೀಡಲಾಗಿದೆ. ಟನ್‌ಗೆ 2500 ರೂ.ನಂತೆ ಮಾರಾಟ ಮಾಡುವುದಕ್ಕೆ ಆಮದು ಸಂಸ್ಥೆಗಳು ತೀರ್ಮಾನ ಕೈಗೊಂಡಿವೆ. ಆದರೆ, ನಾಲ್ಕೈದು ಲೋಡ್‌ನಷ್ಟು ಮರಳು ಮಾತ್ರವೇ ಇದುವರೆಗೆ ನವಮಂಗಳೂರು ಬಂದರು ಯಾರ್ಡ್ ನಿಂದ ಹೊರಗೆ ಹೋಗಿದ್ದು ಬಿಟ್ಟರೆ ಉಳಿದ ಸಂಗ್ರಹ ಹಾಗೆಯೇ ಉಳಿದುಕೊಂಡಿದೆ.

25 ಸಾವಿರ ರೂ.ಯಾರು ಕೊಡ್ತಾರೆ!: ಟನ್‌ಗೆ 2500 ರೂ. ಎಂದರೆ ಒಂದು ಲೋಡ್ ಮರಳಿಗೆ ಸರಿಸುಮಾರು 25 ಸಾವಿರ ರೂ. ವರೆಗೆ ಆಗುತ್ತದೆ. ಇಷ್ಟು ಹಣ ಕೊಟ್ಟು ಸ್ಥಳೀಯರು ಯಾರೂ ಕೂಡಾ ಮರಳು ಖರೀದಿಸುವ ಸಾಧ್ಯತೆ ಇಲ್ಲ. ಇದನ್ನು ಬೆಂಗಳೂರಿಗೆ ಕಳುಹಿಸುವಾಗ ಅದರ ಸಾರಿಗೆ ದರವೂ ಸೇರಿಕೊಂಡು ದುಬಾರಿಯಾಗುತ್ತದೆ. ಸ್ಥಳೀಯವಾಗಿ ಈಗ ಮರಳು ಲಭ್ಯತೆ ಹೆಚ್ಚಾಗಿರುವುದರಿಂದ ಸ್ಥಳೀಯ ಮರಳನ್ನೇ ಜನ ಬಯಸುತ್ತಾರೆ. 10 ದಿನಗಳಿಂದ ಅಧಿಕೃತವಾಗಿ ಸಿಆರ್‌ಝಡ್ ಪ್ರದೇಶಗಳಲ್ಲಿ ಮರಳು ತೆರವು ಪ್ರಾರಂಭಗೊಂಡಿದ್ದು ರಾತ್ರಿ ಹಗಲು ಎಗ್ಗಿಲ್ಲದೆ ಮರಳು ತೆಗೆಯಲಾಗುತ್ತಿದೆ. ಹಾಗಾಗಿ ಮರಳು ಪೂರೈಕೆ ಸುಗಮವಾಗುತ್ತಿದೆ.

ಮರಳು ವಿಲೇವಾರಿಗೆ ಪ್ರಯತ್ನ ಮಾಡಿದ್ದ ಮಲೇಷ್ಯಾ ಮರಳು ಆಮದುದಾರರು ಮಾಧ್ಯಮಗಳಲ್ಲಿ ಜಾಹಿರಾತು ನೀಡಿದ್ದರು. ಪ್ರಾರಂಭದಲ್ಲಿ ಸಿಆರ್‌ಝಡ್ ಮರಳು ಇಲ್ಲದೆ ಮರಳು ಪೂರೈಕೆ ಆಗದ ಹಿನ್ನೆಲೆಯಲ್ಲಿ ಬೆರಳೆಣಿಕೆ ಜನ ಈ ಮರಳನ್ನು ದುಬಾರಿ ಹಣ ತೆತ್ತು ಖರೀದಿಸಿದ್ದರು. ಆದರೆ ಸದ್ಯಕ್ಕೆ ಈ ಮರಳನ್ನು ಯಾರೂ ಖರೀದಿಸುವ ಸಾಧ್ಯತೆ ಇಲ್ಲ.

ಪ್ರಾರಂಭದಲ್ಲಿ ಮಲೇಷ್ಯಾ ಮರಳನ್ನು ಚೀಲಕ್ಕೆ ತುಂಬಿಸಿ ಮಾರಾಟ ಮಾಡಬೇಕು ಎಂಬ ಷರತ್ತು ವಿಧಿಸಲಾಗಿತ್ತು. ಆದರೆ ಆ ಬಳಿಕ ಅದನ್ನು ಸರ್ಕಾರ ಸಡಿಲಿಕೆ ಮಾಡಿತ್ತು. ಇಲ್ಲವಾದರೆ ಇನ್ನೂ ದುಬಾರಿಯಾಗುವ ಸಾಧ್ಯತೆ ಇತ್ತು. ಸದ್ಯ ಲಾರಿಗಳಲ್ಲಿ ಲೂಸ್ ಆಗಿಯೇ ಮರಳನ್ನು ಸಾಗಾಟ ಮಾಡಲು ಅನುಮತಿ ನೀಡಿದೆ.

ನಾಲ್ವರು ಆಮದುದಾರರು: ಇದುವರೆಗೆ ನಾಲ್ಕು ಮಂದಿ ಮರಳು ಆಮದುದಾರರು ಮಲೇಷ್ಯಾದಿಂದ ಮರಳು ಆಮದು ಮಾಡಿಕೊಂಡಿದ್ದಾರೆ. ಎಲ್ಲರೂ ಸೇರಿದಂತೆ ಒಟ್ಟು ಸುಮಾರು ಒಂದೂವರೆ ಲಕ್ಷ ಮೆಟ್ರಿಕ್ ಟನ್ ಮರಳು ಸದ್ಯ ಎನ್‌ಎಂಪಿ ಯಾರ್ಡ್‌ನಲ್ಲಿ ಇದೆ.

ಸ್ಥಳೀಯವಾಗಿ ಮರಳು ಕಡಿಮೆ ದರಕ್ಕೆ ಸಿಗುತ್ತಿದೆ, ತೀರಾ ದುಬಾರಿಯಾಗಿರುವ ಮಲೇಷ್ಯಾ ಮರಳು ಸದ್ಯ ಯಾರೂ ಖರೀದಿಸುವಂತೆ ಕಾಣುತ್ತಿಲ್ಲ.
-ಯು.ಟಿ.ಖಾದರ್, ಜಿಲ್ಲಾ ಉಸ್ತುವಾರಿ ಸಚಿವರು

Stay connected

278,730FansLike
580FollowersFollow
619,000SubscribersSubscribe

ವಿಡಿಯೋ ನ್ಯೂಸ್

ಉಪಚುನಾವಣೆ ಮತದಾನ ಅಂತ್ಯ: ಮತಗಟ್ಟೆ ಸಮೀಕ್ಷೆಯಲ್ಲಿ ಬಿಜೆಪಿಯದ್ದೇ ಮೇಲುಗೈ

ಬೆಂಗಳೂರು: ರಾಜ್ಯದ 15 ಕ್ಷೇತ್ರಗಳ ಉಪಚುನಾವಣೆಯ ಮತದಾನ ಪ್ರಕ್ರಿಯೆ ಗುರುವಾರ ಸಂಜೆ 6 ಗಂಟೆಗೆ ಪೂರ್ಣಗೊಂಡಿತು. ಸಣ್ಣಪುಟ್ಟ ಗಲಾಟೆಗಳು ಹಾಗೂ ಅಲ್ಲಲ್ಲಿ ಕೆಲ ಇವಿಎಂಗಳ ದೋಷ ಹೊರತುಪಡಿಸಿದರೆ ಉಪಚುನಾವಣೆಯ ಮತದಾನ...

VIDEO| ವಿಕೆಟ್​ ಕಿತ್ತ ಖುಷಿಯಲ್ಲಿ ಕರವಸ್ತ್ರವನ್ನು ಕಡ್ಡಿಯನ್ನಾಗಿಸಿ ಸಂಭ್ರಮ: ಬೌಲರ್​ನ...

ನವದೆಹಲಿ: ಯಾವುದೇ ಆಟವಾಗಿರಲಿ ಆಟಗಾರರಿಗೆ ತಮ್ಮ ಸಂಭ್ರಮದ ಕ್ಷಣ ಸ್ಮರಣೀಯವಾಗಿರುತ್ತದೆ. ಹಲವರು ವಿಭಿನ್ನ ರೀತಿಯಲ್ಲಿ ಸಂಭ್ರಮಿಸುವ ಪ್ರಯತ್ನವನ್ನು ಮೈದಾನದಲ್ಲಿ ಮಾಡುತ್ತಿರುತ್ತಾರೆ. ಇದೀಗ ದಕ್ಷಿಣ ಆಫ್ರಿಕಾ ಬೌಲರ್​ ಒಬ್ಬರು ವಿಕೆಟ್​ ಪಡೆದ...

VIDEO| 3ನೇ ಮಹಡಿಯಿಂದ ಬಿದ್ದರೂ ಗಾಯವಾಗದೇ ಬದುಕುಳಿದ 2 ವರ್ಷದ...

ಪಂಜಿಮ್​: ದಮನ್ ಮತ್ತು ದಿಯುನಲ್ಲಿರುವ ಹೌಸಿಂಗ್​ ಕಾಂಪ್ಲೆಕ್ಸ್​ನ ಮೂರನೇ ಮಹಡಿಯಿಂದ ಕೆಳಗೆ ಬಿದ್ದ ಎರಡು ವರ್ಷದ ಮಗುವೊಂದು ಪವಾಡ ರೀತಿಯಲ್ಲಿ ಬದುಕುಳಿದಿರುವ ಘಟನೆ ನಡೆದಿದ್ದು, ಇದಕ್ಕೆ ಸಂಬಂಧಪಟ್ಟ ವಿಡಿಯೋ ಸಾಮಾಜಿಕ...

‘ಅಬುಧಾಬಿ ಯುವರಾಜ ಮತ್ತು ಪುಟ್ಟ ಬಾಲಕಿ’ಯ ಭಾವನಾತ್ಮಕ ಕತೆಯಿದು…; ನಿರಾಸೆಗೊಂಡ...

ಈ ಸುದ್ದಿ ಓದಿ, ವಿಡಿಯೋ ನೋಡಿದರೆ ಒಂದು ಕ್ಷಣ ಹೃದಯಕ್ಕೆ ತಟ್ಟುತ್ತದೆ. ಪುಟ್ಟ ಹುಡುಗಿಯ ನಿರಾಸೆ ಮತ್ತು ಅಬುಧಾಬಿಯ ಯುವರಾಜ ಶೇಖ್​ ಮೊಹಮ್ಮದ್​ ಬಿನ್​​ ಜಾಯೇದ್​ ಅವರ ಮೃದು ಮನಸು ಇಲ್ಲಿ ಅನಾವರಣಗೊಂಡಿದೆ. ಸೌದಿ...

VIDEO| ಪಶುವೈದ್ಯೆ ಅತ್ಯಾಚಾರ, ಕೊಲೆ ಪ್ರಕರಣದ ಆರೋಪಿಗಳ ವಿಚಾರವಾಗಿ ಪ್ರಧಾನಿ...

ಮುಂಬೈ: ತೆಲಂಗಾಣದಲ್ಲಿ ನಡೆದ ಮಹಿಳಾ ಪಶುವೈದ್ಯಾಧಿಕಾರಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಇಡೀ ದೇಶವೇ ಖಂಡಿಸಿದ್ದು, ಆರೋಪಿಗಳಿಗೆ ಘೋರ ಶಿಕ್ಷೆಯಾಗಬೇಕೆಂಬ ಒಕ್ಕೊರಲು ಅಭಿಪ್ರಾಯ ವ್ಯಕ್ತವಾಗುತ್ತಿದೆ. ಭಾರತೀಯ ಸಿನಿಮಾ ರಂಗದ ತಾರೆಯರು ಕೂಡ...

VIDEO| ಸಫಾರಿ ವಾಹನವನ್ನು ಹಿಮ್ಮೆಟ್ಟಿ ಬಂದ ಹುಲಿ ವಿಡಿಯೋ ವೈರಲ್​:...

ಸವಾಯಿ ಮಧೊಪುರ್​: ರಾಜಸ್ಥಾನದ ರಣಥಂಬೋರ್​ ರಾಷ್ಟ್ರೀಯ ಉದ್ಯಾನವನದಲ್ಲಿ ಹೆಣ್ಣು ಹುಲಿಯೊಂದು ಪ್ರವಾಸಿಗರಿದ್ದ ಸಫಾರಿ ಜೀಪ್​ ಅನ್ನು ಹಿಮ್ಮೆಟ್ಟಿಸಿಕೊಂಡು ಬಂದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ವಿಡಿಯೋದಲ್ಲಿರುವ ಹುಲಿಯನ್ನು ಕೋಡ್​...