ಎಂ.ಎಂ.ಹಿಲ್ಸ್​ನಲ್ಲಿ ತಪ್ಪಿದ ಭಾರಿ ಅನಾಹುತ: ಸ್ಟೀರಿಂಗ್​ ತುಂಡಾಗಿ ಪ್ರಪಾತಕ್ಕೆ ಬೀಳ್ಬೇಕಿದ್ದ ಬಸ್ ಚಾಲಕ​ ಸಮಯ ಪ್ರಜ್ಞೆಯಿಂದ ಬಚಾವ್​!

ಚಾಮರಾಜನಗರ: ರಾಜ್ಯ ರಸ್ತೆ ಸಾರಿಗೆ ಬಸ್​(ಕೆ.ಎಸ್​.ಆರ್​.ಟಿ.ಸಿ.) ಸ್ಟೀರಿಂಗ್​ ತುಂಡಾಗಿ ಮರಕ್ಕೆ ಡಿಕ್ಕಿ ಹೊಡೆದಿರುವ ಘಟನೆ ಪ್ರಸಿದ್ಧ ಮಲೆಮಹದೇಶ್ವರ ಬೆಟ್ಟದಲ್ಲಿ ನಡೆದಿದ್ದು, ಚಾಲಕನ ಸಮಯ ಪ್ರಜ್ಞೆಯಿಂದ 50 ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮಹದೇಶ್ವರಬೆಟ್ಟದ ತಾಳುಬೆಟ್ಟ-ಕೋಣನಕೆರೆ ಮಾರ್ಗದಲ್ಲಿ ನಿನ್ನೆ(ಮಂಗಳವಾರ) ಸಂಜೆ ಘಟನೆ ನಡೆದಿದ್ದು, ಸ್ಟೀರಿಂಗ್​ ಕಟ್​ ಆಗಿ ಪ್ರಪಾತಕ್ಕೆ ಬೀಳಬೇಕಿದ್ದ ಬಸ್‌ನ್ನು ಚಾಲಕ ತನ್ನ ಸಮಯ ಪ್ರಜ್ಞೆಯಿಂದ ಮರಕ್ಕೆ ಡಿಕ್ಕಿ ಹೊಡೆಸಿ ತಡೆದಿದ್ದಾನೆ.

ಘಟನೆಯಲ್ಲಿ ಡ್ರೈವರ್ ಸೇರಿದಂತೆ 6 ಮಂದಿಗೆ ಗಾಯವಾಗಿದ್ದು, ಗಂಗಾಧರ, ಇಂದ್ರಮ್ಮ, ಸಿದ್ದಯ್ಯ, ಮಹೇಶ್, ಯೋಗಿಣಿ, ಬೆನಕಗೌಡ ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನು ಕೊಳ್ಳೇಗಾಲ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಅವಘಡಕ್ಕೆ ಬಸ್‌ ಹದಗೆಟ್ಟಿರುವುದೇ ಮೂಲ ಕಾರಣ ಎಂದು ಹೇಳಲಾಗುತ್ತಿದೆ. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *