20.4 C
Bengaluru
Sunday, January 19, 2020

ಟಿ20 ಇತಿಹಾಸದಲ್ಲಿ ಮಾಲ್ಡೀವ್ಸ್​ ತಂಡದ ವಿನೂತನ ದಾಖಲೆ: 8 ರನ್​ಗೆ ಆಲೌಟ್​, 9 ಡಕೌಟ್, ಇತರೆ 7 ರನ್​!​

Latest News

ಎಲ್ಲರ ಬಾಯಿಗೆ ಬೀಗ ಹಾಕಿದ ಅಮಿತ್ ಷಾ

ಹುಬ್ಬಳ್ಳಿ: ರಾತ್ರಿ ಹುಬ್ಬಳ್ಳಿಯಲ್ಲಿ ವಾಸ್ತವ್ಯ ಮಾಡಿದ ಅಮಿತ್ ಷಾ, ಪಕ್ಷದ ಧಾರವಾಡ, ಹಾವೇರಿ, ಗದಗ ಜಿಲ್ಲೆಯ ಪದಾಧಿಕಾರಿಗಳೊಂದಿಗೆ ರಾತ್ರಿಯ ಭೋಜನ ಸವಿದರು.

ತುಂಗಭದ್ರಾ ನದಿಯಲ್ಲಿ ದಂಪತಿ ಶವ ಪತ್ತೆ

ಗುತ್ತಲ: ದಂಪತಿ ಶವಗಳು ಸಮೀಪದ ಹಾವೇರಿ- ಬಳ್ಳಾರಿ ಜಿಲ್ಲೆಗಳ ಸಂಪರ್ಕ ಸೇತುವೆ ಕಳೆಗೆ ತುಂಗಭದ್ರಾ ನದಿಯಲ್ಲಿ ಶನಿವಾರ ಬೆಳಗ್ಗೆ ಪತ್ತೆಯಾಗಿವೆ.

ಅಭಿವೃದ್ಧಿ ಕಾರ್ಯಗಳಿಗೆ ಸಹಕರಿಸಿ

ಹಾನಗಲ್ಲ: ನೌಕರರು ಸರ್ಕಾರಕ್ಕೆ ಬೇಡಿಕೆ ಇಡುವ ಜತೆಗೆ ಅಭಿವೃದ್ಧಿ ಕಾರ್ಯಗಳಿಗೂ ಪ್ರಾಮಾಣಿಕವಾಗಿ ಸಹಕರಿಸಬೇಕು. ಸರ್ಕಾರ-ನೌಕರರ ಸಂಘಟನೆ ಒಂದಾಗಿ ಶ್ರಮಿಸಬೇಕು ಎಂದು ಸರ್ಕಾರಿ ನೌಕರರ...

ಸಂಸ್ಕೃತಿ, ಪರಂಪರೆ ಬೆಳೆಸಲು ಹೋರಾಟ ಅಗತ್ಯ

ರಾಣೆಬೆನ್ನೂರ: ಧರ್ಮ-ಅಧರ್ಮ, ಪರಕೀಯರ ಆಕ್ರಮಣದಿಂದ ಹಾಗೂ ಜಾತಿ, ಭೇದ-ಭಾವ ಹೋಗಲಾಡಿಸುವುದು ಸೇರಿ ಪ್ರತಿ ಹೋರಾಟದಲ್ಲೂ ಕರ್ನಾಟಕದ ಪಾತ್ರ ಬಹುಮುಖ್ಯವಾಗಿದೆ ಎಂದು ರಾಷ್ಟ್ರೀಯ ಸ್ವಯಂ...

ಅಂಗವಿಕಲರಿಗೆ ಪ್ರಥಮ ಆದ್ಯತೆ ನೀಡಿ

ಹಾವೇರಿ: ಅಂಗವಿಕಲರಿಗೆ ಎಲ್ಲ ಯೋಜನೆಗಳಲ್ಲಿ ಪ್ರಥಮ ಆದ್ಯತೆ ನೀಡುವ ಮೂಲಕ ಅವರನ್ನು ಆರ್ಥಿಕವಾಗಿ ಸದೃಢರನ್ನಾಗಿ ಮಾಡಬೇಕು ಎಂದು ಅಂಗವಿಕಲ ವ್ಯಕ್ತಿಗಳ ಅಧಿನಿಯಮದ ಆಯುಕ್ತ...

ಕಾಠ್ಮಂಡು: ನೇಪಾಳದಲ್ಲಿ ಕಾಠ್ಮಂಡುವಿನಲ್ಲಿ ನಡೆಯುತ್ತಿರುವ 13ನೇ ದಕ್ಷಿಣ ಏಷ್ಯನ್​ ಗೇಮ್ಸ್​ನಲ್ಲಿ ಮಾಲ್ಡೀವ್ಸ್​ನ ಮಹಿಳಾ ಕ್ರಿಕೆಟ್​ ತಂಡವು ನೇಪಾಳ ಮಹಿಳಾ ಕ್ರಿಕೆಟ್​ ತಂಡದ ಎದುರು ಯಾರು ನಿರೀಕ್ಷಿಸದ ದಾಖಲೆಯೊಂದನ್ನು ಮಾಡಿದೆ.

ಶನಿವಾರ ನಡೆದ ಪಂದ್ಯದಲ್ಲಿ ಮಾಲ್ಡೀವ್ಸ್​ ತಂಡ ಒಂದಂಕಿಗೆ ಆಲೌಟ್​ ಆಗುವ ಮೂಲಕ ಕ್ರಿಕೆಟ್​ ಇತಿಹಾಸ ಪುಟವನ್ನು ಸೇರಿಕೊಂಡಿದೆ. ವಿಶೇಷವೆಂದರೆ ತಂಡದ ಹನ್ನೊಂದು ಆಟಗಾರರ ಪೈಕಿ 9 ಮಂದಿ ಶೂನ್ಯ ಸಂಪಾದಿಸಿದ್ದು, ಇದು ಕೂಡ ದಾಖಲೆಯ ಪುಟಕ್ಕೆ ಸೇರಿದೆ. 1 ರನ್​ ಗಳಿಸಿದ ಆಟಗಾರನೇ ತಂಡದ ಟಾಪ್​ ಸ್ಕೋರರ್​ ಆಗಿದ್ದು ಮತ್ತೊಂದು ವಿಶೇಷವಾಗಿದೆ.

ಟಾಸ್​ ಗೆದ್ದು ಬ್ಯಾಟಿಂಗ್​ ಆರಂಭಿಸಿದ ಮಾಲ್ಡೀವ್ಸ್​ ಆರಂಭದಿಂದಲೇ ಪೆವಲಿಯನ್​ ಪರೇಡ್​ ನಡೆಸಿತು. ಅಂತಿಮವಾಗಿ 8 ರನ್​ಗೆ ಆಲೌಟ್​ ಆಯಿತು.​ ಇದೇ ವೇಳೆ ಮಾಲ್ಡೀವ್ಸ್​ನ ಐಮಾ ಐಶತ 12 ಎಸೆತಗಳಲ್ಲಿ 1 ರನ್​ ಗಳಿಸುವ ಮೂಲಕ ತಂಡದ ಟಾಪ್​ ಸ್ಕೋರರ್​​ ಆಗಿ ಹೊರಹೊಮ್ಮಿದರು. 11.3 ಓವರ್​ಗಳಲ್ಲಿ ಕೇವಲ 8 ರನ್​ ಗಳಿಸಿದ ಮಾಲ್ಡೀವ್ಸ್​ ತಂಡಕ್ಕೆ ವೈಡ್​ ಮೂಲಕವೇ ಇತರೆ 7 ರನ್ ಬಂದಿತು. ಈ ಮೂಲಕ ಮಹಿಳಾ ಟಿ20 ಇತಿಹಾಸದಲ್ಲಿ ಕಡಿಮೆ ರನ್​ಗೆ ಆಲೌಟ್​ ಆದ ಎರಡನೇ ತಂಡವೆಂಬ ಹೆಸರನ್ನು ಮಾಲ್ಡಿವ್ಸ್​ ಹೊಂದಿತು. ಜೂನ್​ನಲ್ಲಿ ರವಾಂಡ ದೇಶದ ಎದುರು ಮಾಲಿ 6 ರನ್​ಗೆ ಆಲೌಟ್​ ಆಗಿತ್ತು.

ಮಾಲ್ಡೀವ್ಸ್​ ನೀಡಿದ ಅತಿ ಸಾಧಾರಣ ಗುರಿಯನ್ನು ಬೆನ್ನತ್ತಿದ ನೇಪಾಳ ಕೇವಲ 7 ಎಸೆತದಲ್ಲೇ ತಲುಪಿತು. ಆರಂಭಿಕರಾಗಿ ಕಣಕ್ಕಿಳಿದ ಕಾಜಲ್​ ಶ್ರೇಷ್ಠ ಮತ್ತು ರೋಮ ಥಾಪ್ರಾ ವಿಕೆಟ್​ ನೀಡದೆ ಗುರಿ ಮುಟ್ಟಿದರು. (ಏಜೆನ್ಸೀಸ್​)

ವಿಡಿಯೋ ನ್ಯೂಸ್

VIDEO| ತನ್ನ ಆಹಾರವನ್ನು ಮೀನು ಬಾಯಿಗಿಡುವ ಬಾತುಕೋಳಿ: ವೈರಲ್​ ವಿಡಿಯೋ...

ನವದೆಹಲಿ: ಪ್ರಾಣಿಗಳ ನಡುವಿನ ಅನ್ಯೋನ್ಯತೆಗೆ ಸಂಬಂಧಿಸಿದ ಸಾಕಷ್ಟು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇವೆ. ಅದರಲ್ಲೂ ಪರಸ್ಪರ ವೈರುಧ್ಯವುಳ್ಳ ಜೀವಿಗಳೆರಡು ಒಂದಕ್ಕೊಂದು ಪೋಷಿಸುವುದನ್ನು ನೋಡಿದರೆ ಅಚ್ಚರಿಯಾಗದೇ ಇರದು. ಅಂತಹದ್ದೇ ವಿಡಿಯೋವೊಂದು ಇದೀಗ...

VIDEO| ನಾವೆಲ್ಲ ಕಾಳಿಯನ್ನು ಪೂಜಿಸುವವರು, ನಮಗೆ ಮೃತ್ಯು ಬಹಳ ದೊಡ್ಡ...

ಬೆಂಗಳೂರು: ಯುವ ಬ್ರಿಗೇಡ್​ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹಾಗೂ ಸಂಸದ ತೇಜಸ್ವಿಸೂರ್ಯ ಸೇರಿದಂತೆ ಹಿಂದು ಮುಖಂಡರ ಹತ್ಯೆಗೆ ಸಂಚು ನಡೆಸಿರುವ ಆಘಾತಕಾರಿ ಘಟನೆ ಬಯಲಾಗಿ, 6 ಮಂದಿಯನ್ನು ಬಂಧಿಸದ ಬೆನ್ನಲ್ಲೇ...

VIDEO| ಮಗಳ ಸಾವನ್ನು ಮುಂದಿಟ್ಟಕೊಂಡು ರಾಜಕೀಯ ಮಾಡುತ್ತಿದ್ದಾರೆ; ನಿರ್ಭಯಾ ಪ್ರಕರಣದ...

ನವದೆಹಲಿ: ನಿರ್ಭಯಾ ಪ್ರಕರಣ ಅಪರಾಧಿಗಳ ಗಲ್ಲು ಮುಂದೂಡುತ್ತಿರುವುದಕ್ಕೆ ಸಂತ್ರಸ್ಥೆ ತಾಯಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಮಾಧ್ಯಮಗಳ ಜತೆ ಮಾತನಾಡಿದ ಅವರು, ಈವರಗೆ ನಾನು ರಾಜಕೀಯದ ಬಗ್ಗೆ ಮಾತನಾಡಿಲ್ಲ. 2012ರಲ್ಲಿ ಪ್ರಕರಣ ನಡೆದಾಗ, ಅದನ್ನು ಖಂಡಿಸಿ...

VIDEO: ಪಕ್ಕೆಲುಬು ಆಯ್ತು…ಈಗ ಪುಳಿಯೊಗರೆ; ಮತ್ತೊಂದು ಸರ್ಕಾರಿ ಶಾಲೆಯಿಂದ ಹೊರಬಿತ್ತು...

ಸಕಲೇಶಪುರ: ಪಕ್ಕೆಲುಬು ಹೇಳಲು ಬಾರದ ವಿದ್ಯಾರ್ಥಿಯ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಮೂಲಕ ಶಿಕ್ಷಕನೋರ್ವ ವಿವಾದ ಸೃಷ್ಟಿಸಿದ್ದ. ಬಾಲಕ ಪಕ್ಕೆಲುಬು ಹೇಳಲಾಗದೆ ಕಷ್ಟಪಡುತ್ತಿದ್ದರೆ ಅದನ್ನು ವಿಡಿಯೋ ಮಾಡಿದ್ದ ಕುರುವತ್ತಿ ಸರ್ಕಾರಿ ಹಿರಿಯ ಪ್ರಾಥಮಿಕ...

ವಿಶ್ವಕಪ್​ನಲ್ಲಿ ಇಡೀ ಜಗತ್ತಿನ ಗಮನಸೆಳೆದಿದ್ದ ಟೀಂ ಇಂಡಿಯಾ ಸೂಪರ್​ ಫ್ಯಾನ್​...

ನವದೆಹಲಿ: ಕಳೆದ ವಿಶ್ವಕಪ್​ನಲ್ಲಿ ಇಡೀ ಜಗತ್ತಿನ ಗಮನ ಸೆಳೆದಿದ್ದ ಟೀಂ ಇಂಡಿಯಾದ ಸೂಪರ್​ ಫ್ಯಾನ್​ ಚಾರುಲತಾ ಪಟೇಲ್​ (87) ನಿಧನರಾಗಿದ್ದಾರೆ. 2019ರಲ್ಲಿ ವಿಶ್ವಕಪ್​ನಲ್ಲಿ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯದಲ್ಲಿ ಚಾರುಲತಾ ಪಟೇಲ್​ ಕ್ಯಾಮರಾಕಣ್ಣಿಗೆ...

VIDEO| ಭೀಕರ ಕಾಡ್ಗಿಚ್ಚಿಗೆ ತುತ್ತಾಗಿರೋ ಆಸ್ಟ್ರೇಲಿಯಾ ಮೇಲೆ ವರುಣನ ಕೃಪೆ:...

ಸಿಡ್ನಿ: ಭೀಕರ ಕಾಡ್ಗಿಚ್ಚಿಗೆ ತುತ್ತಾಗಿರುವ ಕಾಂಗರೂ ನಾಡು ಆಸ್ಟ್ರೇಲಿಯಾ ಮೇಲೆ ಇದೀಗ ವರುಣ ದೇವ ಕೃಪೆ ತೋರಿದ್ದಾನೆ. ಇದರ ನಡುವೆ 18 ತಿಂಗಳ ಮಗುವೊಂದು ಮೊದಲ ಬಾರಿಗೆ ಮಳೆ ಸುರಿಯುವುದನ್ನು...