ಪಬ್​ಜಿ ಗೇಮ್ ಚಟಕ್ಕೆ ಬಿದ್ದು ನಾಲ್ಕು ತಿಂಗಳ ಗರ್ಭಿಣಿ ಪತ್ನಿ ಹಾಗೂ ಮಗುವನ್ನು ತೊರೆದ

ಕೌಲಾಲಂಪುರ: ಆನ್​ಲೈನ್​ ಪಬ್​ಜಿ ಗೇಮ್ ಚಟಕ್ಕೆ ಒಳಗಾದ ಮಲೇಷ್ಯಾದ ವ್ಯಕ್ತಿಯೊಬ್ಬ ತನ್ನ ನಾಲ್ಕು ತಿಂಗಳ ಗರ್ಭಿಣಿ ಹೆಂಡತಿ ಹಾಗೂ ಮಗುವನ್ನು ಬಿಟ್ಟು ಮನೆಯಿಂದ ದೂರವಾಗಿದ್ದಾನೆ.​

ಗೇಮ್​ ಪರಿಚಯವಾದಾಗಿನಿಂದ ಆತ ಗೇಮ್​ಗೆ ದಾಸನಾಗಿಬಿಟ್ಟಿದ್ದ. ಇದರಿಂದಾಗಿ ಆತ ತನ್ನ ಮನೆಯವರ ಮಾತನ್ನೇ ಕೇಳದಂತಾಗಿದ್ದ. ಕುಟುಂಬದವರ ಜತೆ ಪದೇಪದೇ ಜಗಳವಾಡುತ್ತಿದ್ದ ಎಂದು ಮಲೇಷ್ಯಾದ ವೆಬ್​ಸೈಟ್​ ಒಂದು ವರದಿ ಮಾಡಿದೆ.

ಗೇಮ್​ ದಾಸನಾಗಿದ್ದ ಆತನಿಗೆ ಬೆಳಗ್ಗೆ ಏಳುವುದೇ ತೊಂದರೆಯಾಗಿತ್ತಂತೆ. ಇದರಿಂದಾಗಿ ಅತನಿಗೆ ವ್ಯವಹಾರ ಹಾಗೂ ಕುಟುಂಬದೆಡೆಗೆ ನಿರ್ಲಕ್ಷ್ಯ ಮನೋಭಾವ ಬೆಳೆಸಿಕೊಂಡಿದ್ದ. ಇದನ್ನು ಪ್ರಶ್ನಿಸಿದ್ದಕ್ಕೆ ಅವರಿಗೆ ನೈತಿಕ ಬೆಂಬಲ ಕೊಡುತ್ತಿಲ್ಲ ಎಂದು ನನ್ನನ್ನೇ ದೂರಿದ್ದರು ಎಂದು ಆತನ ಪತ್ನಿ ನೋವು ತೋಡಿಕೊಂಡಿದ್ದಾಳೆ.

ಅವರು ನನ್ನನ್ನು ಬಿಟ್ಟು ಹೋಗಿ ಒಂದು ತಿಂಗಳಾಗಿದೆ. ನಮಗೆ ಈಗ ಯಾವುದೇ ಆಯ್ಕೆಯಿಲ್ಲ. ಯಾವುದೇ ತೊಂದರೆ ಬಂದರೆ ನಮಗೆ ನಾವೇ ಬೆಂಬಲ ಸೂಚಿಸಿಕೊಳ್ಳಬೇಕಾಗಿದೆ. ಪಬ್​ಜಿ ಗೇಮ್​ ಆಡುವುದಕ್ಕೂ ಮುಂಚೆ ಅವರ ವ್ಯಕ್ತಿತ್ವ ಉತ್ತಮವಾಗಿತ್ತು. ಗೇಮ್​ ಆಡುತ್ತಾ ಅವರ ವರ್ತನೆ ಬದಲಾಗುತ್ತಾ ಹೋಯಿತು ಎಂದು ಪತ್ನಿ ಜಾಲತಾಣದಲ್ಲಿ ಬರೆದುಕೊಂಡಿದ್ದಾಳೆ.

ಪಬ್​ಜಿ ಗೇಮ್​ ಬಂದಾಗಿನಿಂದ ಯುವ ಸಮುದಾಯದಲ್ಲಿ ಸಾಕಷ್ಟು ಸಂಚಲನ ಮೂಡಿಸಿದೆ. ದಿನವೊಂದಕ್ಕೆ ಅಂದಾಜು 30 ದಶಲಕ್ಷ ಮಂದಿ ಪಬ್​ಜಿ ಗೇಮ್​ ಆಡುತ್ತಿರುತ್ತಾರೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *