More

    ಮಲೇಷ್ಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿ | ಪಿವಿ ಸಿಂಧು, ಸೈನಾ ನೆಹ್ವಾಲ್ ಶುಭಾರಂಭ, ಕಶ್ಯಪ್, ಕೆ.ಶ್ರೀಕಾಂತ್​ಗೆ ಸೋಲು

    ಕೌಲಾಲಂಪುರ: ವಿಶ್ವ ಚಾಂಪಿಯನ್ ಪಿವಿ ಸಿಂಧು ಹಾಗೂ ಅನುಭವಿ ಷಟ್ಲರ್ ಸೈನಾ ನೆಹ್ವಾಲ್ ಮಲೇಷ್ಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಶುಭಾರಂಭ ಕಂಡಿದ್ದಾರೆ. ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಸಮೀರ್ ವರ್ಮ ಹಾಗೂ ಎಚ್​ಎಸ್ ಪ್ರಣಯ್ ಮುನ್ನಡೆ ಸಾಧಿಸಿದರೆ, ಅನುಭವಿ ಆಟಗಾರರಾದ ಕೆ.ಶ್ರೀಕಾಂತ್, ಸಾಯಿ ಪ್ರಣೀತ್ ಹಾಗೂ ಪಿ.ಕಶ್ಯಪ್ ಮೊದಲ ಸುತ್ತಿನಲ್ಲೇ ನಿರಾಸೆ ಅನುಭವಿಸಿದರು.

    ಹೊಸ ವರ್ಷದಲ್ಲಿ ಪ್ರಶಸ್ತಿ ಗೆಲುವಿನ ನಿರೀಕ್ಷೆಯಲ್ಲಿರುವ ಭಾರತದ ಸ್ಟಾರ್ ಆಟಗಾರ್ತಿಯರಾದ ಸೈನಾ, ಸಿಂಧು ಸುಲಭ ಗೆಲುವಿನೊಂದಿಗೆ ಮುನ್ನಡೆ ಸಾಧಿಸಿದರು. 6ನೇ ಶ್ರೇಯಾಂಕಿತ ಆಟಗಾರ್ತಿ ಪಿವಿ ಸಿಂಧು 21-15, 21-13 ನೇರ ಗೇಮ್ಳಿಂದ ರಷ್ಯಾದ ಇವ್ಜೇನಿಯಾ ಕೊಸೆಟ್​ಸ್ಕಾಯ ಎದುರು ಸುಲಭ ಜಯ ದಾಖಲಿಸಿದರೆ, ಲಂಡನ್ ಒಲಿಂಪಿಕ್ ಕಂಚಿನ ಪದಕ ವಿಜೇತೆ ಸೈನಾ ನೆಹ್ವಾಲ್ 21-15, 21-17 ನೇರ ಗೇಮ್ಳಿಂದ 36 ನಿಮಿಷಗಳ ಹೋರಾಟದಲ್ಲಿ ಬೆಲ್ಜಿಯಂನ ಲಿಯಾನ್ನೆ ತಾನ್ ಎದುರು ಜಯ ದಾಖಲಿಸಿದರು. ಕಳೆದ ವರ್ಷ ಇಂಡೋನೇಷ್ಯಾ ಮಾಸ್ಟರ್ಸ್ ಜಯಿಸಿದ ಬಳಿಕ ಸೈನಾ ಸತತವಾಗಿ ನೀರಸ ನಿರ್ವಹಣೆ ತೋರಿದ್ದರು. ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಸಮೀರ್ ವರ್ಮ 21-16, 21-15 ರಿಂದ ಥಾಯ್ಲೆಂಡ್​ನ ಕಂಟಾಫನ್ ವಾಂಗ್ಛೇರನ್ ಎದುರು ಹಾಗೂ ಎಚ್​ಎಸ್ ಪ್ರಣಯ್ 21-9, 21-17 ಕಂಟಾ ತ್ಸುನೆಯಾಮ ಎದುರು ಜಯ ದಾಖಲಿಸಿದರು. ಮಿಶ್ರ ಡಬಲ್ಸ್​ನಲ್ಲಿ ಸಿಕ್ಕಿ ರೆಡ್ಡಿ ಮತ್ತು ಪ್ರಣವ್ ಚೋಪ್ರಾ ಸೋಲು ಕಂಡರು.

    2014ರ ಕಾಮನ್ವೆಲ್ತ್ ಗೇಮ್್ಸ ಸ್ವರ್ಣ ಪದಕ ವಿಜೇತ ಪಿ.ಕಶ್ಯಪ್ ಮೊದಲ ಸುತ್ತಿನಲ್ಲೇ ಮುಗ್ಗರಿಸಿದರು. ಕಶ್ಯಪ್ 17-21, 16-21 ರಿಂದ ವಿಶ್ವ ನಂ.1 ಆಟಗಾರ ಜಪಾನ್​ನ ಕೆಂಟೊ ಮೊಮೊಟಾ ಎದುರು ಸೋಲು ಕಂಡರು. ಇತರ ಷಟ್ಲರ್​ಗಳಾದ ಪ್ರಣೀತ್

    ಡೆನ್ಮಾರ್ಕ್​ನ ರಾಸ್ಮಸ್ ಗೆಮ್ಕೆ ಎದುರು 11-21, 15-21 ರಿಂದ ಸೋತರೆ, ಕೆ.ಶ್ರೀಕಾಂತ್ 17-21, 5-21 ರಿಂದ ಚೀನಾ ತೈಪೆಯ ಚೌ ಟೀನ್ ಚೆನ್ ಎದುರು ಕೇವಲ 30 ನಿಮಿಷಗಳಲ್ಲಿ ಸೋತರು.

    ಸಿನಿಮಾ

    ಲೈಫ್‌ಸ್ಟೈಲ್

    ಸಿನಿಮಾ

    Latest Posts