More

  ಅಯ್ಯೋ, ಕಾಪಾಡಿ… ನದಿಯ ಕೆಸರಿನಲ್ಲಿ ನನ್ನ ದೇಹ ಹೂತಿಕೊಳ್ಳುತ್ತಲೇ ಇದೆ!

  ಗದಗ: ರೈತನ ಕಣ್ಣೆದುರಲ್ಲೇ ಮಲಪ್ರಭಾ ನದಿಯ ಕೆಸರಿನಲ್ಲಿ ಎರಡು ಎತ್ತುಗಳು ಸಿಲುಕಿ ನರಳಾಡುತ್ತಿದ್ದ ಹೃದಯವಿದ್ರಾವಕ ಘಟನೆ ನರಗುಂದ ತಾಲೂಕಿನ ಕೊಣ್ಣೂರ ಹಳೇ ಸೇತುವೆ ಬಳಿ ಸಂಭವಿಸಿದೆ.

  ಗೋವನಕೊಪ್ಪ ಗ್ರಾಮದ ರೈತ ನಿಂಗಪ್ಪ ಹಿರಿಗಣ್ಣ ಅವರು ತನ್ನ ಎರಡು ಎತ್ತುಗಳನ್ನು ಮೈತೊಳೆಯಲೆಂದು ಕೊಣ್ಣೂರ ಹಳೇ ಸೇತುವೆ ಬಳಿಗೆ ಸೋಮವಾರ ಬೆಳಗ್ಗೆ ಕರೆತಂದಿದ್ದರು. ಇತ್ತೀಚೆಗೆ ಮಲಪ್ರಭಾ ನದಿ ಉಕ್ಕಿ ಹರಿದ ಪರಿಣಾಮ ಈ ಭಾಗದಲ್ಲಿ ಮಣ್ಣು ಮಿಶ್ರಿತ ಮರಳು ಹೆಚ್ಚಿನ ಪ್ರಮಾಣದಲ್ಲಿ ಶೇಖರಣೆಯಾಗಿದೆ. ಹಾಗಾಗಿ ಎತ್ತುಗಳ ಕಾಲುಗಳು ಕೆಸರಿನಲ್ಲಿ ಸಿಲುಕಿದ್ದು, ಹೊರಬರಲಾಗದೆ ಗಾಬರಿಗೊಂಡಿದ್ದವು. ಪಿಳಿಪಿಳಿ ಕಣ್ಣು ಬಿಡುತ್ತಲೇ ರೋದಿಸುತ್ತಿದ್ದವು. ಇದನ್ನೂ ಓದಿರಿ ಶವ ಪರೀಕ್ಷೆ ಯಾಕೆ ಮಾಡ್ಲಿಲ್ಲ?: ಇಂದ್ರಜಿತ್​ ಆರೋಪಕ್ಕೆ ತಿರುಗೇಟುಕೊಟ್ಟ ಚಿರು ಮಾವ

  ಕೆಸರಿನಲ್ಲಿ ಎತ್ತುಗಳು ಸಿಲುಕಿರುವ ಸುದ್ದಿ ತಿಳಿದ ಸ್ಥಳೀಯರು ರೈತನ ನೆರವಿಗೆ ಬಂದರು. ಸುಮಾರು ಒಂದೂವರೆ ತಾಸು ಹರಸಾಹಸ ಪಟ್ಟ ಬಳಿಕ ಒಂದು ಎತ್ತನ್ನು ರಕ್ಷಿಸಲಾಗಿದೆ. ಮತ್ತೊಂದು ಎತ್ತನ್ನು ಹೊರ ತೆಗೆಯುವ ಕಾರ್ಯಾಚರಣೆ ಮಧ್ಯಾಹ್ನ 2.30 ಆದರೂ ಯಶಸ್ವಿ ಆಗಿರಲಿಲ್ಲ. ಪಾಪಾ, ಬೆಳಗ್ಗೆಯಿಂದಲೂ ಕೆಸರಿನಲ್ಲೇ ಸಿಲುಕಿ ರೋದಿಸುತ್ತಿದ್ದ ಮೂಕಪ್ರಾಣಿಯ ದೃಶ್ಯ ಮನಕಲಕುವಂತಿತ್ತು.

  ಎಲ್ಲವೂ ಸರ್ವನಾಶವಾಯ್ತು… ಎಂದು ಗೋಳಾಡುತ್ತಿದ್ದ ರೈತನಿಗೆ ಪಿಎಸ್ಐ ಕೊಟ್ರು ಅಚ್ಚರಿಯ ಉಡುಗೊರೆ!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts