ಬೆಳಗಾವಿ: ಮಲಪ್ರಭಾ ಎಡದಂಡೆ ಕಾಲುವೆಯಿಂದ ನೀರು ಬಿಡಬೇಕೆಂದು ರೈತರಿಂದ ರಸ್ತೆ ತಡೆ

ಸವದತ್ತಿ: ನೀರಾವರಿ ಇಲಾಖೆಯ ಅಧಿಕಾರಿಗಳು ಸಂಪೂರ್ಣವಾಗಿ ನಿರ್ಲಕ್ಷ್ಯತೆಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ ಮಲಪ್ರಭಾ ನದಿಯ ನೀರನ್ನು ಕಂಪನಿಗಳಿಗೆ ನಿರಂತರವಾಗಿ ನೀರು ಬಿಟ್ಟು, ಕಂಪನಿಗಳನ್ನು ಬದುಕಿಸುತ್ತಿದ್ದಾರೆ. ರೈತರು ದನಕರುಗಳಿಗೆ ಕುಡಿಯಲು ನೀರು ಇದ್ದರೂ ಸಹ ಇವರು ಹುಬ್ಬಳ್ಳಿ ಧಾರವಾಡ ಅವಳಿ ನಗರಗಳಿಗೆ ಮತ್ತು ಖಾಸಗಿ ಕಂಪನಿಗಳಿಗೆ ನಿರಾತಂಕವಾಗಿ ನೀರು ಬಿಡುತ್ತಿದ್ದಾರೆ. ಇವರನ್ನು ಯಾರು ಕೇಳುವವರು ಇಲ್ಲದಂತಾಗಿದೆ ಎಂದು ಮುನವಳ್ಳಿ ಮಗನೂರ ಗ್ರಾಮದ ಸುತ್ತಮುತ್ತಲಿನ ರೈತರು ಮಂಗಳವಾರ ರಂದು ಮಲಪ್ರಭಾ ಡ್ಯಾಂ ನವಿಲುತೀರ್ಥದಲ್ಲಿ ರಸ್ತೆ ತಡೆ ಮಾಡಿ ಪ್ರತಿಭಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ರೈತ ಸೇನಾ ಜಿಲ್ಲಾಧ್ಯಕ್ಷ ಸೋಮು ರೈನಾಪೂರ ಮಲಪ್ರಭಾ ನದಿಯ ನೀರನ್ನು ಈಗಿನ ಅಧಿಕಾರಿಗಳಿಗೆ ದುರುಪಯೋಗ ಪಡೆಸುತ್ತಿದ್ದಾರೆ ಮಲಪ್ರಭಾ ನದಿ ಸವದತ್ತಿ ಯಲ್ಲಮ್ಮ ಮತಕ್ಷೇತ್ರದಲ್ಲಿ ಇರುತ್ತದೆ. ಆದರೆ ಈ ನದಿಯ ನೀರಿನ ಲಾಭವನ್ನು ಸವದತ್ತಿ ತಾಲೂಕಿನ ರೈತರಿಗೆ ಮತ್ತು ಸವದತ್ತಿ ಪಟ್ಟಣದ ರೈತರಿಗೆ ಲಾಭ ಸಿಕ್ಕಿರುವದಿಲ್ಲ ಇಲ್ಲಿನ 34 ಹಳ್ಳಿಗಳ ರೈತರು ತಮ್ಮ ಮನೆ ಹೊಲಗಳನ್ನು ಕಳೆದುಕೊಂಡು ಮಲಪ್ರಭಾ ನದಿಯ ನೀರು ನಿಲ್ಲಲು ಅವಕಾಶ ಮಾಡಿಕೊಟ್ಟಿದ್ದಾರೆ. ಆದರೆ ಅವರಿಗೆ ಯಾವ ಲಾಭವು ಸಿಕ್ಕಿರುವದಿಲ್ಲ ಮತ್ತು ಹುಬ್ಬಳ್ಳಿ ಧಾರವಾಡ ಅವಳಿ ನಗರಗಳಿಗೆ ನಿರಂತರವಾಗಿ ನೀರು ಸರಬರಾಜು ಆಗುತ್ತದೆ. ಮಲಪ್ರಭಾ ನದಿಯ ನೀರು ಮನೆಯಲ್ಲಿ ಇದ್ದರೂ ಸಹ ಎಂಟು, ಹತ್ತು ದಿನಗಳಿಗೊಮ್ಮೆ ನೀರು ಕುಡಿಯುತ್ತಿದ್ದೇವೆ. ಇದು ನಮ್ಮ ದುರ್ದೈವ ವಾಗಿದೆ ಎಂದು ಹೇಳಿದರು.

ಪ್ರತಿಭಟನೆಯು ಎರಡು ಮೂರು ತಾಸುಗಳ ವರೆಗೆ ನಡೆದಿದ್ದರಿಂದ ಸವದತ್ತಿ ಗೋಕಾಕ ರಸ್ತೆ ಸಂಪೂರ್ಣ ಸ್ಥಗಿತಗೊಂಡಿತ್ತು.

ಸುದ್ದಿ ತಿಳಿದಾಕ್ಷಣ ಪ್ರತಿಭಟನೆಯ ಸ್ಥಳಕ್ಕೆ ತಹಸೀಲ್ದಾರ್ ನವೀನ ಹುಲ್ಲೂರ, ಸಿ.ಪಿ.ಐ. ಎಂ.ಪಿ. ಸರವಗೋಳ, ನೀರಾವರಿಯ ಇಲಾಖೆಯ ಅಧಿಕಾರಿಗಳಾದ ಎ.ಆರ್. ಹೆಗಡೆ, ಬಸನಗೌಡ ಪಾಟೀಲ, ವ್ಹಿ.ಕೆ ಮುದಿಗೌಡ್ರ, ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಾಕಾರರೊಂದಿಗೆ ಮಾತನಾಡಿದ ಸಿ.ಪಿ.ಆಯ್. ಎಮ್.ಪಿ. ಸರವಗೋಳ ನೀರಿನ ತೊಂದರೆಯ ಬಗ್ಗೆ ನೀರಾವರಿಯ ಮೇಲಾಧಿಕಾರಿಗಳಿಗೆ ತಿಳಿಸುತ್ತೇವೆ. ಮೂರ‌್ನಾಲ್ಕು ದಿನಗಳಲ್ಲಿ ನೀರು ಬಿಡಿಸುವಂತೆ ಮೇಲಾಧಿಕಾರಿಗಳಿಗೆ ತಿಳಿಸುತ್ತೇವೆ ಎಂದು ಹೇಳಿದಾಗ ಪ್ರತಿಭಟನೆಯನ್ನು ಹಿಂಪಡೆದರು.

ರೈತ ಮುಖಂಡರಾದ ಜಗದೀಶ ಹಿರೇಮಠ, ಲಕ್ಷ್ಮಣ ಬೇರಿ, ದೇನಯ್ಯ ಅಮೋಘಿಮಠ, ಚಂದ್ರು ಪೂಜೇರ, ಲಕ್ಷ್ಮಣ ಕರಿಯನ್ನವರ, ಸೇರಿದಂತೆ ಅನೇಕ ರೈತ ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.