ಮಳಖೇಡ: ಸೂರ್ಯ ನಗರ ಸದ್ಯ ಮಳೆ ನಗರಿಯಾಗಿದೆ. ಕಳೆದ ಎರಡು ದಿನಗಳಿಂದ ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಯಿಂದ ಸಾಕಷ್ಟು ಅವಾಂತರ ಸೃಷ್ಟಿಯಾಗಿದೆ.
ಸೇಡಂ ತಾಲೂಕಿನ ಮಳಖೇಡದ ಕಾಗಿನ ತಟದಲ್ಲಿರುವ ಉತ್ತರಾದಿ ಮಠಕ್ಕೆ ಅಪಾರ ಪ್ರಮಾಣದ ನೀರು ಹೊಕ್ಕಿದ್ದು, ಶ್ರೀ ಜಯತೀರ್ಥರು ಸೇರಿ ಯತಿಗಳ ಮೂಲ ವೃಂದಾವನಗಳು ಜಲಾವೃತವಾಗಿವೆ.
ಪಂಡಿತರು, ಅರ್ಚಕರು ಶ್ರೀ ಮಠದಲ್ಲೇ ಇದ್ದು ಪೂಜೆ ಸೇರಿ ಇನ್ನಿತರ ಧಾರ್ಮಿಕ ಕಾರ್ಯಕ್ರಮ ನಡೆಸುತ್ತಿದ್ದಾರೆ. ಮಠದ ಆವರಣ, ವಿವಿಧ ಕೊನೆಗಳಿಗೂ ನೀರು ನುಗಿದ್ದು, ದವಸ – ಧಾನ್ಯ ಸೇರಿ ಇನ್ನಿತರ ವಸ್ತುಗಳು ಹಾಳಾಗಿವೆ.
ಧಾರಾಕಾರ ಮಳೆ ಹಾಗೂ ವಿವಿಧ ಜಲಾಶಯಗಳಿಂದ ಅಪಾರ ಪ್ರಮಾಣದ ನೀರು ಬಿಟ್ಟಿದ್ದರಿಂದ ಈಗಾಗಲೇ ಮಳಖೇಡ ಹಳೆ ಸೇತುವೆ ಮುಳುಗಡೆಯಾಗಿದೆ.