More

    ಕ್ರೀಡೆ ಜೀವನದ ಅವಿಭಾಜ್ಯ ಅಂಗವಾಗಲಿ

    ಬಳ್ಳಾರಿ: ಕ್ರೀಡೆ ಜೀವನದ ಒಂದು ಅವಿಭಾಜ್ಯ ಅಂಗವಾಗಬೇಕು. ಕಲಿಕೆ ವೇಳೆ ಬದಲಾವಣೆ ಮತ್ತು ತಂತ್ರಜ್ಞಾನಕ್ಕೆ ಪೂರಕವಾಗಿ ನೂತನ ಪ್ರಯೋಗಗಳಿಗೆ ಮುಂದಾದಲ್ಲಿ ಮಾತ್ರ ಯಶಸ್ಸು ಕಾಣಲು ಸಾಧ್ಯ ಎಂದು ಕುಲಪತಿ ಡಾ.ಸಾಹೇಬ್ ಅಲಿ ಎಚ್. ನೀರಗುಡಿ ಹೇಳಿದರು.

    ಇಲ್ಲಿನ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಬುಧವಾರ ನಡೆದ ವಾಲಿಬಾಲ್ ಪ್ರಿಮಿಯರ್ ಲೀಗ್ ಸೀಸನ್-1 ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

    ಸದಾ ಕ್ರಿಯಾಶೀಲರಾಗಿ ಆಟ-ಪಾಠಗಳ ಮೂಲಕ ದೈಹಿಕ ಶಿಕ್ಷಣದ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಮೆರಗನ್ನು ಹೆಚ್ಚಿಸಿದ್ದಾರೆ ಎಂದರು.
    ದೈಹಿಕ ಶಿಕ್ಷಣ ನಿರ್ದೇಶಕ ಹಾಗೂ ಮಾಜಿ ವಾಲಿಬಾಲ್ ಕ್ರೀಡಾಪಟು ಡಾ.ಪ್ರವೀಣ್‌ಸಿಂಗ್ ಮಾತನಾಡಿ, ಯಾವುದೇ ಕ್ರೀಡೆಯಲ್ಲಿ ಯಶಸ್ಸು ಗಳಿಸಲು ಸತತ ಪರಿಶ್ರಮ ಬೇಕಾಗುತ್ತದೆ. ಕ್ರೀಡೆಯನ್ನು ಹವ್ಯಾಸವಾಗಿ ಬಳಸಿಕೊಳ್ಳಬೇಕು. ಅದರಿಂದ ಪ್ರೀತಿ, ವಿಶ್ವಾಸ, ಸಾಮರಸ್ಯ ಕಾಣಬಹುದಾಗಿದೆ ಎಂದು ತಿಳಿಸಿದರು.

    ಡಾ.ಶಶಿಧರ್ ಕೆಲ್ಲೂರ್ ಕ್ರೀಡಾಕೂಟದ ಅಧ್ಯಕ್ಷತೆ ವಹಿಸಿದ್ದರು. ಡಾ.ಸಂಪತ್ ಕುಮಾರ್, ಶಿವರಾಮ ರಾಗಿ, ಮಹೇಶಬಾಬು, ಪಾಪಯ್ಯ ಇತರರು ಉಪಸ್ಥಿತರಿದ್ದರು.

    ರಾಜ್ಯೋತ್ಸವ ರಸಪ್ರಶ್ನೆ - 21

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts