ಹುಬ್ಬಳ್ಳಿ: ಭಗವದ್ಗೀತೆ ಮನುಷ್ಯನ ಜೀವನದಲ್ಲಿ ಹಾಸು ಹೊಕ್ಕಾಗಬೇಕು. ನಿತ್ಯ ಕನಿಷ್ಠ ಒಂದು ಶ್ಲೋಕವನ್ನದಾರೂ ಪಠಣ ಮಾಡುವುದನ್ನು ರೂಢಿಸಿಕೊಳ್ಳಬೇಕು ಎಂದು ವಿದ್ವಾನ್ ಸಮೀರಾಚಾರ್ಯ ಕಂಠಪಲ್ಲಿ ಹೇಳಿದರು.
ಗೀತಾ ಜಯಂತಿ ಅಂಗವಾಗಿ ಭಗವದ್ಗೀತಾ ಅಭಿಯಾನ ಧಾರವಾಡ ಜಿಲ್ಲಾ ಸಮಿತಿಯ ಆಶ್ರಯದಲ್ಲಿ ಇಲ್ಲಿಯ ಹವ್ಯಕ ಭವನದಲ್ಲಿ ಬುಧವಾರ ಏರ್ಪಡಿಸಿದ್ದ ಒಂಬತ್ತನೇ ಅಧ್ಯಾಯದ ಮಹಾ ಸಮರ್ಪಣೆ ಹಾಗೂ 18 ಅಧ್ಯಾಯಗಳ ಪಠಣ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.
ನಮ್ಮ ಜೀವನದ ಯೋಗಕ್ಷೇಮ ನೋಡಿಕೊಳ್ಳುವ ಅಪೂರ್ವ ಪವಿತ್ರ ಗ್ರಂಥವಾಗಿದೆ ಎಂದರು.
ಸ್ವರ್ಣ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ.ವಿ.ಎಸ್.ವಿ. ಪ್ರಸಾದ ಮಾತನಾಡಿ, ಭಗವದ್ಗೀತೆ ನಮಗೆ ನಮ್ಮ ಕರ್ತವ್ಯದ ಅರಿವು ಮೂಡಿಸುತ್ತಿದೆ. ಮಾಡುವ ಕರ್ತವ್ಯ ಕೂಡ ಯಾವುದೇ ಫಲಾಪೇಕ್ಷೆಯಿಂದ ಕೂಡಿರಬಾರದು ಎಂದು ಹೇಳುತ್ತದೆ. ಇಂಥ ಜ್ಞಾನ ಭಂಡಾರವಾದ ಭಗವದ್ಗೀತೆ ಪಠಣ ನಿತ್ಯ ನಿರಂತರವಾಗಿರಬೇಕು ಎಂದರು.
ಭಗವದ್ಗೀತಾ ಅಭಿಯಾನ ಸಮಿತಿ ಅಧ್ಯಕ್ಷ ಗೋವಿಂದ ಜೋಶಿ ಮಾತನಾಡಿ, ಭಗವದ್ಗೀತೆ ಇಂದಿಗೂ ಎಂದೆಂದಿಗೂ ಪ್ರಸ್ತುತ. ಅದರಲ್ಲಿರುವ ಉಪದೇಶಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳುವುದು ಅಗತ್ಯ. ಪರಧರ್ಮ ಸಹಿಷ್ಣುತೆ ಹೊಂದಿರುವ ವಿಶ್ವದ ಏಕೈಕ ಧರ್ಮವೆಂದರೆ ಅದು ಹಿಂದು ಧರ್ಮವೆಂದು ಪ್ರತಿಪಾದಿಸಿದರು.
ಸಮಿತಿ ಕಾರ್ಯಾಧ್ಯಕ್ಷ ಎ.ಸಿ. ಗೋಪಾಲ ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು.
ಇದಕ್ಕೂ ಮೊದಲು ಭಗವದ್ಗೀತೆಯ 18 ಅಧ್ಯಾಯಗಳ ಸಾಮೂಹಿಕ ಪಠಣ ನಡೆಯಿತು. ವೀಣಾ ಶಿವರಾಮ ಹೆಗಡೆ ನೇತೃತ್ವ ವಹಿಸಿದ್ದರು. ಅಭಿಯಾನದಲ್ಲಿ ಭಾಗವಹಿಸಿದ್ದ ಎಲ್ಲ ಸಕ್ರಿಯ ಸದಸ್ಯರನ್ನು ಸನ್ಮಾನಿಸಲಾಯಿತು.
ಪ್ರಚಾರ ಸಮಿತಿ ಸದಸ್ಯ ಮನೋಹರ ಪರ್ವತಿ, ಅಶೋಕ ಹೆಗಡೆ, ಗೋಪಾಲಕೃಷ್ಣ ಹೆಗಡೆ, ಶ್ರೀಕಾಂತ ಹೆಗಡೆ ಇತರರು ಉಪಸ್ಥಿತರಿದ್ದರು. ಸಮಿತಿಯ ಕಾರ್ಯದರ್ಶಿ ಸುದರ್ಶನ ಹೇಮಾದ್ರಿ ವಂದಿಸಿದರು. ಅರವಿಂದ ಮುತ್ತಗಿ ನಿರೂಪಿಸಿದರು.
ನಿತ್ಯ ಅಭ್ಯಾಸವಾಗಲಿ ಭಗವದ್ಗೀತೆ ಪಠಣ
You Might Also Like
ಊಟದ ನಂತರ ಸಿಹಿ ತಿನ್ನುವುದು ಒಳ್ಳೆಯದೇ? ವೈದ್ಯರ ಸಲಹೆ..! sweet
sweet: ಸಿಹಿ ತಿಂಡಿ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ... ನಾಲಿಗೆ ಚಪ್ಪರಿಸಿ ಸಿಹಿ ತಿಂಡಿ…
astrology : ಈ ದಿನ ಉಗುರು, ಕೂದಲನ್ನು ಕತ್ತರಿಸಿದ್ರೆ ಕಾದಿದೆ ಸಂಕಷ್ಟ! ಈ ಕೆಲಸಕ್ಕೂ ಇದೆ ಒಳ್ಳೆಯ ದಿನ
astrology: ವಾರದ ಕೆಲವು ದಿನಗಳಲ್ಲಿ ಉಗುರುಗಳನ್ನು ಕತ್ತರಿಸುವುದು ಮತ್ತು ಕೂದಲನ್ನು ಕತ್ತರಿಸುವು ಒಳ್ಳೆಯದಲ್ಲ ಎಂದು ಹೇಳಲಾಗುತ್ತದೆ. …
27 ವರ್ಷದ ನಂತ್ರ ಪೂರ್ವ ಭಾದ್ರಪದ ನಕ್ಷತ್ರದಲ್ಲಿ ಶನಿ ಸಂಚಾರ: ಈ 3 ರಾಶಿಯವರಿಗೆ ಅದೃಷ್ಟವೋ ಅದೃಷ್ಟ | Zodiac Signs
Zodiac Signs : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಅನೇಕ ಗ್ರಹಗಳು ತಮ್ಮ ರಾಶಿಚಕ್ರ ಚಿಹ್ನೆಗಳನ್ನು ಆಗಾಗ…