ತಾಳಿಕೋಟೆ: ವಿದ್ಯುತ್ ಅವಡದಲ್ಲಿ ಮೃತಪಟ್ಟವರಿಗೆ ಹೆಸ್ಕಾಂ ಇಲಾಖೆ ನೀಡಿದ ಪರಿಹಾರ ಧನವನ್ನು ಪೋಲು ಮಾಡದೆ ಮಕ್ಕಳ ಭವಿಷ್ಯಕ್ಕಾಗಿ ಬ್ಯಾಂಕ್ನಲ್ಲಿ ಠೇವಣಿ ಇಟ್ಟು, ಸದ್ಬಳಕೆ ಮಾಡಿಕೊಳ್ಳಿ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ ಹೇಳಿದರು.
ಇತ್ತೀಚೆಗೆ ತಾಲೂಕಿನ ಪಡೇಕನೂರ ಗ್ರಾಮದ ಚನ್ನಪ್ಪಗೌಡ ಪಾಟೀಲ ಅವರ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ತಗಡಿನ ಶೆಡ್ ಮೇಲೆ ಮುಖ್ಯ ವಿದ್ಯುತ್ ತಂತಿ ತುಂಡರಿಸಿ ಬಿದ್ದ ಪರಿಣಾಮ ವಿದ್ಯುತ್ ಶಾಕ್ ಹೊಡೆದು ಸ್ಥಳದಲ್ಲೇ ಮೃತಪಟ್ಟಿದ್ದ ಭಾರತಿ ಮಾದರ ಹಾಗೂ ಮಗಳಾದ ಭಾಗ್ಯಶ್ರೀ ಅವರ ಕುಟುಂಬಕ್ಕೆ ಶನಿವಾರ ಹೆಸ್ಕಾಂನಿಂದ ನೀಡಲಾದ ತಲಾ 5 ಲಕ್ಷ ರೂ. ಚೆಕ್ನ್ನು ಭಾರತಿ ಮಾದರ ಅವರ ಪತಿ ಪರಶುರಾಮ ಮಾದರ ಅವರಿಗೆ ವಿತರಿಸಿ ಅವರು ಮಾತನಾಡಿದರು.
ಬಸವನ ಬಾಗೇವಾಡಿ ಹೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರ ಸಿದ್ರಾಮ ಬಿರಾದಾರ, ವಿಜಯಪುರ ಲೋಕಾಯುಕ್ತ ಅಧೀಕ ಟಿ. ಮಲ್ಲೇಶ್, ಲೋಕಾಯುಕ್ತ ಡಿವೈಎಸ್ಪಿ ಸುರೇಶ ರೆಡ್ಡಿ, ಇನ್ಸ್ಪೆಕ್ಟರ್ರಾದ ಆನಂದ ಟಕ್ಕಣ್ಣವರ, ಆನಂದ ಡೋಣಿ, ಕೆಬಿಜೆಎನ್ಎಲ್ ಸಹಾಯಕ ಇಂಜಿನಿಯರ್ ವಿಶ್ವನಾಥ ಬಿರಾದಾರ, ಕಾರ್ಯನಿರ್ವಾಹಕ ಅಧಿಕಾರಿ ವೆಂಕಟೇಶ ವಂದಾಲ, ತಾ.ಪಂ, ಇಒ ವೆಂಕಟೇಶ ವಂದಾಲ, ಸಹಾಯಕ ನಿರ್ದೇಶಕಿ ಸುಜಾತಾ ಯಡ್ರಾಮಿ, ಪಿಡಿಒ ಸಾವಿತ್ರಿ ಬಿರಾದಾರ, ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಮತ್ತು ತಾಲೂಕಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.