Friday, 16th November 2018  

Vijayavani

ಜನಾರ್ದನರೆಡ್ಡಿ ಕೇಸ್ ಬೆನ್ನಲ್ಲೇ ಡಿಕೆಶಿಗೆ ಬಂಧನ ಭೀತಿ - ಇಡಿಯಿಂದ 3ನೇ ಬಾರಿ ಇಡಿ ನೋಟಿಸ್ ಜಾರಿ        ಆ್ಯಂಬಿಂಡೆಟ್ ಪ್ರಕರಣದಲ್ಲಿ ಇಡಿ ಹೆಸರಿಗೆ ಆಕ್ಷೇಪ - ಸಿಸಿಬಿ ವಿರುದ್ಧ ಇಡಿ ಜಂಟಿ ನಿರ್ದೇಶಕ ಗರಂ        ಸಚಿವ ಸಂಪುಟ ವಿಸ್ತರಣೆಗೆ ಧನುರ್ಮಾಸದ ಎಫೆಕ್ಟ್ - ಸದ್ಯಕ್ಕಿಲ್ಲ ಆಕಾಂಕ್ಷಿಗಳಿಗೆ ಸಚಿವ ಭಾಗ್ಯ - ಕಾಂಗ್ರೆಸ್ಸಿಗರಲ್ಲಿ ಮತ್ತೆ ಅಸಮಾಧಾನ        ರಾಜ್ಯಾದ್ಯಂತ ಭುಗಿಲೆದ್ದ ರೈತರ ಹೋರಾಟದ ಕಿಚ್ಚು - ರೈತರನ್ನು ಭೇಟಿಯಾಗುವುದಾಗಿ ಹೇಳಿದ ಕುಮಾರಸ್ವಾಮಿ        ಗಾಂಧಿ ಕುಟುಂಬ ಬಿಟ್ಟು ಬೇರೆಯವರು ಎಐಸಿಸಿ 5 ಅಧ್ಯಕ್ಷರಾಗಲಿ - ಕಾಂಗ್ರೆಸ್​ಗೆ ಪ್ರಧಾನಿ ಮೋದಿಯಿಂದ ನೇರ ಸವಾಲು        ತಮಿಳುನಾಡಿನಾದ್ಯಂತ ಗಜ ಚಂಡಮಾರುತದ ಅರ್ಭಟ - 20ಕ್ಕೂ ಹೆಚ್ಚು ಮಂದಿ ದುರ್ಮರಣ - ಅಪಾರ ಆಸ್ತಿ ಪಾಸ್ತಿ, ಬೆಳೆ ನಾಶ       
Breaking News

ಪ್ರವಾಸೋದ್ಯಮ ಕೇಂದ್ರಿತ ದಸರಾ ಆಚರಣೆಗೆ ಸರ್ಕಾರ ನಿರ್ಧಾರ

Wednesday, 11.07.2018, 8:21 PM       No Comments

ಬೆಂಗಳೂರು: ಈ ಬಾರಿ ಪ್ರವಾಸೋದ್ಯಮ ಕೇಂದ್ರಿತ ದಸರಾ ಆಚರಿಸಲು  ಸರ್ಕಾರ ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ಎಚ್​.ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಇಂದು ನಡೆದ ದಸರ ಪೂರ್ವಭಾವಿ ಸಭೆಯ ನಂತರ ಮಾತನಾಡಿದ ಸಿಎಂ ಎಚ್ಡಿಕೆ, ಮೈಸೂರು ಜಿಲ್ಲೆಯ ಪಕ್ಕದಲ್ಲೇ ಮಡಿಕೇರಿ ಇದೆ, ಬಂಡೀಪುರ, ನಾಗರಹೊಳೆ ಸೇರಿದಂತೆ ಹಲವು ಪ್ರವಾಸಿ ತಾಣಗಳಿವೆ. ಇನ್ನು ಮೈಸೂರಿನಲ್ಲಿ ವಿಶ್ವ ವಿಖ್ಯಾತ ದಸರಾ ನಡೆಯುತ್ತದೆ. ಹಾಗೂ ಸಾಕಷ್ಟು ಪ್ರವಾಸಿ ತಾಣಗಳಿರುವುದರಿಂದ ಪ್ರವಾಸೋದ್ಯಮ ಕೇಂದ್ರಿತ ದಸರಾ ಮಾಡಲಾಗುವುದು ಎಂದು ತಿಳಿಸಿದರು.

“ಅಕ್ಟೋಬರ್​ನಲ್ಲಿ ದಸರಾ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಪೂರ್ವ ಸಿದ್ದತಾ ಸಭೆ ನಡೆಸಿದ್ದೇವೆ. ಆಷಾಡ ಮಾಸ ಆರಂಭಕ್ಕೂ ಮೊದಲೇ ಪೂರ್ವಸಿದ್ದತಾ ಸಭೆ ನಡೆಸಬೇಕೆಂದು ಜಿ.ಟಿ. ದೇವೇಗೌಡರು ತಿಳಿಸಿದ್ದರು. ಅದರಂತೆ ಸಭೆ ನಡೆದಿದೆ.

ಮೂರು ಜಿಲ್ಲೆಯ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಧಿಕಾರಿಗಳು ದಸರಾ ಕಾರ್ಯಕ್ರಮ ನಡೆಸಬೇಕು. ಆ ಭಾಗದಲ್ಲಿ ಉತ್ತಮ ಮಳೆ ಆಗುತ್ತಿದೆ. ವಿಶ್ವದಲ್ಲೇ ದಸರಾ ಉತ್ತಮ ಕಾರ್ಯಕ್ರಮ ಆಗಬೇಕೆಂಬ ಇಚ್ಛೆ ಎಲ್ಲರಿಗಿದೆ. ಪ್ರತಿ ವರ್ಷದ ಕಾರ್ಯಕ್ರಮಗಳಿಗಿಂತ ಈ ಬಾರಿ ಹೊಸ ಕಾರ್ಯಕ್ರಮ ತರಲು ಸಿದ್ದತೆ ಮಾಡಿಕೊಳ್ಳಲು ಸೂಚಿಸಿದ್ದೇನೆ. ಅಧಿಕಾರಿಗಳು ಶ್ರಮವಹಿಸಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಉತ್ಸವಕ್ಕೆ ಶಾಸಕರು ಮತ್ತು ಸಚಿವರ ನೇತೃತ್ವದಲ್ಲಿ ಸಮಿತಿ ಮಾಡಿಕೊಳ್ಳುವುದು ಉತ್ತಮ. ಪಾಸ್ ಸೇರಿದಂತೆ ಯಾವುದೇ ರೀತಿಯ ಗೊಂದಲ ಆಗದಂತೆ ಸಮಿತಿ ನೋಡಿಕೊಳ್ಳಬೇಕು. ಸರ್ಕಾರ ದಸರಾಗೆ ಎಲ್ಲಾ ರೀತಿಯ ಸಹಕಾರ ನೀಡಲಿದೆ. ದಸರಾ ಕಾರ್ಯಕ್ರಮಕ್ಕೆ ಏನು ಕೇಳಲಾಗುತ್ತದೆಯೋ ಅದನ್ನು ನೀಡಲಾಗುವುದು. ಕಳೆದ ಬಾರಿ ನಿಗದಿಯಾದ ಹಣದಲ್ಲಿ ಸ್ವಲ್ಪ ಹಣ ಇನ್ನು ಬಾಕಿ ಇದೆ. ಅದನ್ನೂ ಈ ಬಾರಿ ಬಿಡುಗಡೆ ಮಾಡಲಾಗುವದು ಎಂದು ಎಚ್ಡಿಕೆ ತಿಳಿಸಿದರು.

ಸಭೆಯಲ್ಲಿ ಉನ್ನತ ಸಚಿವ ಜಿ. ಟಿ ದೇವೇಗೌಡ, ಎನ್. ಮಹೇಶ್, ಸಿ.ಎಸ್. ಪುಟ್ಟರಂಗಶೆಟ್ಟಿ, ಜಯಮಾಲ, ಶಾಸಕರಾದ ಎಚ್. ವಿಶ್ವನಾಥ್, ಶಾಸಕ ಯತೀಂದ್ರ ಸೇರಿದಂತೆ ಮೈಸೂರು ಭಾಗದ ಎಲ್ಲ ಪ್ರತಿನಿಧಿಗಳು ಭಾಗವಹಿಸಿದ್ದರು.

ಡ್ಯಾಂ ತುಂಬಿದ ನಂತರ ತಮಿಳುನಾಡಿಗೆ ನೀರು

ಕಾವೇರಿ ಕಣಿವೆಯಲ್ಲಿ ಉತ್ತಮ ಮಳೆಯಾಗುತ್ತಿದೆ. ಇನ್ನೊಂದು ವಾರ ಮಳೆ ಆದರೆ ಕೆಆರ್​ಎಸ್ ತುಂಬುತ್ತದೆ. ನಂತರ ತಮಿಳುನಾಡಿಗೆ ನೀರು ಬಿಡುಲಾಗುತ್ತದೆ. ಆಗ ಸಮಸ್ಯೆ ಏನೂ ಆಗದು ಎಂದು ಸಿಎಂ ತಿಳಿಸಿದರು.

 

Leave a Reply

Your email address will not be published. Required fields are marked *

Back To Top