ಮಕ್ಕಳಿಗೆ ಜಾನಪದ ಸಾಹಿತ್ಯದ ಅರಿವು ಮೂಡಿಸಿ

ಬಾಳೆಹೊನ್ನೂರು: ಬಾಲ್ಯದಲ್ಲೇ ಮಕ್ಕಳಿಗೆ ಜಾನಪದ ಸಾಹಿತ್ಯ, ಕಲೆ, ಸಂಗೀತ, ಸಂಸ್ಕೃತಿಯ ಅರಿವು ಮೂಡಿಸಬೇಕು ಎಂದು ಸಾಹಿತಿ ಹುಣಸೇಹಳ್ಳಿ ರಾಜಪ್ಪಗೌಡ ಹೇಳಿದರು.

ಪಟ್ಟಣದ ಸರ್ಕಾರಿ ಪ್ರೌಢಶಾಲೆಯಲ್ಲಿ ಕರ್ನಾಟಕ ಜಾನಪದ ಪರಿಷತ್ತಿನ ಚಿಕ್ಕಮಗಳೂರು ಜಿಲ್ಲಾ ಘಟಕ ಶುಕ್ರವಾರ ಆಯೋಜಿಸಿದ್ದ ಜಾನಪದ ಅರಿವು ಉಪನ್ಯಾಸ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಯುವಜನರು ವೇಗವಾಗಿ ಪಾಶ್ಚಾತ್ಯ ಸಂಸ್ಕೃತಿಯ ಆಕರ್ಷಣೆಗಳಿಗೆ ಒಳಗಾಗಿ ಅರ್ಥವಿಲ್ಲದ ಜೀವನ ನಡೆಸುತ್ತಿದ್ದಾರೆ. ಹಾಗಾಗಿ ಮನೆಯ ಹಿರಿಯರು, ಪಾಲಕರು ಮಕ್ಕಳಿಗೆ ಜನಪದರು ಅಳವಡಿಸಿಕೊಂಡು ಬಂದ ಆಹಾರ ಪದ್ಧತಿ, ಉಡುಪು, ರಕ್ತ ಸಂಬಂಧ, ಆಚಾರ-ವಿಚಾರ, ಧಾರ್ಮಿಕ ಸಹಿಷ್ಣುತೆ, ಅವಿಭಕ್ತ ಕುಟುಂಬಗಳ ಮಹತ್ವದ ಅಂಶಗಳನ್ನು ತಿಳಿಸಬೇಕು ಎಂದರು.
ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಜೆ.ಬಿ.ಸುರೇಶ್ ಮಾತನಾಡಿ, ಎಲ್ಲಾ ಭಾರತೀಯ ಕಲೆ, ಸಂಗೀತ, ಸಾಹಿತ್ಯ, ಸಂಸ್ಕೃತಿ, ಆಚಾರ-ವಿಚಾರ, ನಡೆ-ನುಡಿ, ಧರ್ಮ ಸಂಪ್ರದಾಯಗಳ ಮೂಲ ಬೇರು ಜನಪದ ಕಲೆ, ಸಾಹಿತ್ಯ, ಸಂಗೀತವೆ ಆಗಿದೆ.
ಜನಪದ ಸಂಸ್ಕೃತಿ ಮರೆತರೆ ಭಾರತೀಯ ಸ್ವಾಸ್ಥ್ಯಸಮಾಜ ಕಾಣಲು ಸಾಧ್ಯವಿಲ್ಲ. ಪ್ರತಿ ಕುಟುಂಬಸ್ಥರು, ಶಾಲಾ ಕಾಲೇಜುಗಳ ಮುಖ್ಯಸ್ಥರು ಜಾನಪದ ಸಂಸ್ಕೃತಿ, ಕಲೆ, ಸಾಹಿತ್ಯವನ್ನು ಚಿಕ್ಕಂದಿನಿಂದಲೆ ಮಕ್ಕಳಲ್ಲಿ ಬಿತ್ತಬೇಕು ಎಂದರು.
ತಾಲೂಕು ಕಸಾಪ ಪ್ರಧಾನ ಕಾರ್ಯದರ್ಶಿ ಸತೀಶ್ ಅರಳೀಕೊಪ್ಪ ಮಾತನಾಡಿ, ಜನಪದ ಸಂಸ್ಕೃತಿಯಲ್ಲಿ ಸಮಾಜದ ಅಂಕುಡೊಂಕು ತಿದ್ದುವ ಮೌಲ್ಯಧಾರಿತ ತತ್ವಗಳಿವೆ. ಅಹಿಂಸೆ, ಪರೋಪಕಾರ, ಸಹಕಾರ, ತಾಳ್ಮೆ, ಗುರು ಹಿರಿಯರನ್ನು ಗೌರವಿಸುವುದು, ತಂದೆ, ತಾಯಿಯನ್ನು ಪೋಷಿಸುವ ನೀತಿಪಾಠ ಜಾನಪದ ಸಾಹಿತ್ಯದಲ್ಲಿದೆ ಎಂದು ಹೇಳಿದರು.
ಎಸ್‌ಡಿಎಂಸಿ ಅಧ್ಯಕ್ಷ ಮಹೇಶ್ ಆಚಾರ್ಯ, ಹರಿಹರಪುರ ಹೋಬಳಿ ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷೆ ತಮನ್ನಾ ಮುನಾವರ, ಕಸಾಪ ತಾಲೂಕು ಪೂರ್ವಾಧ್ಯಕ್ಷ ಕೆ.ಟಿ.ವೆಂಕಟೇಶ್, ಕಸಾಪ ಕಾರ್ಯದರ್ಶಿ ಶೇಖರ್ ಇಟ್ಟಿಗೆ, ಶೇಖರ ಕೊಪ್ಪ, ಅನಿಲ್, ಸುಮಾ ಇತರರಿದ್ದರು.

Share This Article

ಭಗವಂತ ಶ್ರೀರಾಮನ ಜೀವನದ ಈ 5 ತತ್ವವನ್ನು ಅಳವಡಿಸಿಕೊಳ್ಳಿ | Success Tips

ಭಾರತದಲ್ಲಿ ಶ್ರೀರಾಮನನ್ನು ಅತಿ ಹೆಚ್ಚು ಪೂಜಿಸಲಾಗುತ್ತದೆ. ಲಂಕಾದ ರಾವಣನ ಮೇಲೆ ಶ್ರೀರಾಮನ ವಿಜಯವನ್ನು ಇಂದಿಗೂ ದಸರಾ…

ಅತಿಯಾಗಿ ಯೋಚಿಸುವುದನ್ನು ನಿಲ್ಲಿಸಿ! ಸೈಲೆಂಟ್ ಆಗಿ ನಿಮ್ಮನ್ನು ಕಿಲ್ಲ ಮಾಡುತ್ತೆ Over Thinking ಅಭ್ಯಾಸ…

ಬೆಂಗಳೂರು:  ಇಂದಿನ ಬಿಡುವಿಲ್ಲದ ಜೀವನದಲ್ಲಿ ನಾವೆಲ್ಲರೂ ಸಣ್ಣ ಪುಟ್ಟ ವಿಚಾರಗಳನ್ನು ಹೆಚ್ಚು ಯೋಚಿಸುತ್ತೇವೆ ( Over…

ಹೆಂಗಸರು ಪ್ರತಿದಿನ ಹೂವು ಮುಡಿಯುವುದರಿಂದ ಆಗುವ ಲಾಭಗಳೇನು?…Wearing Flower

ಬೆಂಗಳೂರು:  ಹೆಣ್ಣುಮಕ್ಕಳು ತಲೆಗೆ ಎಣ್ಣೆ ಹಚ್ಚಿ, ತಲೆ ಬಾಚಿಕೊಂಡು, ನೀಟಾಗಿ ಹೆಣೆದು, ಹೂವಿನಿಂದ ( Wearing…