ಯುವ ಜನತೆಯಲ್ಲಿ ರಾಷ್ಟ್ರೀಯ ಅರಿವು ಮೂಡಿಸಿ 

ಹಾನಗಲ್ಲ: ಯುವಶಕ್ತಿ ಸಾಮಾಜಿಕ ಜಾಲತಾಣಗಳಲ್ಲಿ ಸಿಲುಕಿಕೊಂಡು ದಾರಿ ತಪ್ಪುತ್ತಿದೆ, ಸಾಮಾಜಿಕ ಜವಾಬ್ದಾರಿ ಮರೆತು ಸ್ವೇಚ್ಛಾಚಾರದಿಂದ ನಡೆದುಕೊಳ್ಳುತ್ತಿದ್ದು, ವಿದ್ಯಾರ್ಥಿ ಸಂಘಟನೆಗಳು ಅವರಿಗೆ ಸಾಮಾಜಿಕ, ರಾಷ್ಟ್ರೀಯ ಕೊಡುಗೆಗಳ ಅರಿವು ಮೂಡಿಸಬೇಕಾದ ಅಗತ್ಯವಿದೆ ಎಂದು ಪ್ರಾಚಾರ್ಯ ಮಾರುತಿ ಶಿಡ್ಲಾಪುರ ಹೇಳಿದರು.
ಪಟ್ಟಣದ ನ್ಯೂ ಸಂಯುಕ್ತ ಪದವಿ ಪೂರ್ವ ಕಾಲೇಜ್​ನಲ್ಲಿ ಶನಿವಾರ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಆಯೋಜಿಸಿದ ಹಾನಗಲ್ಲ ನಗರ ಘಟಕದ ವಿದ್ಯಾರ್ಥಿ ಅಭ್ಯಾಸ ವರ್ಗದ ಸಮಾರೋಪದಲ್ಲಿ ಅವರು ಮಾತುನಾಡಿದರು. ವಿದ್ಯಾರ್ಥಿಗಳಲ್ಲಿ ವಿಧೇಯತೆ ಹಾಗೂ ಶಿಸ್ತಿನ ಕೊರತೆ ಕಾಣುತ್ತಿದ್ದೇವೆ. ಯುವ ಸಮುದಾಯ ದೇಶಭಕ್ತಿ ಒಳಗೊಂಡ ವ್ಯಕ್ತಿತ್ವ ನಿರ್ವಣಕ್ಕೆ ಮುಂದಾಗಬೇಕು ಎಂದರು.
ವಿದ್ಯಾರ್ಥಿ ಪರಿಷತ್ ಜಿಲ್ಲಾ ಸಂಚಾಲಕ ಶ್ರೀಕಾಂತ ಭಾವೀಕಟ್ಟಿ ಮಾತನಾಡಿ, ವಿದ್ಯಾರ್ಥಿ ಪರಿಷತ್ ಯಾವುದೇ ಜಾತಿ-ಪಕ್ಷದ ಮುಖವಾಣಿಯಲ್ಲ. ಸಂಘಟನೆಯ ಮೂಲಕ ವಿದ್ಯಾರ್ಥಿಗಳಿಗೆ ಅಗತ್ಯ ಸೌಲಭ್ಯ ದೊರಕಿಸಿಕೊಡುವುದೇ ನಮ್ಮ ಉದ್ದೇಶ. ಜಾತಿ- ಮತದ ಹೆಸರಿನಲ್ಲಿ ವಿದ್ಯಾರ್ಥಿಗಳನ್ನು ಒಡೆಯುತ್ತಿರುವ ಸರ್ಕಾರಗಳ ಬಗೆಗೆ ಎಚ್ಚರ ವಹಿಸಿ, ಎಲ್ಲ ಸಮುದಾಯಗಳಲ್ಲಿನ ಬಡವರಿಗೆ ಸರ್ಕಾರಿ ಸೌಲಭ್ಯ ಲಭ್ಯವಾಗುವಂತೆ ನೋಡಿಕೊಳ್ಳಬೇಕು ಎಂದರು.</p><p>ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವಿಭಾಗೀಯ ಪ್ರಮುಖ ಎ.ವಿ. ಲಕ್ಕನಗೌಡರ ಮಾತನಾಡಿ, ಸಂಘಟನೆಯ ಉದ್ದೇಶ ಒಳ್ಳೆಯದಾಗಿರಬೇಕು. ದೇಶಭಕ್ತಿಯ ಸಿದ್ಧಾಂತ ಅಖಿಲ ಭಾರತ ವಿದ್ಯಾರ್ಥಿ ಪರಿಷತ್​ನ ಧ್ಯೇಯವಾಗಿದೆ ಎಂದರು.
ಜಿಲ್ಲಾ ಸಂಚಾಲಕ ಗಂಗಾಧರ ಹಂಜಗಿ, ಸಂಘಟಕರಾದ ಮಲ್ಲಪ್ಪ ನಾಗರವಳ್ಳಿ, ಬಸವರಾಜ ಮಟ್ಟಿಮನಿ, ಭರತ ಹುಳ್ಳಿಕಾಶಿ, ಭೀಮಣ್ಣ ಮೇಲಿನಮನಿ, ಗಿರೀಶ ಕೊಲ್ಲಾಪುರ, ಸಚಿನ್ ಓಲೇಕಾರ, ಆಶ್ವಿನಿ ಹಳೇಕೋಟಿ, ಪೂಜಾ ಈಳಿಗೇರ, ಭಾಗ್ಯಾ ಸಂಕಪಾಳೆ ಉಪಸ್ಥಿತರಿದ್ದರು.
ಯುವಕರಲ್ಲಿ ದೇಶದ ಸಂಸ್ಕೃತಿಯನ್ನು ಉಳಿಸಿ-ಬೆಳೆಸುವ ಹೊಣೆಗಾರಿಕೆಯ ಅರಿವು ಮೂಡಿಸುವುದು ಹಾಗೂ ಶಕ್ತಿಶಾಲಿ ದೇಶ ನಿರ್ವಣಕ್ಕೆ ಹಾಗು ಸುಸಂಸ್ಕೃತ ಬದುಕು ಅಳವಡಿಸಿಕೊಳ್ಳುವಂತೆ ಸಲಹೆ ನೀಡಿವುದು ವಿದ್ಯಾರ್ಥಿ ಸಂಘಟನೆಗಳ ಜವಾಬ್ದಾರಿಯಾಗಿದೆ.
| ಮಾರುತಿ ಶಿಡ್ಲಾಪುರ, ಪ್ರಾಚಾರ್ಯ