Tuesday, 11th December 2018  

Vijayavani

Breaking News

ಸಂಕ್ರಾಂತಿ ಸಂಭ್ರಮ: ಕೂಡಲಸಂಗಮದಲ್ಲಿ ಭಕ್ತರ ಪವಿತ್ರ ಸ್ನಾನ

Sunday, 14.01.2018, 10:34 AM       No Comments

ಬಾಗಲಕೋಟೆ: ಇಂದು ಎಲ್ಲೆಡೆ ಸಂಕ್ರಾಂತಿ ಸಂಭ್ರಮ ಮನೆಮಾಡಿದ್ದು, ಕೂಡಲಸಂಗಮ ಶ್ರೀ ಕ್ಷೇತ್ರದಲ್ಲಿಯೂ ಮಕರ ಸಂಕ್ರಾಂತಿಯನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ.

ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಕೂಡಲಸಂಗಮಕ್ಕೆ ಭಕ್ತರು ಆಗಮಿಸುತ್ತಿದ್ದು, ಪವಿತ್ರ ನದಿ ಸ್ನಾನಕ್ಕೆ ಮುಂದಾಗುತ್ತಿದ್ದಾರೆ.

ಕೃಷ್ಣಾ, ಘಟಪ್ರಭಾ, ಮಲಪ್ರಭಾ ನದಿಗಳ ಸಂಗಮ ಕ್ಷೇತ್ರಕ್ಕೆ ನಾಡಿನ ವಿವಿಧೆಡೆಯಿಂದ ಮಕ್ಕಳು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಬೆಳಗ್ಗೆಯಿಂದಲೇ ಪವಿತ್ರ ನದಿ ಸ್ನಾನ ಮಾಡುತ್ತಿದ್ದಾರೆ.

ನದಿ ಸ್ನಾನ ಮುಗಿಸಿಕೊಂಡು ಶ್ರೀ ಕ್ಷೇತ್ರದ ಸಂಗಮನಾಥ ಮತ್ತು ಬಸವಣ್ಣನ ಐಕ್ಯ ಮಂಟಪಕ್ಕೆ ಭೇಟಿ ನೀಡುತ್ತಿದ್ದು, ಧಾರ್ಮಿಕ ವಿಧಿ-ವಿಧಾನದಂತೆ ಸಂಕ್ರಾಂತಿಯನ್ನು ಆಚರಿಸಲಾಗುತ್ತಿದೆ. (ದಿಗ್ವಿಜಯ ನ್ಯೂಸ್)

Leave a Reply

Your email address will not be published. Required fields are marked *

Back To Top