ಮೈಸೂರು ಡಿಸಿ ಸೇರಿ 21 IAS ಅಧಿಕಾರಿಗಳ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ: ಯಾರು? ಎಲ್ಲಿಗೆ? ಇಲ್ಲಿದೆ ಪಟ್ಟಿ

Vidhanasoudha

ಬೆಂಗಳೂರು: ಆಡಳಿತ ವರ್ಗಕ್ಕೆ ಮೇಜರ್​ ಸರ್ಜರಿ ಮಾಡಿರುವ ರಾಜ್ಯ ಸರ್ಕಾರ, ಒಟ್ಟು 21 ಐಎಎಸ್​ ಅಧಿಕಾರಿಗಳನ್ನು ತಕ್ಷಣ ಜಾರಿಗೆ ಬರುವಂತೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಮೊನ್ನೆಯಷ್ಟೇ (ಜುಲೈ 3) 25 ಐಪಿಎಸ್​ ಅಧಿಕಾರಿಗಳನ್ನು ಸರ್ಕಾರ ವರ್ಗಾವಣೆ ಮಾಡಿತ್ತು. ಇದರ ಬೆನ್ನಲ್ಲೇ ಆಡಳಿತ ವಿಭಾಗಕ್ಕೂ ಚುರುಕು ಮುಟ್ಟಿಸಿದೆ.

ವರ್ಗಾವಣೆಯಾದ ಎಲ್ಲ ಅಧಿಕಾರಿಗಳು ಕೂಡಲೇ ನೂತನ ಜಾಗಗಳಿಗೆ ರಿಪೋರ್ಟ್‌ ಮಾಡಿಕೊಳ್ಳುವಂತೆ ರಾಜ್ಯ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಸಹಾಯಕ ಕಾರ್ಯದರ್ಶಿ ಯುಕೇಶ್‌ ಕುಮಾರ್‌ ಎಸ್.‌ ನಿರ್ದೇಶಿಸಿದ್ದಾರೆ.

ಅಧಿಕಾರಿಗಳ ಹೆಸರು ಮತ್ತು ವರ್ಗಾವಣೆಯಾದ ವಿವರ ಈ ಕೆಳಕಂಡಂತಿದೆ
1. ಡಾ. ರಾಮ್‌ ಪ್ರಸಾದ್‌ ಮನೋಹರ್‌ ವಿ (ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ)
2. ನಿತೇಶ್‌ ಪಾಟೀಲ್‌ (ಎಂಎಸ್‌ಎಂಇ ನಿರ್ದೇಶಕ)
3. ಡಾ. ಅರುಂಧತಿ ಚಂದ್ರಶೇಖರ್‌ (ಪಂಚಾಯತ್‌ರಾಜ್‌ ಕಮಿಷನರ್‌)
4. ಜ್ಯೋತಿ ಕೆ (ಜವಳಿ ಅಭಿವೃದ್ಧಿ ಆಯುಕ್ತ ಕೈಮಗ್ಗ ನಿರ್ದೇಶಕ)
5. ಶ್ರೀಧರ ಸಿ.ಎನ್‌ (ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸೋಶಿಯಲ್‌ ಆಡಿಟ್‌ ನಿರ್ದೇಶಕ)
6. ಡಾ. ರಾಜೇಂದ್ರ ಕೆ.ವಿ (ಪ್ರವಾಸೋದ್ಯಮ ಇಲಾಖೆ ನಿರ್ದೇಶಕ)
7. ಚಂದ್ರಶೇಖರ ನಾಯಕ ಎಲ್. (ವಾಣಿಜ್ಯ ತೆರಿಗೆ ಹೆಚ್ಚುವರಿ ಆಯುಕ್ತ)
8. ವಿಜಯಮಹಾಂತೇಶ್‌ ಬಿ.ದಾನಮ್ಮನವರ್‌ (ಹಾವೇರಿ ಜಿಲ್ಲಾಧಿಕಾರಿ)
9. ಗೋವಿಂದ ರೆಡ್ಡಿ (ಗದಗ ಜಿಲ್ಲಾಧಿಕಾರಿ)
10. ರಘುನಂದನ್‌ ಮೂರ್ತಿ (ಖಜಾನೆ ಆಯುಕ್ತ ಬೆಂಗಳೂರು)
11. ಡಾ. ಗಂಗಾಧರಸ್ವಾಮಿ ಜಿ.ಎಂ (ದಾವಣಗೆರೆ ಜಿಲ್ಲಾಧಿಕಾರಿ)
12. ಲಕ್ಷ್ಮೀಕಾಂತ ರೆಡ್ಡಿ (ಮೈಸೂರು ಜಿಲ್ಲಾಧಿಕಾರಿ)
13. ನಿತೀಶ್‌ ಕೆ (ರಾಯಚೂರು ಜಿಲ್ಲಾಧಿಕಾರಿ)
14. ಮೊಹಮ್ಮದ್‌ ರೋಶನ್‌ (ಬೆಳಗಾವಿ ಜಿಲ್ಲಾಧಿಕಾರಿ)
15. ಶಿಲ್ಪಾ ಶರ್ಮಾ (ಬೀದರ್‌ ಜಿಲ್ಲಾಧಿಕಾರಿ)
16. ದಿಲೇಶ್‌ ಸಸಿ (ಇ- ಆಡಳಿತ ಕೇಂದ್ರ ಸಿಇಒ ಬೆಂಗಳೂರು)
17. ಲೋಖಂಡೆ ಸ್ನೇಹಲ್‌ ಸುಧಾಕರ್‌ (ಕರ್ನಾಟಕ ವಿದ್ಯುತ್‌ ಕಾರ್ಖಾನೆ ಎಂಡಿ)
18. ಶ್ರೀರೂಪಾ (ಪಶುಸಂಗೋಪನೆ ಮತ್ತು ಪಶುವೈದ್ಯ ಸೇವೆ ಇಲಾಖೆ ಆಯುಕ್ತೆ)
19. ಜಿಟ್ಟೆ ಮಾಧವ ವಿಠಲ ರಾವ್ (ಬಾಗಲಕೋಟೆ ಪುನರ್ವಸತಿ ಕೇಂದ್ರದ ಜನರಲ್‌ ಮ್ಯಾನೇಜರ್‌)
20. ಹೇಮಂತ್‌ ಎನ್. (ಶಿವಮೊಗ್ಗ ಜಿ.ಪಂ ಸಿಇಒ)
21. ನೊಂಗ್ಲಜ್‌ ಮೊಹಮದ್‌ ಅಲಿ ಅಕ್ರಂ ಶಾ (ಹೊಸಪೇಟೆ ವಿಜಯನಗರ ಜಿ.ಪಂ ಸಿಇಒ)

ಪೊಲೀಸ್​ ಇಲಾಖೆಗೆ ಮೇಜರ್​ ಸರ್ಜರಿ: 25 IPS ಅಧಿಕಾರಿಗಳ ವರ್ಗಾವಣೆ, ಮೈಸೂರು, ಮಂಡ್ಯ ಎಸ್​ಪಿ ಬದಲಾವಣೆ

ತೂಕ ಕಳೆದುಕೊಳ್ಳಲು ಕಸರತ್ತು ಮಾಡುತ್ತಿದ್ದೀರಾ? ಈ ನಿಯಮಗಳನ್ನು ಅನುಸರಿಸಿ ಚಮತ್ಕಾರ ನೋಡಿ…

Share This Article

ಊಟದ ಬಳಿಕ ಬೆಲ್ಲದ ಸೇವನೆಯಿಂದಾಗುವ ಪ್ರಯೋಜನ ಗೊತ್ತಾ?; ತಿಳಿದ್ರೆ ನೀವು ಮಿಸ್​ ಮಾಡೋದೆ ಇಲ್ಲ | Health Tips

ಭಾರತದಲ್ಲಿ ಬೆಲ್ಲವನ್ನು ಸಾಮಾನ್ಯವಾಗಿ ಊಟದ ನಂತರ ತಿನ್ನಲಾಗುತ್ತದೆ. ನಿಮ್ಮ ಹಸಿವನ್ನು ನೀಗಿಸಲು ಇದನ್ನು ಸಿಹಿಯಾಗಿ ಸೇವಿಸಬಹುದು.…

ಟೊಮೆಟೊ ಸೇವನೆ ಕ್ಯಾನ್ಸರ್​ ಅಪಾಯವನ್ನು ಕಡಿಮೆ ಮಾಡುತ್ತದೆಯೇ; ಈ ಬಗ್ಗೆ ತಜ್ಞರು ಹೇಳೋದೇನು? | Health Tips

ಕ್ಯಾನ್ಸರ್ ಚಿಕಿತ್ಸೆಯು ಇನ್ನೂ ಅತ್ಯಂತ ದುಬಾರಿ ಮತ್ತು ಅಸಾಧ್ಯವಾಗಿದೆ. ಇತ್ತೀಚೆಗೆ ಯುವಕರನ್ನೂ ಕಾಡುತ್ತಿರುವ ರೋಗ ಕ್ಯಾನ್ಸರ್​​.…

ಚಳಿಗಾಲದಲ್ಲಿ ಅಲೋವೆರಾ ಜೆಲ್ ಅನ್ನು ತಲೆಗೆ ಹಚ್ಚಿಕೊಳ್ಳಬಹುದೇ? aloe vera gel benefits

aloe vera gel benefits : ಚಳಿಗಾಲದಲ್ಲಿ ತಲೆಹೊಟ್ಟು ಸಾಮಾನ್ಯ. ಚಳಿಗಾಲದಲ್ಲಿ ಶುಷ್ಕ ಗಾಳಿಯು ನಮ್ಮ…