Major Changes | ನವೆಂಬರ್​ ತಿಂಗಳಲ್ಲಿ ಈ 5 ಬದಲಾವಣೆಗಳಾಗೋದು ಫಿಕ್ಸ್​​; ಯಾವ ಕ್ಷೇತ್ರ, ಇಲ್ಲಿದೆ ಡೀಟೇಲ್ಸ್​

blank

ನವದೆಹಲಿ: ನವೆಂಬರ್​ 1ರಿಂದ (ನಾಳೆಯಿಂದ) ಆರ್​ಬಿಐನ ಹೊಸ ನಿಯಮದಂತಹ ದೇಶೀಯ ಹಣ ವರ್ಗಾವಣೆ (DMT), ಕ್ರೆಡಿಟ್ ಕಾರ್ಡ್ ಬದಲಾವಣೆಗಳು ಮತ್ತು LPG ಸಿಲಿಂಡರ್ ಬೆಲೆಗಳು ಸೇರಿದಂತೆ ಹಲವಾರು ಆರ್ಥಿಕ ಬದಲಾವಣೆಗಳು(Major Changes) ಆಗಲಿವೆ ಎಂದ ಮೂಲಗಳು ತಿಳಿಸಿವೆ. ಏನೆಲ್ಲಾ ಬದಲಾವಣೆ ಆಗಲಿದೆ ಎಂಬ ಮಾಹಿತಿಯನ್ನು ಇಲ್ಲಿ ತಿಳಿಸಲಾಗಿದೆ.

blank

ಇದನ್ನು ಓದಿ: ನಗರ ನಕ್ಸಲರನ್ನು ಗುರುತಿಸಿ ಬಯಲಿಗೆಳೆಯಬೇಕಿದೆ; ಪ್ರಧಾನಿ Narendra Modi

SBI ಕ್ರೆಡಿಟ್ ಕಾರ್ಡ್ ನಿಯಮಗಳಲ್ಲಿ ಬದಲಾವಣೆ

ಇದು ದೇಶದ ಅತಿದೊಡ್ಡ ಸರ್ಕಾರಿ ಬ್ಯಾಂಕ್‌ಗೆ ಸಂಬಂಧಿಸಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಅಂಗಸಂಸ್ಥೆಯಾದ ಎಸ್​ಬಿಐ ತನ್ನ ಕ್ರೆಡಿಟ್ ಕಾರ್ಡ್ ಮೂಲಕ ಯುಟಿಲಿಟಿ ಬಿಲ್ ಪಾವತಿಗಳು ಮತ್ತು ಹಣಕಾಸು ಶುಲ್ಕಗಳಿಗೆ ಸಂಬಂಧಿಸಿದ ಪ್ರಮುಖ ಬದಲಾವಣೆಗಳನ್ನು ನವೆಂಬರ್ 1 ರಿಂದ ಜಾರಿಗೆ ತರಲಿದೆ. ನವೆಂಬರ್ 1 ರಿಂದ ಅಸುರಕ್ಷಿತ ಎಸ್‌ಬಿಐ ಕ್ರೆಡಿಟ್ ಕಾರ್ಡ್‌ಗಳಿಗೆ ಪ್ರತಿ ತಿಂಗಳು 3.75 ರೂಪಾಯಿಗಳ ಹಣಕಾಸು ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಇದರ ಹೊರತಾಗಿ ವಿದ್ಯುತ್, ನೀರು, ಎಲ್​​ಪಿಜಿ ಸಿಲಿಂಡರ್​​ ಮತ್ತು ಇತರ ಯುಟಿಲಿಟಿ ಸೇವೆಗಳಿಗೆ 50,000 ರೂಪಾಯಿಯನ್ನು ಮೀರಿದರೆ ಹೆಚ್ಚಿನ ಪಾವತಿಗೆ 1 ಪ್ರತಿಶತ ಹೆಚ್ಚುವರಿ ಶುಲ್ಕವನ್ನು ವಿಧಿಸಲಾಗುತ್ತದೆ.

ಹಣ ವರ್ಗಾವಣೆ ನಿಯಮಗಳಲ್ಲಿ ಬದಲಾವಣೆ

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಡೊಮೆಸ್ಟಿಕ್ ಮನಿ ಟ್ರಾನ್ಸ್ಫರ್ (DMT)ಗಾಗಿ ಹೊಸ ನಿಯಮಗಳನ್ನು ಘೋಷಿಸಿದ್ದು, ಇದು ಕೂಡ ನಾಳೆಯಿಂದ ಜಾರಿಗೆ ಬರಲಿದೆ. ವಂಚನೆಗಾಗಿ ಬ್ಯಾಂಕಿಂಗ್ ಚಾನೆಲ್‌ಗಳ ದುರ್ಬಳಕೆಯನ್ನು ತಡೆಯುವುದು ಈ ನಿಯಮಗಳ ಉದ್ದೇಶವಾಗಿದೆ

LPG ಸಿಲಿಂಡರ್ ಬೆಲೆ

ಪ್ರತಿ ತಿಂಗಳ ಮೊದಲ ದಿನ, ಪೆಟ್ರೋಲಿಯಂ ಕಂಪನಿಗಳು ಗ್ಯಾಸ್ ಸಿಲಿಂಡರ್​​ಗಳ ಬೆಲೆಗಳನ್ನು (LPG ಸಿಲಿಂಡರ್ ಬೆಲೆ) ಬದಲಾಯಿಸುತ್ತವೆ ಮತ್ತು ಹೊಸ ದರಗಳನ್ನು ಬಿಡುಗಡೆ ಮಾಡುತ್ತವೆ. ಈ ಬಾರಿಯೂ ಅದರ ಬೆಲೆಗಳನ್ನು ನವೆಂಬರ್ 1ರಂದು ಪರಿಷ್ಕರಿಸಬಹುದು. ಬಹುಕಾಲದಿಂದ ಸ್ಥಿರವಾಗಿರುವ 14 ಕೆಜಿ ಎಲ್​​ಪಿಜಿ ಸಿಲಿಂಡರ್ ಬೆಲೆಯಲ್ಲಿ ಈ ಬಾರಿ ಇಳಿಕೆಯಾಗುವ ನಿರೀಕ್ಷೆಯಲ್ಲಿದ್ದಾರೆ.

ರೈಲು ಟಿಕೆಟ್ ಬದಲಾವಣೆ

ಭಾರತೀಯ ರೈಲ್ವೆಯು 1 ನವೆಂಬರ್ 2024 ರಿಂದ ರೈಲು ಟಿಕೆಟ್‌ಗಳ ಮುಂಗಡ ಬುಕಿಂಗ್ ಅವಧಿಯಲ್ಲಿ ಬದಲಾವಣೆಗಳನ್ನು ಪ್ರಕಟಿಸಿದೆ. ಈಗ ಮುಂಗಡ ಕಾಯ್ದಿರಿಸುವಿಕೆಯ ಅವಧಿಯನ್ನು (ಎಆರ್‌ಪಿ) 120 ದಿನಗಳಿಂದ 60 ದಿನಗಳಿಗೆ ಇಳಿಸಲಾಗಿದೆ. ಟಿಕೆಟ್ ಖರೀದಿ ಪ್ರಕ್ರಿಯೆಯನ್ನು ಸರಳೀಕರಿಸುವ ಮೂಲಕ ಪ್ರಯಾಣಿಕರ ಅನುಕೂಲವನ್ನು ಕಾಪಾಡುವುದು ಈ ತಿದ್ದುಪಡಿಯ ಉದ್ದೇಶವಾಗಿದೆ.

TRAIನ ಹೊಸ ನಿಯಮ

ಸ್ಪ್ಯಾಮ್ ಮತ್ತು ವಂಚನೆಯನ್ನು ಪರಿಶೀಲಿಸಲು ಹೊಸ ನಿಯಮಗಳ ಭಾಗವಾಗಿ ಟೆಲಿಕಾಂ ಕಂಪನಿಗಳು ಮೆಸೇಜ್​​ ಟ್ರೆಸಿಬಿಲಿಟಿಯನ್ನು ತರುತ್ತಿದ್ದಾರೆ. ಸ್ಪ್ಯಾಮ್  ಸಂದೇಶಗಳನ್ನು ಮೇಲ್ವಿಚಾರಣೆ ಮಾಡುವುದರ ಜತೆಗೆ ಟ್ರ್ಯಾಕ್ ಮಾಡಲಾಗುತ್ತದೆ. (ಏಜೆನ್ಸೀಸ್​)

ಭಾರತ ಸೇರಿ 15 ದೇಶಗಳ ಮೇಲೆ America ನಿರ್ಬಂಧ; ವಿಶ್ವದ ದೊಡ್ಡಣ್ಣ ಮಾಡಿರುವ ಗಂಭೀರ ಆರೋಪ ಹೀಗಿದೆ..

Share This Article

ಬೆಳಿಗ್ಗೆ ಎದ್ದ ತಕ್ಷಣ ಹೀಗೆ ಮಾಡಿ..ನಿಮ್ಮ ದೇಹದ ಕೊಬ್ಬು ತಕ್ಷಣ ಕಡಿಮೆಯಾಗುತ್ತದೆ! weight loss

weight loss: ಇತ್ತೀಚಿನ ದಿನಗಳಲ್ಲಿ, ಹೊಟ್ಟೆಯ ಸುತ್ತ ಇರುವ ಮೊಂಡುತನದ ಕೊಬ್ಬನ್ನು ಕಡಿಮೆ ಮಾಡುವುದು (ತೂಕ…

ಎಸಿ, ಫ್ಯಾನ್​ ಇದ್ದರೂ ಬೆವರುತ್ತಿದ್ದೀರಾ?; ತಂಪಿನ ಪ್ರದೇಶದಲ್ಲಿಯೂ ಇಷ್ಟೊಂದು ಹಿಟ್​ ಇರಲು ಕಾರಣವೇನು?: ಇಲ್ಲಿದೆ ಮಾಹಿತಿ | Sweating

Sweating: ಸಾಮಾನ್ಯವಾಗಿ ಬಹುತೇಕರು ಶಕೆಯಲ್ಲಿ ಬೆವರುವುದನ್ನು ಕಾಣುತ್ತೇವೆ. ಆದರೆ, ಇನ್ನು ಕೆಲ ಜನರು ತಾಪಮಾನ 35ಕ್ಕೂ…

ಕಾರಿನೊಳಗೆ ಮಕ್ಕಳನ್ನು ಆಡಲು ಬಿಡುತ್ತೀರಾ; ಇದು ಅವರ ಕೊನೆಯ ಆಟವಾಗಬಹುದು; ಪೋಷಕರು ಇದನ್ನು ತಿಳಿದಿರಲೇಬೇಕು| Car

Car| ಇತ್ತೀಚಿನ ದಿನಗಳಲ್ಲಿ ಪೋಷಕರ ಅಜಾಗರೂಕತೆಯಿಂದಾಗಿ ಕಾರಿನೊಳಗೆ ಆಟವಾಡುವಾಗ ಮಕ್ಕಳು ಮೃತಪಡುತ್ತಿರುವ ಪ್ರಕರಣಗಳು ಹೆಚ್ಚಾಗಿವೆ. ಪೋಷಕರು…