ಕಂಪ್ಲಿ: ಇಲ್ಲಿನ ಜೋಳ ಖರೀದಿ ಕೇಂದ್ರ ಮತ್ತು ದಾಸ್ತಾನು ಗೋದಾಮುಗಳಿಗೆ ಬಳ್ಳಾರಿ ಜಿಲ್ಲಾ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಜಂಟಿ ನಿರ್ದೇಶಕಿ ಸಕೀನಾ ಗುರುವಾರ ಭೇಟಿ ನೀಡಿ ಪರಿಶೀಲಿಸಿದರು.
ಜೋಳ ಖರೀದಿ ಕೇಂದ್ರದ ಕುರಿತು ರೈತರಿಂದ ದೂರುಗಳು ಬಂದಿದ್ದು, ನಮ್ಮ ಜೋಳವನ್ನು ಮೊದಲು ಖರೀದಿಸುವಂತೆ ಒತ್ತಾಯಿಸುತ್ತಾರೆ. ಮಳೆ ಬರುತ್ತೆ ಅನ್ನುವ ಭಯ ರೈತರಿಗಿದೆ. ಖರೀದಿ ಕೇಂದ್ರದ ಮಾರಾಟಗಾರ ದುಡ್ಡು ಪಡೆದು ಜೋಳ ಖರೀದಿಸಿದ್ದಾರೆ ಎನ್ನುವ ಆರೋಪದಲ್ಲಿ ಹುರುಳಿಲ್ಲ. ಜೋಳ ಖರೀದಿ ಮತ್ತು ದಾಸ್ತಾನು ಲೆಕ್ಕ, ಜೋಳ ದಾಸ್ತಾನು ಗುಣಮಟ್ಟ ಪರಿಶೀಲಿಸಿದ್ದು, ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು ಎಂದು ಸಕೀನಾ ತಿಳಿಸಿದರು.
ಗ್ರೇಡ್-1 ಉಗ್ರಾಣ ವ್ಯವಸ್ಥಾಪಕಿ ಅನುಪಮ ಮಾತನಾಡಿ, ದಾಸ್ತಾನು ಮಾಡಿದ ಚೀಲಗಳ ಸಂಖ್ಯೆ ಸರಿಯಾಗಿದೆ. ಎಲ್ಲ ಗೋದಾಮುಗಳಲ್ಲಿ ಲಾಟ್‌ಗಳನ್ನು ಪರಿಶೀಲಿಸುವಂತೆ ತಿಳಿಸಿದರು. ಆಹಾರ ಶಿರಸ್ತೇದಾರರಾದ ಶರಣಯ್ಯಸ್ವಾಮಿ, ರವಿ ರಾಥೋಡ್, ಆಹಾರ ನಿರೀಕ್ಷಕ ವಿರೂಪಾಕ್ಷಗೌಡ ಇತರರಿದ್ದರು.