Tuesday, 11th December 2018  

Vijayavani

Breaking News

ಶವದ ಮೇಲೆ ರಾಜಕೀಯ ಮಾಡುವುದನ್ನು ಬಿಡಬೇಕು: ಸಿದ್ದರಾಮಯ್ಯ

Sunday, 07.01.2018, 11:47 AM       No Comments

ಶಿವಮೊಗ್ಗ: ಶವದ ಮೇಲೆ ರಾಜಕೀಯ ಮಾಡುವುದನ್ನು ಬಿಡಬೇಕು. ಸಮಾಜದಲ್ಲಿ ಸಾಮರಸ್ಯ ಕಾಪಾಡುವುದು ಎಲ್ಲರ ಜವಾಬ್ದಾರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಮಂಗಳೂರಿನಲ್ಲಿ ಹಲ್ಲೆಗೊಳಗಾಗಿದ್ದ ಅಬ್ದುಲ್​ ಬಶೀರ್​ ಭಾನುವಾರ ಬೆಳಗ್ಗೆ ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರು ಬಶೀರ್​ ಮೃತಪಟ್ಟಿರುವುದಕ್ಕೆ ಬಿಜೆಪಿ ಏಕೆ ಪ್ರತಿಭಟನೆ ಮಾಡುತ್ತಿಲ್ಲ? ಕೋಮುಭಾವನೆ ಬಿತ್ತುವುದನ್ನು ಬಿಡಬೇಕು ಎಂದು ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.

ಕರಾವಳಿಯಲ್ಲಿ ಗಲಭೆ ನಡೆಯಲು ಆರ್​ಎಸ್​ಎಸ್​, ಬಜರಂಗದಳ ಕಾರಣ. ದ್ವೇಷ ರಾಜಕಾರಣದಿಂದ ಸಮಾಜದ ಸ್ವಾಸ್ಥ್ಯ ಹಾಳಾಗುತ್ತದೆ. ಯಾವುದೇ ಸಂಘಟನೆ ನಿಷೇಧ ಮಾಡಲು ಸೂಕ್ತ ಸಾಕ್ಷ್ಯಾಧಾರ ಬೇಕಾಗುತ್ತದೆ ಎಂದು ಸಿಎಂ ತಿಳಿಸಿದ್ದಾರೆ.

ಶಾಂತಿಸಭೆ ನಡೆಸುವ ಸಮಯ ಬಂದಿದೆ: ಪ್ರತಾಪ್​ ಸಿಂಹ

ಅಬ್ದುಲ್​ ಬಶೀರ್​ ಮೃತಪಟ್ಟ ಹಿನ್ನಲೆಯಲ್ಲಿ ಮೈಸೂರು ಮತ್ತು ಕೊಡಗು ಸಂಸದ ಪ್ರತಾಪ್​ ಸಿಂಹ ಟ್ವೀಟ್​ ಮಾಡಿದ್ದು, ಹಿಂದು-ಮುಸ್ಲಿಂ ಶಾಂತಿ ಸಭೆ ನಡೆಸುವ ಸಮಯ ಬಂದಿದ್ದು, ರಾಜ್ಯ ಸರ್ಕಾರ ಈ ಕೂಡಲೇ ಶಾಂತಿ ಸಭೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

ರಾಜ್ಯ ಸರ್ಕಾರ ಕರ್ನಾಟಕದಲ್ಲಿ ಶಾಂತಿ ನೆಲೆಸುವ ಬಗ್ಗೆ ಲಕ್ಷ್ಯ ವಹಿಸಬೇಕು ಎಂದು ಸಿಂಹ ಟ್ವಿಟರ್​ನಲ್ಲಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. (ದಿಗ್ವಿಜಯ ನ್ಯೂಸ್)

Leave a Reply

Your email address will not be published. Required fields are marked *

Back To Top