ವಿಜಯಪುರ: ಸಾರ್ವಜನಿಕ ಪ್ರದೇಶಗಳು ನಮ್ಮದೇ ಆಸ್ತಿಯಾಗಳಾಗಿದ್ದು, ಅವುಗಳನ್ನು ಸ್ವಚ್ಛತೆಯಿಂದ ಕಾಪಾಡಿಕೊಂಡು ಹೋಗುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಎಬಿವಿಪಿ ನಗರ ಕಾರ್ಯದರ್ಶಿ ಸಂದೀಪ ಅರಳಗುಂಡಿ ಹೇಳಿದರು.
ನಗರದ ಸರ್ಕಾರಿ ಐಟಿಐ ಕಾಲೇಜಿನ ಆವರಣದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನಗರ ಟಕದ ವತಿಯಿಂದ ಇತ್ತೀಚೆಗೆ ಹಮ್ಮಿಕೊಂಡಿದ್ದ ಸ್ವಚ್ಛತಾ ಅಭಿಯಾನದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಭಾನುವಾರದ ತಮ್ಮ ರಜಾ ದಿನವನ್ನು ಸ್ವಚ್ಛತೆಗಾಗಿ ಆದ್ಯತೆ ನೀಡಬೇಕು.
ಪ್ರತಿ ಭಾನುವಾರವೂ ಕೂಡ ಒಂದು ಸಾರ್ವಜನಿಕ ಪ್ರದೇಶವನ್ನು ಆಯ್ಕೆ ಮಾಡಿ ಅಲ್ಲಿ ಸ್ವಚ್ಛತಾ ಶ್ರಮದಾನ ನಡೆಸುವ ಮೂಲಕ ನಗರದ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಬೇಕು ಎಂದು ಸಲಹೆ ನೀಡಿದರು.
ಎಬಿವಿಪಿ ಚೇತನ್ ಕೊರವಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಬಿವಿಪಿಯ ಐಶ್ವರ್ಯ ಆಸಂಗಿ, ದಾನಮ್ಮ ಹೊಸಮನಿ, ತಾರಾ ಕಡಕೋಳ, ಅಂಜು ಜಾಧವ, ಮಹೇಗೌಡ ಮಿರ್ಜಿ, ಆನಂದ ಪೂಜಾರಿ, ಸುರೇಶ ಲೋನಾರ, ಕಾರ್ತಿಕ ಮಾಳಿ, ಬಾಲಾಜಿ ಬಿರಾದಾರ, ರಮೇಶ ನಾಟಿಕಾರ, ದುಂಡಪ್ಪ ನೆಲೋಗಿ, ಚೇತನ ಬೊಳ್ಳೆದ, ಪ್ರವಿಣ್ ಗುರಾಗೊಂದಾಗಿ ಮತ್ತಿತರರಿದ್ದರು.