ತಿಪ್ಪೆಗುಂಡಿ ಸ್ಥಳಾಂತರಿಸಿ

ಹಾನಗಲ್ಲ: ಗ್ರಾಮದ ರಸ್ತೆ ಹಾಗೂ ಗಟಾರಗಳಲ್ಲಿ ನೀರು ನಿಲ್ಲದಂತೆ ಜಾಗ್ರತೆ ವಹಿಸಿ, ಮಲೇರಿಯಾ ಹಾಗೂ ಡೆಂಘೆಯಂಥ ಜ್ವರಗಳ ನಿಯಂತ್ರಣಕ್ಕೆ ಗ್ರಾಮದ ಮಧ್ಯದಲ್ಲಿರುವ ತಿಪ್ಪೆಗಳನ್ನು ಹೊರವಲಯಕ್ಕೆ ಸ್ಥಳಾಂತರಿಸಿ ಎಂದು ಶಾಸಕ ಸಿ.ಎಂ. ಉದಾಸಿ ಮನವಿ ಸೂಚನೆ ನೀಡಿದರು.

ತಾಲೂಕಿನ ಅರಳೇಶ್ವರ ಗ್ರಾಮ ಪಂಚಾಯಿತಿಯಲ್ಲಿ ಗುರುವಾರ ಸ್ವಚ್ಛಭಾರತ ಮಿಷನ್ ಯೋಜನೆಯಡಿ ಆಯೋಜಿಸಿದ್ದ ಸ್ವಚ್ಛ ಸರ್ವೆಕ್ಷಣ ಗ್ರಾಮೀಣ-2018 ತಾಲೂಕು ಮಟ್ಟದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ನೀರಿನ ಮೂಲಕವೇ ಹೆಚ್ಚು ರೋಗಗಳು ಬರುತ್ತಿರುವ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿಯೂ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ ಮಾಡಲಾಗಿದ್ದು, ಅವುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ತಾಲೂಕಿನಾದ್ಯಂತ ಇಂದಿನಿಂದಲೇ ಎಲ್ಲ ಗ್ರಾಪಂ ವ್ಯಾಪ್ತಿಯಲ್ಲಿ ಸ್ವಚ್ಛತಾ ಕಾರ್ಯ ಆರಂಭವಾಗಲಿವೆ. ಕೇಂದ್ರ ಸರ್ಕಾರ ರಸ್ತೆ, ವಿದ್ಯುತ್, ನೀರು, ನೀರಾವರಿಗೆ ಹೆಚ್ಚು ಅನುದಾನ ನೀಡುತ್ತಿದೆ. ರೈತರು ಉತ್ಪಾದಿಸುವ ಪ್ರಮುಖ 14 ಬೆಳೆಗಳಿಗೆ ಬೆಂಬಲ ಬೆಲೆ ಘೊಷಿಸಿದ್ದು, ಪ್ರಸಕ್ತ ವರ್ಷದಿಂದಲೇ ಜಾರಿಗೊಳ್ಳಲಿದೆ ಎಂದರು.

ತಾಪಂ ಸದಸ್ಯೆ ಸುಮಂಗಲಾ ಕನ್ನಕ್ಕನವರ, ಗ್ರಾಪಂ ಅಧ್ಯಕ್ಷ ಉದಯ ತಳವಾರ, ಉಪಾಧ್ಯಕ್ಷೆ ಪರವಿನ್​ಬಾನು ಕಮ್ಮಾರ, ಸದಸ್ಯ ನಾಗಪ್ಪ ಚಿಕ್ಕೇರಿ, ವೀರಭದ್ರಗೌಡ ಪಾಟೀಲ, ಮಾಜಿ ಸದಸ್ಯ ಬಸಣ್ಣ ತೋಟದ್, ಜಗದೀಶ ಹಿರೇಮಠ, ಮಲ್ಲೇಶಪ್ಪ ಕೂಡಲ, ತಾಲೂಕು ಪಂಚಾಯತ ಇಒ ಎಂ.ಶಶಿಧರ, ಬಿಇಒ ಎಚ್.ಶ್ರೀನಿವಾಸ, ಹಾನಗಲ್ಲ ಪುರಸಭೆ ಆರೋಗ್ಯಾಧಿಕಾರಿ ಎಂ.ಎ. ಚೂಡಿಗಾರ, ತಾಪಂ ಸಹಾಯಕ ನಿರ್ದೇಶಕ ಚನ್ನಬಸಪ್ಪ ಹಾವಣಗಿ ಉಪಸ್ಥಿತರಿದ್ದರು. ಬಸಣ್ಣ ಮಣ್ಣಮ್ಮನವರ ಸ್ವಾಗತಿಸಿದರು.