ಬಳ್ಳಾರಿ: ನಗರ ಸೇರಿ ಜಿಲ್ಲಾದ್ಯಂತ ಭಾರತ ಮುಷ್ಕರಕ್ಕೆ ಬುಧವಾರ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸದ ಕಾರಣ ಎಂದಿನಂತೆ ವಿದ್ಯಾರ್ಥಿಗಳು ತೆರಳಿದರು. ಮುನ್ನೆಚ್ಚರಿಕೆ ಕ್ರಮವಾಗಿ ರಾಯಲ್ ಸರ್ಕಲ್, ಮೋತಿ ಸರ್ಕಲ್, ಎಸ್ಪಿ ಸರ್ಕಲ್, ಸುಧಾ ಕ್ರಾಸ್ ಸೇರಿ ವಿವಿಧೆಡೆ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು.
ಮೋತಿ ವೃತ್ತದಲ್ಲಿ ವಿವಿಧ ಸಂಘಟನೆಗಳ ಮುಖಂಡರು ಸಾಂಕೇತಿಕ ಪ್ರತಿಭಟನೆ ನಡೆಸಿದರು. ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಸಾಥ್ ನೀಡಿದರು. ತುಂಗಭದ್ರಾ ರೈತ ಸಂಘದ ಅಧ್ಯಕ್ಷ ಪುರುಷೋತ್ತಮಗೌಡ ದರೂರು, ಮುಖಂಡರಾದ ಗೋವಿಂದ್, ಸುರೇಶ್, ರವಿಕಿರಣ್, ಜೆ.ಪಿ, ರಂಗಸ್ವಾಮಿ, ಜೆ. ಕೆ.ಈರಣ್ಣ, ಎಂ.ಶಾಂತಿ ಇತರರಿದ್ದರು.