More

  ಅಯೂಬ್ ಖಾನ್ ಅವರಿಗೆ ಬೆಳಗ್ಗೆ ಮೈಲ್ಯಾಕ್, ಮಧ್ಯಾಹ್ನ ವಸ್ತುಪ್ರದರ್ಶನ!

  ಮೈಸೂರು: ಮೈಸೂರಿನ ಮಾಜಿ ಮೇಯರ್ ಅಯೂಬ್ ಖಾನ್ ಅವರಿಗೆ ನೀಡಿದ್ದ ಅಧ್ಯಕ್ಷ ಸ್ಥಾನ ಬದಲಾಗಿದೆ. ಅವರನ್ನು ಗುರುವಾರ ಬೆಳಗ್ಗೆ ಮೈಲ್ಯಾಕ್ ಅಧ್ಯಕ್ಷ ಸ್ಥಾನಕ್ಕೆ ನೇಮಿಸಿರುವ ಆದೇಶ ಹೊರಡಿಸಲಾಗಿತ್ತು.

  ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದ ಅಯೂಬ್, ಆ ಹುದ್ದೆಯಲ್ಲಿ ಸಾರ್ವಜನಿಕರ ಒಡನಾಟ ಇರುವುದಿಲ್ಲ, ಹೆಚ್ಚಿನ ಚಟುವಟಿಕೆಗಳೂ ಇಲ್ಲ. ಆದ್ದರಿಂದ ಹುದ್ದೆ ಬದಲಿಸಿಕೊಡಿ, ಇಲ್ಲವಾದಲ್ಲಿ ಯಾವುದೇ ಸ್ಥಾನಮಾನವೂ ನನಗೆ ಬೇಡ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಿಳಿಸಿದ್ದರು. ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿಗಳು ಗುರುವಾರ ಮಧ್ಯಾಹ್ನದ ವೇಳೆಗೆ ಅಯೂಬ್ ಖಾನ್ ಅವರನ್ನು ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದಾರೆ.

  ಹುದ್ದೆ ಬದಲಾವಣೆ ಬಗ್ಗೆ ಸರ್ಕಾರದಿಂದ ಅಧಿಕೃತ ಆದೇಶ ಆಗಿರುವುದನ್ನು ಸ್ವತಃ ಅಯೂಬ್‌ಖಾನ್ ಖಚಿತಪಡಿಸಿದರು. ನನ್ನ ಕೋರಿಕೆ ಮೇರೆಗೆ ಮುಖ್ಯಮಂತ್ರಿ ಹುದ್ದೆ ಬದಲಾವಣೆ ಮಾಡಿಕೊಟ್ಟಿದ್ದಾರೆ. ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ನೇಮಿಸಿದ್ದಾರೆ. ಎರಡು ವರ್ಷಗಳವರೆಗೆ ಅಧಿಕಾರದ ಅವಧಿಯನ್ನು ನೀಡಲಾಗಿದೆ. ಮಾರ್ಚ್ 2ರಂದು ಅಧಿಕಾರ ಸ್ವೀಕರಿಸುತ್ತೇನೆ ಎಂದು ತಿಳಿಸಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts