ಪಾರ್ಶ್ವನಾಥ ಸ್ವಾಮಿ ಪ್ರತಿಷ್ಠಾಪನಾ ಮಹೋತ್ಸವ

ಕಳಸ: ಬಲಿಗೆ ಶ್ರೀಕ್ಷೇತ್ರ ಸುವರ್ಣ ಭದ್ರಗಿರಿಯ ಭಗವಾನ್ 1008 ಶ್ರೀ ಪಾರ್ಶ್ವನಾಥಸ್ವಾಮಿ ನೂತನ ಜಿನಮಂದಿರ ಮತ್ತು ಮಾನಸ್ತಂಭೋಪರಿ ಜಿನಬಿಂಬಗಳ ಪಂಚಕಲ್ಯಾಣ ಪ್ರತಿಷ್ಠಾ ಮಹೋತ್ಸವ ಅತ್ಯಂತ ವಿಜೃಂಭಣೆಯಿಂದ ನೆರವೇರಿತು.

ಮಾ.8ರಿಂದ 13ರವರೆಗೆ ನಡೆದ ಕಾರ್ಯಕ್ರಮದಲ್ಲಿ ನೂರಾರು ಜೈನ ಶ್ರಾವಕ, ಶ್ರಾವಕಿಯರು ಪಾಲ್ಗೊಂಡಿದ್ದರು. ಬುಧವಾರ ನಮೋಕಾರ ಮಹಾಮಂತ್ರದೊಂದಿಗೆ ಸುಪ್ರಭಾತ ಸ್ತೋತ್ರ ನಂತರ ಮಂದಿರಕ್ಕೆ ಯಜಮಾನ ಪ್ರತೀಂದ್ರರ ಆಗಮನ, ನಿತ್ಯ ನಿಧಿ ಸರ್ವದೋಷ ನಿವಾರಣಾ ಆರಾಧನೆ, ಮಂಗಳ ಕುಂಭ ಆಗಮನ, ಪಂಚಾಮೃತಾಭಿಷೇಕ ಪೂಜೆ, ಮಹಾ ಶಾಂತಿಧಾರಾ, ಮೋಕ್ಷಾ ಕಲ್ಯಾಣ ಅಘರ್Âಗಳು ನಡೆದವು.

ಬೆಳಗ್ಗೆ ಮಾನ ಸ್ತಂಭೋಪರಿ ಬ್ರಹ್ಮಸ್ವರೂಪ ಚತುರ್ಮಖ ಜಿನಬಿಂಬ ಸ್ಥಾಪನೆ ನಡೆಯಿತು. ಧರಣೇಂದ್ರ ಯಕ್ಷ ಪ್ರತಿಷ್ಠೆ, ಪದ್ಮಾವತಿ ಅಮ್ಮ, ಕ್ಷೇತ್ರಪಾಲ ಪ್ರತಿಷ್ಠೆ, ಶೀಖರದ ಮೇಲೆ ಕಲಶಾರೋಹಣ ನಡೆಯಿತು. ನಂತರ ಜಿನ ಮಂದಿರದ ಮುಖೋದ್ಘಾಟನೆ ಮತ್ತು ಲೋಕಾರ್ಪಣೆ ಹಾಗೂ 1008 ಕಲಶಗಳಿಂದ ಮೂಲ ಸ್ವಾಮಿಗೆ ಮಹಾಭಿಷೇಕ ನಡೆಯಿತು.

ಮಧ್ಯಾಹ್ನ ಧಾರ್ವಿುಕ ಸಭಾ ಕಾರ್ಯಕ್ರಮ ಮಂಗಲ ಪ್ರವಚನ, ಧಮೋಪದೇಶ, ಆಚಾರ್ಯ ಶ್ರೀಗಳ ಸಂಘ ಪೂಜೆ, ಸತ್ಕಾರ ಸಮಾರಂಭ, ಸಂಜೆ ಧ್ವಜಾವರೋಹಣ, ಪ್ರತಿಷ್ಠಾಪಿತ ಮೂರ್ತಿಗಳನ್ನು ಜಿನಮಂದಿರದಲ್ಲಿ ಸ್ಥಾಪನೆ , ಪೂಜಾ ವಿಸರ್ಜನೆ ಕಾರ್ಯಕ್ರಮಗಳು ಜರುಗಿದವು.

ಮಳೆಗಾಗಿ ಪ್ರಾರ್ಥನೆ 16ಕ್ಕೆ: ಶ್ರೀ ಕಲಶೇಶ್ವರ ಸ್ವಾಮಿ ಸನ್ನಿಧಿಯಲ್ಲಿ ಮಾ.16ಕ್ಕೆ ಮಳೆಗಾಗಿ ವಿಶೇಷ ಪೂಜೆ ಹಾಗೂ ಪ್ರಾರ್ಥನೆ ನಡೆಯಲಿದೆ. ಶತವಾರ ರುದ್ರಾಭಿಷೇಕ, ಏಕಾದಶ ರುದ್ರಹೋಮ, ಪರ್ಜನ್ಯ ಜಪ ಮತ್ತು ಪರ್ಜನ್ಯ ಹೋಮ, ಶ್ರೀ ಸರ್ವಾಗಸುಂದರಿ ಅಮ್ಮನ ಸನ್ನಿಧಿಯಲ್ಲಿ ಸಹಸ್ರನಾಮ ಕುಂಕುಮಾರ್ಚನೆ, ಆನೆ ವಿಘ್ನೕಶ್ವರಸ್ವಾಮಿ ಸನ್ನಿಧಿಯಲ್ಲಿ ಚರುಬಲಿ ಸಮರ್ಪಣೆ ಹಾಗೂ ಮಹಾಪೂಜೆ ನಂತರ ಮಳೆಗಾಗಿ ವಿಶೇಷ ಪ್ರಾರ್ಥನೆ ನಡೆಯಲಿದೆ ಎಂದು ಕಲಶೇಶ್ವರ ಧಾರ್ವಿುಕ ಸೇವಾ ಪ್ರತಿಷ್ಠಾನ ತಿಳಿಸಿದೆ.