ನವದೆಹಲಿ: ಸ್ಕಾರ್ಪಿಯೋ ಏರ್ ಬ್ಯಾಗ್ ತೆರೆಯದ ಕಾರಣ ಅಪಘಾತದಲ್ಲಿ ಯುವಕ ಸಾವನ್ನಪ್ಪಿದ್ದಾನೆ ಎಂದು ಆರೋಪಿಸಿ ಕಾನ್ಪುರದಲ್ಲಿ ಆನಂದ್ ಮಹೀಂದ್ರಾ ಸೇರಿದಂತೆ 13 ಜನರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಮಹೀಂದ್ರಾ ಕಾರಿನಲ್ಲಿ ಯಾವುದೇ ದೋಷವಿಲ್ಲ ಮಹೀಂದ್ರಾ ವಿವರಣೆ ನೀಡಿದೆ.
ಉತ್ತರ ಪ್ರದೇಶದಲ್ಲಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ಡಾ.ಅಪೂರ್ವ್ ಮಿಶ್ರಾ ಸಾವಿಗೆ ಮಹೀಂದ್ರಾ ಕಂಪನಿಯ ವಾಹನ ಕಾರಣ ಎಂದು ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹೀಂದ್ರಾ ಕಂಪನಿ ಪ್ರತಿಕ್ರಿಯಿಸಿದೆ. ಸಾವಿಗೆ ಕಾರು ಕಾರಣ ಎಂಬ ಆರೋಪವನ್ನು ಮಹೀಂದ್ರ ತಳ್ಳಿಹಾಕಿದೆ. ಮೃತರು ಚಲಾಯಿಸುತ್ತಿದ್ದ ಸ್ಕಾರ್ಪಿಯೋ ಎಸ್ ಯುವಿ ಏರ್ ಬ್ಯಾಗ್ ಗಳಲ್ಲಿ ಯಾವುದೇ ದೋಷವಿಲ್ಲ ಎಂದು ವಿವರಿಸಿದ್ದಾರೆ.
ಪ್ರಕರಣದ ಹಿನ್ನೆಲೆ: ಉತ್ತರ ಪ್ರದೇಶದ ನಿವಾಸಿಯಾಗಿರುವ ರಾಜೇಶ್ ಮಿಶ್ರಾ ಎಂಬ ವ್ಯಕ್ತಿ ತನ್ನ ಮಗ ಡಾ. ಅಪೂರ್ವ್ ಮಿಶ್ರಾಗೆ 2020ರಲ್ಲಿ ಮಹೀಂದ್ರಾ ಮತ್ತು ಮಹೀಂದ್ರಾ ಸ್ಕಾರ್ಪಿಯೊ (ಎಸ್‌ಯುವಿ) ಕಾರನ್ನು ಉಡುಗೊರೆಯಾಗಿ ನೀಡಿದ್ದರು. 2022 ಜನವರಿ 14ರಂದು, ಅಪೂರ್ವ್ ಮಿಶ್ರಾ ಅವರು ತಮ್ಮ ಸ್ನೇಹಿತರೊಂದಿಗೆ ಕಾನ್ಪುರದಿಂದ ಲಕ್ನೋಗೆ ಹಿಂದಿರುಗುತ್ತಿದ್ದಾಗ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದರು. ಡಿವೈಡರ್ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಕಾರು ಚಲಾಯಿಸುತ್ತಿದ್ದ ಅಪೂರ್ವ್ ಪ್ರಾಣ ಕಳೆದುಕೊಂಡಿದ್ದಾರೆ. ಕಾರು ಚಾಲನೆ ಮಾಡುವಾಗ ತನ್ನ ಮಗ ಸೀಟ್ ಬೆಲ್ಟ್ ಧರಿಸಿದ್ದ ಮತ್ತು ಅಪಘಾತದ ಸಮಯದಲ್ಲಿ ಕಾರಿನ ಏರ್ ಬ್ಯಾಗ್ ತೆರೆಯದ ಕಾರಣ ಸಾವನ್ನಪ್ಪಿದ್ದಾನೆ ಎಂದು ಅಪೂರ್ವ ಮಿಶ್ರಾ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ.
ಕಂಪನಿಯ ಮುಖ್ಯಸ್ಥ ಆನಂದ್ ಮಹೀಂದ್ರಾ ಮತ್ತು ಕಂಪನಿಯ 12 ಜನರ ವಿರುದ್ಧ ಅವರು ದೂರು ದಾಖಲಿಸಿದರು, ಕಾರಿನಲ್ಲಿ (ಸ್ಕಾರ್ಪಿಯೊ ಎಸ್ 9) ಸುರಕ್ಷತೆಗಾಗಿ ಏರ್ ಬ್ಯಾಗ್‌ಗಳಿಲ್ಲ, ಇದರಿಂದಾಗಿ ತನ್ನ ಮಗ ಸಾವನ್ನಪ್ಪಿದ್ದಾನೆ. ಕಾರು ತಯಾರಿಕೆಯಲ್ಲಿ ಮಹೀಂದ್ರಾ ಕಂಪನಿಯ ನಿರ್ಲಕ್ಷ್ಯವೇ ಮಗನ ಸಾವಿಗೆ ಕಾರಣವಾಗಿದ್ದು, ಇದಕ್ಕೆ ಕಂಪನಿಯೇ ಹೊಣೆಯಾಗಬೇಕು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಮಹೀಂದ್ರಾ ವಾಹನಗಳ ಸುರಕ್ಷತಾ ಮಾನದಂಡಗಳ ಬಗ್ಗೆ ಹಲವರು ಅನುಮಾನ ವ್ಯಕ್ತಪಡಿಸಿದ್ದಾರೆ. ಆನಂದ್ ಮಹೀಂದ್ರಾ ಜೊತೆಗೆ 12 ಕಂಪನಿ ಅಧಿಕಾರಿಗಳನ್ನು ಆರೋಪಿಗಳಾಗಿ ಸೇರಿಸಲಾಗಿದೆ. ಈ ಸಂಬಂಧ ಮೃತರನ ಕುಟುಂನಸ್ಥರು ನ್ಯಾಯಾಲಯದ ಮೊರೆ ಹೋಗಿದ್ದರು. ನ್ಯಾಯಾಲಯದ ಆದೇಶದಂತೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ಈ ಬಗ್ಗೆ ಮಹೀಂದ್ರಾ ಹೇಳಿದ್ದೇನು?: ಅಪಘಾತದ ಸಮಯದಲ್ಲಿ ಏರ್ ಬ್ಯಾಗ್ ತೆರೆಯದಿರಲು ಕಾರಣಗಳನ್ನು ವಿವರಿಸುತ್ತದೆ. ಎಸ್‌ಯುವಿಯಲ್ಲಿ ಪ್ರಯಾಣಿಸುವಾಗ ಅಪೂರ್ವ್ ಸೀಟ್ ಬೆಲ್ಟ್ ಧರಿಸಿದ್ದರೂ, ಅಪಘಾತದ ಸಮಯದಲ್ಲಿ ಕಾರು ಪಲ್ಟಿಯಾದ ಕಾರಣ ಏರ್‌ಬ್ಯಾಗ್‌ಗಳು ತೆರೆದಿಲ್ಲ ಎಂದು ಹೇಳಲಾಗಿದೆ. ಕಾರಿನಲ್ಲಿ ಏರ್ ಬ್ಯಾಗ್ ಏರಿಸಿದ್ದಾರೆ ಎಂಬ ಆರೋಪದಲ್ಲಿ ಸತ್ಯಾಂಶವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಪ್ರಯಾಣಿಕರ ಸುರಕ್ಷತೆಯ ವಿಚಾರದಲ್ಲಿ ಕಂಪನಿಯ ಜವಾಬ್ದಾರಿಯನ್ನು ನಿರ್ಲಕ್ಷಿಸುವುದಿಲ್ಲ. ಪ್ರಸ್ತುತ ನ್ಯಾಯಾಲಯದ ವ್ಯಾಪ್ತಿಗೆ ಒಳಪಡುವ ಈ ಪ್ರಕರಣದ ತನಿಖೆಗೆ ತಮ್ಮ ಕಂಪನಿ ಸಂಪೂರ್ಣ ಸಹಕಾರ ನೀಡಲಿದೆ . ಮೃತ ಡಾ. ಅಪೂರ್ವ್ ಮಿಶ್ರಾ ಅವರ ಕುಟುಂಬಕ್ಕೆ ಸಂತಾಪ. ಎಂದು ಕಂಪನಿ ಹೇಳಿದೆ.
Here is our official statement with reference to an incident involving the Scorpio. We have also issued a Press Statement last night. pic.twitter.com/8JvXwi48k3
— Mahindra Automotive (@Mahindra_Auto) September 27, 2023
ಅಪಘಾತವಾದ ಮಹೀಂದ್ರಾ ಸ್ಕಾರ್ಪಿಯೋ S9 ರೂಪಾಂತರವು ಏರ್‌ಬ್ಯಾಗ್‌ಗಳನ್ನು ಹೊಂದಿದ್ದು, ಅದರಲ್ಲಿ ಯಾವುದೇ ಅಸಮರ್ಪಕ ಕಾರ್ಯವಿಲ್ಲ ಎಂದು ಮಹೀಂದ್ರಾ ಕಂಪನಿಯು ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿದೆ. ಪತ್ರಿಕಾ ಹೇಳಿಕೆಯು ಅಪಘಾತವು ‘ರೋಲೋವರ್’ (ಪಲ್ಟಿ) ಎಂದು ದೃಢಪಡಿಸಿದೆ ಮತ್ತು ಆ ಸಂದರ್ಭದಲ್ಲಿ, ಮುಂಭಾಗದ ಏರ್‌ಬ್ಯಾಗ್‌ಗಳು ಓಪನ್ ಆಗುವುದಿಲ್ಲ. ಹಿಂದಿನ ಹಲವು ಕಾರುಗಳಲ್ಲಿ ಮುಂಭಾಗದಲ್ಲಿ ಮಾತ್ರ ಏರ್‌ಬ್ಯಾಗ್‌ಗಳು ಹೊಂದಿರುತ್ತದೆ. ಇದರ ಸೆನ್ಸಾರ್ ಮುಂಭಾಗದಲ್ಲಿರುತ್ತದೆ. ಇದರಿಂದ ಮುಂಭಾಗದಲ್ಲಿ ಅಪಘಾತವಾದಗ ಸೆನ್ಸಾರ್ ಆಗಿ ಏರ್‌ಬ್ಯಾಗ್‌ಗಳು ಓಪನ್ ಆಗುತ್ತದೆ. ಇದು ಪಲ್ಟಿಯಾದ ಕಾರಣ ಏರ್‌ಬ್ಯಾಗ್‌ಗಳು ಓಪನ್ ಆಗಿಲ್ಲ ಎನ್ನಲಾಗಿದೆ.
ಕಾರಿನ ಏರ್‌ಬ್ಯಾಗ್ ತೆರೆಯದ ಕಾರಣ ಯುವಕ ಸಾವು; ಆನಂದ್ ಮಹೀಂದ್ರಾ ಸೇರಿದಂತೆ 13 ಮಂದಿ ವಿರುದ್ಧ ಎಫ್‌ಐಆರ್