ಮಹದೇವಪೇಟೆ ಮಹಿಳಾ ಸಹಕಾರ ಸಂಘದಲ್ಲಿ ಕನ್ನಡ ರಾಜ್ಯೋತ್ಸವ

blank

ಮಡಿಕೇರಿ:

ಇಲ್ಲಿನ ಮಹದೇವಪೇಟೆ ಮಹಿಳಾ ಸಹಕಾರ ಸಂಘದಲ್ಲಿ ಈಚೆಗೆ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. ಸಂಘದ ಅಧ್ಯಕ್ಷೆ ಸವಿತಾ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ನಿವೃತ್ತ ಪ್ರಾಂಶುಪಾಲೆ ಕುಂತಿ ಬೋಪಯ್ಯ ಕನ್ನಡದ ಇತಿಹಾಸ, ಕನ್ನಡ ನಡೆದು ಬಂದ ದಾರಿಯ ಬಗ್ಗೆ ಭಾಷಣ ಮಾಡಿದರು. ನಂತರ ವೈದ್ಯ ಡಾಕ್ಟರ್ ಕೆ.ಬಿ.ಸೂರ್ಯಕುಮಾರ್ ಅವರನ್ನು ಸನ್ಮಾನಿಸಲಾಯಿತು. ನಂತರ ಮಾತನಾಡಿದ ಸೂರ್ಯಕುಮಾರ್, ಸ್ಥಳೀಯ ಪತ್ರಿಕೆಯೊಂದರಲ್ಲಿ ಪ್ರತಿ ವಾರ ಆರೋಗ್ಯ ಅಂಕಣ ಬರೆಯುತ್ತಾ ಅದನ್ನೇ ಪುಸ್ತಕ ರೂಪದಲ್ಲಿ ತರಲಾಯಿತು. ತಮ್ಮ ವೈದ್ಯಕೀಯ ಜೀವನದ ಅನುಭವಗಳನ್ನಾಧರಿಸಿ ಬರೆದ ವೈದ್ಯ ಲೋಕದ ಕತೆಗಳು ಹಾಗೂ ವೈದ್ಯ ಕಂಡ ವಿಸ್ಮಯ ಪುಸ್ತಕದ ಬಗ್ಗೆಯೂ ಮಾತನಾಡಿದರು. ಕನ್ನಡದಲ್ಲಿ ಬಹಳಷ್ಟು ಪುಸ್ತಕಗಳು ಬಿಡುಗಡೆ ಯಾಗುತ್ತವೆ. ಆದರೆ ಬಿಡುಗಡೆಯಾದ ಪುಸ್ತಕಗಳನ್ನು ಕೊಂಡು ಓದುವವರಿಲ್ಲ ಎಂದು ಬೇಸರಿಸಿದರು. ಕನ್ನಡಿಗರಲ್ಲಿ ಕನ್ನಡ ಪುಸ್ತಕಗಳನ್ನು ಓದುವ ಅಭ್ಯಾಸ ಬೆಳೆಯಬೇಕು ಎಂದರು.

ಇದೇ ವೇಳೆ ಸಂಘದ ಸದಸ್ಯೆಯರು ಸ್ವರಚಿತ ಕವನಗಳನ್ನು ವಾಚಿಸಿದರು. ರಾಜ್ಯೋತ್ಸವ ಅಂಗವಾಗಿ ನಡೆದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಭಾರತಿ ರಮೇಶ್, ಜಯಶೀಲಾ ಪ್ರಕಾಶ್, ಶೈಲಾ ಮಂಜುನಾಥ್, ಆಯಿಷಾ ಹಮೀದ್, ಕಮಲಾ ಸುಬ್ಬಯ್ಯ, ಪ್ರೇಮಾ ರಾಘವಯ್ಯ, ವಸಂತಿ ಪೂಣಚ್ಚ, ಶ್ಯಾಮಲಾ ದಿನೇಶ್ ಮತ್ತಿತರರು ಇದ್ದರು. ಇದೇ ವೇಳೆ ಸಂಘದ ಸದಸ್ಯೆಯರಿಂದ ಗೀತಗಾಯನ ಕಾರ್ಯಕ್ರಮ ನಡೆಯಿತು.

Share This Article

ಈ ಕಾಯಿಲೆಯಿಂದ ಬಳಲುತ್ತಿರುವವರು ಸಿಹಿ ಗೆಣಸಿನಿಂದ ದೂರವಿರಿ; ಇಲ್ಲಿದೆ ಹೆಲ್ತಿ ಮಾಹಿತಿ | Health Tips

ಸಿಹಿ ಗೆಣಸು ಯಾರಿಗೆ ಇಷ್ಟವಿರುವುದಿಲ್ಲ ಹೇಳಿ. ರುಚಿಕರವಾದ ಸಿಹಿಗೆಣಸನ್ನು ಶೀತ ಋತುವಿನಲ್ಲಿ ಕಂಡುಬರುವ ಬೇರು ತರಕಾರಿ…

ಗಿಡಗಳನ್ನು ಹಸಿರಾಗಿಡಲು ಕಡಲೆಕಾಯಿ ಸಿಪ್ಪೆ ಪ್ರಯೋಜನಕಾರಿ; ಇಲ್ಲಿದೆ ಬಳಸುವ ವಿಧಾನ | Tips

ಚಳಿಗಾಲದಲ್ಲಿ ಸಸ್ಯಗಳಿಗೆ ಹೆಚ್ಚಿನ ಕಾಳಜಿ ಬೇಕು. ಏಕೆಂದರೆ ತಂಪಾದ ಗಾಳಿ ಮತ್ತು ಇಬ್ಬನಿಯಿಂದ ತೇವಾಂಶವು ಹೆಚ್ಚಾಗುವುದರಿಂದ…

Kurukshetra | ಕುರುಕ್ಷೇತ್ರ ಯುದ್ಧದ ಕೊನೆಯಲ್ಲಿ ರಣಭೂಮಿಗೆ ದ್ರೌಪದಿಯನ್ನು ಶ್ರೀಕೃಷ್ಣ ಕರೆತಂದಿದ್ದೇಕೆ; ಪರಮಾತ್ಮ ಹೇಳಿದ್ದೇನು?

ಕುರುಕ್ಷೇತ್ರ(Kurukshetra) ಯುದ್ಧದಲ್ಲಿ ಎಲ್ಲಾರೂ ಮರಣ ಹೊಂದಲು ಕಾರಣ ಪಾಂಡವರಲ್ಲ ದ್ರೌಪದಿಯ ಕಣ್ಣೀರು. ಕುರುಕ್ಷೇತ್ರ ಯುದ್ಧ ಮುಗಿದ…