Saturday, 17th November 2018  

Vijayavani

ಮೈಸೂರು ಪಾಲಿಕೆಯಲ್ಲಿ ದೋಸ್ತಿ ತಂತ್ರ - ಮಾತುಕತೆ ಯಶಸ್ವಿ - 2 ವರ್ಷ ಕಾಂಗ್ರೆಸ್, 3 ವರ್ಷ ಜೆಡಿಎಸ್​​ಗೆ        ಮೀಸಲಾತಿ ವಿಚಾರದಲ್ಲಿ ದೋಸ್ತಿಗಳೇ ಗರಂ - ಸಿಎಂ ಎಚ್​​ಡಿಕೆಗೆ ಸಚಿವ ಪ್ರಿಯಾಂಕ ಖರ್ಗೆ ಪತ್ರ        ಅನಂತ್ ನಿಧನದಿಂದಾಗಿರೋ ನಷ್ಟ ಭರಿಸಲು ಸರ್ಕಸ್ - ರಾಜ್ಯ ಬಿಜೆಪಿ ಸಂಸದರಿಗೆ ಸಿಗುತ್ತಾ ಸಚಿವ ಭಾಗ್ಯ        ಇಂದು ಮಹದಾಯಿ ಕುರಿತು ಸರ್ವಪಕ್ಷ ಸಭೆ - ಮುಂದಿನ ಕ್ರಮದ ಬಗ್ಗೆ ನಡೆಯಲಿದೆ ಮಹತ್ವದ ಚರ್ಚೆ        ಇಂದು ಶಬರಿಮಲೆ ಬಾಗಿಲು ಮತ್ತೆ ಓಪನ್ - ಮಹಿಳೆಯರಿಗೆ ದರ್ಶನ ಸಿಗುತ್ತೋ? ಸಿಗಲ್ವೋ..?       
Breaking News

ಮತ್ತೊಂದು ದಾಖಲೆ ಬರೆದ ಧೋನಿ: 600 ಕ್ಯಾಚ್​ ಪಡೆದ ಮೂರನೇ ವಿಕೆಟ್​ ಕೀಪರ್​

Sunday, 18.02.2018, 8:29 AM       No Comments

ಸೆಂಚುರಿಯನ್​: ಭಾರತ ಕ್ರಿಕೆಟ್​ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಮತ್ತೊಂದು ದಾಖಲೆ ಬರೆದಿದ್ದಾರೆ. ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಒಟ್ಟು 600 ಕ್ಯಾಚ್​ ಪಡೆಯುವ ಮೂಲಕ ಈ ಸಾಧನೆ ಮಾಡಿದ 3ನೇ ವಿಕೆಟ್​ ಕೀಪರ್​ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.

ಸೆಂಚುರಿಯನ್​ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ 6ನೇ ಏಕದಿನ ಪಂದ್ಯದಲ್ಲಿ ಹಶೀಮ್​ ಆಮ್ಲಾ ನೀಡಿದ ಕ್ಯಾಚ್​ ಪಡೆಯುವ ಮೂಲಕ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 600 ಕ್ಯಾಚ್​ ಪಡೆದ ಮೈಲಿಗಲ್ಲು ಸ್ಥಾಪಿಸಿದರು. ಧೋನಿ ಟೆಸ್ಟ್​ನಲ್ಲಿ 256, ಏಕದಿನದಲ್ಲಿ 297 ಮತ್ತು ಟಿ 20 ಕ್ರಿಕೆಟ್​ನಲ್ಲಿ 47 ಕ್ಯಾಚ್​ ಪಡೆದಿದ್ದಾರೆ.

ಹೆಚ್ಚು ಕ್ಯಾಚ್​ ಪಡೆದ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ದಕ್ಷಿಣ ಆಫ್ರಿಕಾದ ಮಾರ್ಕ್​ ಬೌಚರ್​ ಇದ್ದು, ಅವರು ಟೆಸ್ಟ್​ನಲ್ಲಿ 532, ಏಕದಿನದಲ್ಲಿ 402 ಸೇರಿ ಒಟ್ಟು 934 ಕ್ಯಾಚ್​ ಪಡೆದಿದ್ದಾರೆ. ಎರಡನೇ ಸ್ಥಾನದಲ್ಲಿ ಆಸ್ಟ್ರೇಲಿಯಾದ ಮಾಜಿ ವಿಕೆಟ್​ ಕೀಪರ್​ ಆಡಮ್​ ಗಿಲ್​ ಕ್ರಿಸ್ಟ್​ ಇದ್ದು, ಅವರು ಟೆಸ್ಟ್​ನಲ್ಲಿ 379, ಏಕದಿನದಲ್ಲಿ 417 ಸೇರಿ ಒಟ್ಟು 796 ಕ್ಯಾಚ್​ ಪಡೆದಿದ್ದು 2ನೇ ಸ್ಥಾನದಲ್ಲಿದ್ದಾರೆ.

ಜತೆಗೆ ಒಟ್ಟು 600 ಕ್ಯಾಚ್​ ಮತ್ತು 174 ಸ್ಟಂಪಿಂಗ್​ಗಳ ಮೂಲಕ ಧೋನಿ ಒಟ್ಟು 774 ಬ್ಯಾಟ್ಸ್​ಮನ್​ಗಳನ್ನು ಔಟ್​ ಮಾಡಿದ್ದಾರೆ.

ಮತ್ತೊಂದು ದಾಖಲೆ ಹೊಸ್ತಿಲಲ್ಲಿ ಧೋನಿ

ಧೋನಿ ಏಕದಿನ ಕ್ರಿಕೆಟ್​ನಲ್ಲಿ ಇನ್ನು 33 ರನ್​ ಗಳಿಸಿದರೆ 10 ಸಾವಿರ ರನ್​ಗಳ ಮೈಲಿಗಲ್ಲನ್ನು ಮುಟ್ಟಲಿದ್ದಾರೆ. ಈ ಮೂಲಕ 10 ಸಾವಿರ ರನ್​ ಗಡಿ ದಾಟಿದ 2ನೇ ವಿಕೆಟ್​ ಕೀಪರ್​ ಎಂಬ ಗೌರವಕ್ಕೆ ಪಾತ್ರರಾಗಲಿದ್ದಾರೆ. ಶ್ರೀಲಂಕಾದ ಮಾಜಿ ವಿಕೆಟ್​ ಕೀಪರ್​ ಕುಮಾರ ಸಂಗಕ್ಕಾರ ಮಾತ್ರ ಏಕ ದಿನ ಕ್ರಿಕೆಟ್​ನಲ್ಲಿ 10 ಸಾವಿರ ರನ್​ ಗಳಿಸದ ದಾಖಲೆ ಹೊಂದಿದ್ದಾರೆ. ಜತೆಗೆ ಸಚಿನ್​ ತೆಂಡುಲ್ಕರ್​, ಸೌರವ್​ ಗಂಗೂಲಿ ಮತ್ತು ರಾಹುಲ್​ ದ್ರಾವಿಡ್​ ನಂತರ 10 ಸಾವಿರ ರನ್​ ಮೈಲಿಗಲ್ಲು ಮುಟ್ಟಿದ 4ನೇ ಭಾರತೀಯ ಆಟಗಾರ ಎಂಬ ಗೌರವಕ್ಕೂ ಪಾತ್ರರಾಗಲಿದ್ದಾರೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *

Back To Top