ಮಹಾವೀರರ ತತ್ವ, ಆದರ್ಶ ಅನುಸರಣೆ ಅವಶ್ಯ : ಹಿರಿಯ ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ(ಸಿಪಿಕೆ) ಅಭಿಪ್ರಾಯ

blank

ಮೈಸೂರು: ಅಶಾಂತಿಯ ಹೊಸ್ತಿಲಲ್ಲಿರುವ ಜಗತ್ತಿಗೆ ಅಹಿಂಸೆ ಸಂದೇಶ ಸಾರಿರುವ ಬುದ್ಧ್ದ, ವೀರ ಮಹಾವೀರರ ತತ್ವ, ಆದರ್ಶ ಅವಶ್ಯಕ ಎಂದು ಹಿರಿಯ ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ(ಸಿಪಿಕೆ) ಅಭಿಪ್ರಾಯಪಟ್ಟರು.
ನಗರದ ಆಚಾರ್ಯ ಗುರುಕುಲದಿಂದ ನಗರದ ಪತ್ರಕರ್ತರ ಭವನದಲ್ಲಿ ಬುಧವಾರ ಆಯೋಜಿಸಿದ್ದ ಮಹಾವೀರ ಮಹಾದರ್ಶನ ಕಾವ್ಯ ವಾಚನದ 350ನೇ ದಿನದ ಮಹೋತ್ಸವ ಮತ್ತು ಕವಿ ಲತಾ ರಾಜಶೇಖರ್ ಅವರಿಗೆ ಆಚಾರ್ಯ ಗುರುಕುಲ ಭಗವಾನ್ ಮಹಾವೀರ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಜಗತ್ತು ದ್ವೇಷ ಅಸೂಯೆಗಳಿಂದ ಜರ್ಜರಿತವಾಗಿದೆ. ಎಲ್ಲೆಲ್ಲೂ ಅಶಾಂತಿಯ ಕಾರ್ಮೋಡ ಕವಿದಿದ್ದು, ಮೂರನೇ ಮಹಾಯುದ್ಧ ಆರಂಭವಾಗಲಿದೆಯೇ ಎನ್ನುವ ಆತಂಕ ಎದುರಾಗಿದೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಬುದ್ಧ, ಮಹಾವೀರರಂತಹ ಮಹಾನ್ ವ್ಯಕ್ತಿಗಳ ಶಾಂತಿ ಸಂದೇಶ ಅಗತ್ಯವಾಗಿದೆ ಎಂದರು.
ಲತಾ ರಾಜಶೇಖರ್ ಅವರಿಗೆ ಈ ಪ್ರಶಸ್ತಿ ಸಂದಿರುವುದು ಅರ್ಥಪೂರ್ಣ, ಔಚಿತ್ಯಪೂರ್ಣ. ಅವರು ಪ್ರಶಸ್ತಿಗೆ ಸರ್ವತಃ ಅರ್ಹರು. ಬುದ್ಧ, ಮಹಾವೀರ ಸೇರಿದಂತೆ ಲೋಭ ಗುರುಗಳನ್ನು ಕನ್ನಡಕ್ಕೆ ಕರೆತಂದಿದ್ದಾರೆ. ಜತೆಗೆ ಪರಧರ್ಮ ಪ್ರವೇಶಿಸಿ ಅದರ ತಿರುಳನ್ನು ಕನ್ನಡಕ್ಕೆ ತಂದುಕೊಟ್ಟಿದ್ದಾರೆ. ಜೈನ ಧರ್ಮದ ತತ್ವಗಳು ಜಟಿಲ. ಅವುಗಳನ್ನು ಕನ್ನಡಕ್ಕೆ ಕಟ್ಟಿಕೊಟ್ಟಿರುವುದು ಶ್ಲಾಘನೀಯ ಎಂದರು.
ಗುರುಕುಲದ ಕುಲಸಚಿವ ಎಚ್.ಪಿ.ಮೋಹನ ಕುಮಾರ ಶಾಸ್ತ್ರಿ, ಅಂತಾರಾಷ್ಟ್ರೀಯ ಜೈನ್ ಮಿಲನ್ ಸಂಘಟಕ ನಾ.ಪ್ರಸನ್ನಕುಮಾರ, ವೈದ್ಯ ಡಾ.ಎಚ್.ಬಿ.ರಾಜಶೇಖರ್, ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ನಿಕಟ ಪೂರ್ವ ಅಧ್ಯಕ್ಷೆ ಶೀಲಾ ಅನಂತರಾಜ್, ಶ್ರೀರಂಗಪಟ್ಟಣ ಪ್ರಧಾನ ಸಂರಕ್ಷಕ ಎಸ್.ಎಂ.ಸನ್ಮತಿ ಕುಮಾರ ಶಾಸ್ತ್ರಿ ಇದ್ದರು.

Share This Article

ಹೋಟೆಲ್​ ಸ್ಟೈಲ್​​ ಪನೀರ್ ಅಮೃತಸರಿ ಮಾಡುವ ವಿಧಾನ ಇಲ್ಲಿದೆ; ನೀವೊಮ್ಮೆ ಟ್ರೈ ಮಾಡಿ | Recipe

ಹಲವು ಬಾರಿ ಒಂದೇ ರೀತಿಯ ಆಹಾರ ತಿಂದು ಬೇಸರವಾಗುತ್ತದೆ. ಆಗ ಹೋಟೆಲ್‌ಗೆ ಹೋಗಿ ಊಟ ಮಾಡಲು…

ಚಿನ್ನದ ಮೇಲೆ ಲೋನ್​ ತಗೋತ್ತಿದ್ದೀರಾ? ಹಾಗಿದ್ರೆ ಈ ತಪ್ಪುಗಳಿಂದ ಮೊದಲು ದೂರವಿರಿ, ಇಲ್ಲದಿದ್ರೆ ನಷ್ಟ ಖಚಿತ | Gold Loan

Gold Loan: ಮನೆಯಲ್ಲಿದ್ದರೆ ಚಿನ್ನ ಚಿಂತೆಯೂ ಏತಕೇ ಇನ್ನಾ? ಎಂಬ ಮಾತನ್ನು ಇಂದಿಗೂ ನಮ್ಮ ಜನ…

ತಣ್ಣೀರಿನಲ್ಲಿ ಈಜುವುದರಿಂದಾಗುವ ಪ್ರಯೋಜನಗಳನ್ನು ನೀವು ತಿಳಿದುಕೊಳ್ಳಲೇಬೇಕು; ನಿಮಗಾಗಿಯೇ ಈ ಮಾಹಿತಿ | Health Tips

ತಣ್ಣೀರಿನಲ್ಲಿ ಈಜುವುದು ಕೇವಲ ಸಾಹಸ ಕ್ರೀಡೆ ಅಥವಾ ಹವ್ಯಾಸವಲ್ಲ. ಆದರೆ ಇದು ಆರೋಗ್ಯಕ್ಕೆ ಹಲವು ಪ್ರಯೋಜನಗಳನ್ನು…