ಕೊಪ್ಪಳ ಜಿಲ್ಲಾದ್ಯಂತ ಶಿವನ ಸ್ಮರಣೆಯಲ್ಲಿ ಭಕ್ತರು

ಕೊಪ್ಪಳ: ಮಹಾಶಿವರಾತ್ರಿ ಪ್ರಯುಕ್ತ ನಗರ ಸೇರಿ ಜಿಲ್ಲಾದ್ಯಂತ ಶಿವನ ದೇವಸ್ಥಾನಗಳಲ್ಲಿ ಸೋಮವಾರ ಬೆಳಗ್ಗೆಯಿಂದಲೇ ಧಾರ್ಮಿಕ ಪೂಜಾ ಕೈಂಕರ್ಯಗಳೊಂದಿಗೆ ಶ್ರದ್ಧಾ, ಭಕ್ತಿಯಿಂದ ಆಚರಿಸಲಾಯಿತು.

ಕೊಪ್ಪಳ ನಗರದ ಸಾರ್ವಜನಿಕ ಮೈದಾನದಲ್ಲಿ ದ್ವಾದಶಿ ಲಿಂಗ ಪ್ರದರ್ಶನ ಏರ್ಪಡಿಸಲಾಗಿತ್ತು. ಕುಷ್ಟಗಿಯಲ್ಲಿ ರಾಮಲಿಂಗೇಶ್ವರ ದೇವಸ್ಥಾನದ ಕಳಸ ಮೆರವಣಿಗೆ, ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ವಿಶೇಷ ಪೂಜೆ, ಭೀಮಾಂಬಿಕಾ ದೇವಿ ಭಾವಚಿತ್ರ ಹಾಗೂ ದೇವಸ್ಥಾನದ ಕಳಸ ಮೆರವಣಿಗೆಗೆ ಮಹಿಳೆಯರು ಕಳೆತಂದರು. ಯಲಬುರ್ಗಾದ ಬಸವೇಶ್ವರ ನಗರದಲ್ಲಿರುವ ಈಶ್ವರ ದೇವಸ್ಥಾನ ಹಾಗೂ ಕನಕಗಿರಿಯ ಐತಿಹಾಸಿಕ ಪ್ರಸಿದ್ಧ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯಿತು.

ಜ್ಯೋತಿರ್ಲಿಂಗ ದರ್ಶನ
ಕೊಪ್ಪಳದ ಸಾರ್ವಜನಿಕ ಮೈದಾನದಲ್ಲಿ ದ್ವಾದಶ ಜ್ಯೋತಿರ್ಲಿಂಗ ಪ್ರದರ್ಶನ ಏರ್ಪಡಿಸಲಾಗಿತ್ತು. ಸೌರಾಷ್ಟ್ರ ಸೋಮನಾಥ, ಶ್ರೀ ಶೈಲ ಮಲ್ಲಿಕಾರ್ಜುನ, ಉಜ್ಜಯಿನಿ ಮಹಾಕಾಳೇಶ್ವರ, ಓಂಕಾರ ಮಮಲೇಶ್ವರ, ಪರಳ್ಯವೈದ್ಯನಾಥೇಶ್ವರ, ಢಾಕಿನಾ ಭೀಮೇಶ್ವರ, ರಾಮೇಶ್ವರದ ರಾಮೇಶ್ವರ, ದ್ವಾರಕವನದ ನಾಗೇಶ್ವರ, ವಾರಣಾಸಿ ವಿಶ್ವೇಶ್ವರ, ಗೌತಮೀತಟದ ತ್ರಯಂಬಕೇಶ್ವರ, ಹಿಮಾಲಯ ಕೇದಾರೇಶ್ವರ, ಶಿಲಾಲಯ ಘಷ್ಮೇಶ್ವರ ಸೇರು ಹನ್ನೇರೆಡು ಲಿಂಗವನ್ನು ಒಂದೇ ಕಡೆ ಪ್ರತಿಷ್ಠಾಪಿಸಿಲಾಗಿತ್ತು.

ಕುಷ್ಟಗಿಯಲ್ಲಿ ಮಹಾಶಿವರಾತ್ರಿ ಪ್ರಯುಕ್ತ ನಡೆದ ಭೀಮಾಂಬಿಕಾ ದೇವಿ ಭಾವಚಿತ್ರ ಹಾಗೂ ದೇವಸ್ಥಾನದ ಕಳಸ ಮೆರವಣಿಗೆಗೆ ಮಹಿಳೆಯರು ಕಳೆತಂದರು.