More

    ಮಹರ್ಷಿ ಭಗೀರಥ ಜಯಂತಿ | ಜಾತ್ರಾ ಮಹೋತ್ಸವ

    ಮಹಾಲಿಂಗಪುರ: ಘೋರ ತಪಸ್ಸು ಮೂಲಕ ಶಿವನನ್ನು ಒಲಿಸಿಕೊಂಡು ಗಂಗೆಯನ್ನು ಧರೆಗಿಳಿಸಿ ಜನರ ನೀರಿನ ದಾಹ ತೀರಿಸಿದ ವಿಶ್ವ ಮಾನವ ಭಗೀರಥ ಮಹರ್ಷಿ ಎಂದು ಶಾಸಕ ಸಿದ್ದು ಸವದಿ ಹೇಳಿದರು.

    ನಗರದ ಕೆಂಗೇರಿ ಮಡ್ಡಿಯಲ್ಲಿರುವ ಭಗೀರಥ ಮಹರ್ಷಿ ದೇವಸ್ಥಾನದಲ್ಲಿ ಮುಧೋಳ ತಾಲೂಕು ಭಗೀರಥ ಉಪ್ಪಾರ ಸಮಾಜ ಸೇವಾ ಸಂಘ ಹಾಗೂ ಯುವಕ ಸಂಘ ಭಾನುವಾರ ಆಯೋಜಿಸಿದ್ದ ಮಹರ್ಷಿ ಭಗೀರಥ ಜಯಂತಿ ಹಾಗೂ ಸ್ಥಳೀಯ ಭಗೀರಥ ದೇವಸ್ಥಾನದ 13ನೇ ವಾರ್ಷಿಕೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

    ಭಗೀರಥ ಮಹರ್ಷಿ ಘೋರ ತಪ್ಪಸ್ಸಿನಿಂದ ಶಿವನನ್ನು ಒಲಿಸಿಕೊಂಡಿದ್ದರು. ಅಂಥವರ ಜೀವನ ಚರಿತ್ರೆ ನಮಗೆ ಒಂದು ಪಾಠ ಇದ್ದಂತೆ ಎಂದರು.

    ಬೆಳಗಾವಿ ನ್ಯಾಯವಾದಿ ಎನ್.ಆರ್. ಲಾತೂರ ಮಾತನಾಡಿ, ದೇವನದಿಯನ್ನು ಭೂಮಿಗೆ ತಂದ ಮಹಾನ್ ಪುರುಷ ಭಗೀರಥ. ಇಂಥ ಮಹಾತ್ಮರ ತತ್ವಾದರ್ಶಗಳನ್ನು ಎಲ್ಲರೂ ತಮ್ಮ ಜೀವನದಲ್ಲಿ ಸ್ವಲ್ಪ ಮಟ್ಟಿಗಾದರೂ ಅಳವಡಿಸಿಕೊಂಡಾಗ ಉತ್ಸವಕ್ಕೆ ಒಂದು ಅರ್ಥ ಬರುತ್ತದೆ. ಇಂದು ನಾವು ಮಕ್ಕಳಿಗೆ ಬರೀ ವಿದ್ಯೆ ಕಲಿಸುವುದರಲ್ಲೇ ಮಗ್ನರಾಗಿದ್ದೇವೆ ಹೊರತು ಸಂಸ್ಕೃತಿ ಕಲಿಸುತ್ತಿಲ್ಲ. ಸಂಸ್ಕೃತಿ ಇಲ್ಲದ ವಿದ್ಯೆಗೆ ಯಾವ ಬೆಲೆಯೂ ಇಲ್ಲ ಎಂದರು.

    ಮಹಾಲಿಂಗೇಶ್ವರ ಶಿವಯೋಗಿ ರಾಜೇಂದ್ರ ಸ್ವಾಮಿಗಳು, ಸಿದ್ಧಾರೂಢ ಮಠದ ಸಹಜಾನಂದ ಸ್ವಾಮಿಗಳು, ಬೆಳಗಲಿಯ ಸಿದ್ಧರಾಮ ಶಿವಯೋಗಿಗಳು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಕರ್ನಾಟಕ ರಾಜ್ಯ ಉಪ್ಪಾರ ಸಂಘದ ಮಾಜಿ ಅಧ್ಯಕ್ಷ ಸುರೇಶ ಲಾತೂರ ಮಾತನಾಡಿದರು.

    ಇದಕ್ಕೂ ಮುನ್ನ ಮಹಾಲಿಂಗೇಶ್ವರ ದೇವಸ್ಥಾನದ ಮುಂದೆ ಮಹಾಲಿಂಗೇಶ್ವರ ಶ್ರೀಗಳು ಭಗೀರಥರ ಮೆರವಣಿಗೆಗೆ ಚಾಲನೆ ನೀಡಿದರು. ನಂತರ ಕುಂಭಮೇಳ, ವಿವಿಧ ವಾದ್ಯಮೇಳಗಳೊಂದಿಗೆ ಭಗೀರಥರ ಭಾವಚಿತ್ರ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಕೆಂಗೇರಿಮಡ್ಡಿಯಲ್ಲಿರುವ ಭಗೀರಥ ದೇವಸ್ಥಾನಕ್ಕೆ ಆಗಮಿಸಿತು.

    ಜಿಪಂ ಮಾಜಿ ಸದಸ್ಯ ಮಹಾಂತೇಶ ಹಿಟ್ಟಿನಮಠ, ನ್ಯಾಯವಾದಿ ವಿಷ್ಣು ಲಾತೂರ, ಮುಧೋಳ ತಾಲೂಕು ಶ್ರೀ ಭಗೀರಥ ಉಪ್ಪಾರ ಸಮಾಜ ಸೇವಾ ಸಂಘದ ಅಧ್ಯಕ್ಷ ಮಹಾಲಿಂಗಪ್ಪ ಲಾತೂರ, ಕಾರ್ಯದರ್ಶಿ ರಾಜಶೇಖರ ಮುದಕಪ್ಪಗೋಳ, ಖಜಾಂಚಿ ಮಲ್ಲಪ್ಪ ಮುದಕಪ್ಪಗೋಳ, ಸದಸ್ಯ ಲಕ್ಷ್ಮಣ ಮುಗಳಖೋಡ, ಶ್ರೀ ಭಗೀರಥ ಜಾತ್ರಾ ಕಮಿಟಿ ಅಧ್ಯಕ್ಷ ಲಕ್ಕಪ್ಪ ಲಾತೂರ, ಯುವಕ ಸಂಘದ ಅಧ್ಯಕ್ಷ ವಿಜಯ ಲಾತೂರ, ಸೈದಾಪುರ ಗ್ರಾಪಂ ಸದಸ್ಯ ಯಮನಪ್ಪ ಉಪ್ಪಾರ ಇತರರಿದ್ದರು.
    ಸಮಾಜದ ಗಣ್ಯರು ಹಾಗೂ ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚಿನ ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಮುತ್ತಪ್ಪ ಲಾತೂರ ಅನ್ನಪ್ರಸಾದ ವ್ಯವಸ್ಥೆ ಮಾಡಿಸಿದ್ದರು. ಹಣಮಂತ ಲಾತೂರ ನಿರೂಪಿಸಿದರು. ದೇವೇಂದ್ರ ಲಾತೂರ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts