ಕಲಘಟಗಿ: ಬನದ ಹುಣ್ಣಿಮೆ ನಿಮಿತ್ತ ತಾಲೂಕಿನ ಭೋಗೇನಾಗರಕೊಪ್ಪ ಗ್ರಾಮದ ಬಸವಣ್ಣ ದೇವರ (ನಂದೀಶ್ವರ) ಮಹಾ ರಥೋತ್ಸವ ಸೋಮವಾರ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.
ಸೋಮವಾರ ಬೆಳಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಶ್ರೀ ಬಸವಣ್ಣ ದೇವರ ಮಹಾಮೂರ್ತಿಗೆ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಪುಷ್ಪಾಲಂಕಾರ, ಮಹಾ ಮಂಗಳಾರುತಿ ಕಾರ್ಯಕ್ರಮಗಳು ವೈದಿಕ ಹಾಗೂ ದೇವಸ್ಥಾನ ಅರ್ಚಕರಿಂದ ಜರುಗಿದವು.
ಸಂಜೆ 4 ಗಂಟೆಗೆ ತೇರಿಗೆ ಹೂಮಾಲೆ, ರುದ್ರಾಕ್ಷಿ ಹಾಗೂ ತಳಿರು-ತೋರಣಗಳಿಂದ ಅಲಂಕರಿಸಿದ್ದ ತೇರಿಗೆ ಜಗ್ಗಲಗಿ, ಕುಂಭಮೇಳ, ಆನೆ ಅಂಬಾರಿ, ಭಜನೆ, ನಂದಿಕೋಲು, ವಿವಿಧ ವಾದ್ಯ ಮೇಳಗಳೊಂದಿಗೆ ಬಸವಣ್ಣ ದೇವರ ಉತ್ಸವ ಮೂರ್ತಿಯ ಮಹಾ ರಥೋತ್ಸವ ಸಂಭ್ರಮದಿಂದ ಜರುಗಿತು.
ಭಕ್ತರು ರಥೋತ್ಸವಕ್ಕೆ ಬಾಳೆ ಹಣ್ಣು, ಉತ್ತತ್ತಿ ಎಸೆದು ಭಕ್ತಿಭಾವ ಮೆರೆದರು.