ಪತಿ ಕೇಳಿದ್ದು ವಿಚ್ಛೇದನ ಆದರೆ ಪತ್ನಿಗೆ ಮತ್ತೊಂದು ಮಗು ಬೇಕಂತೆ! ಹೀಗೊಂದು ವಿಚಿತ್ರ ಘಟನೆ ಬಗ್ಗೆ ನ್ಯಾಯಾಲಯ ಹೇಳಿದ್ದೇನು?

ಮುಂಬೈ: ವಿಚ್ಛೇದನಕ್ಕೆ ಅರ್ಜಿ ಹಾಕಿರುವ ಮಹಿಳೆಯು ಪರಿತ್ಯಕ್ತ ಗಂಡನಿಂದಲೇ ಮಗು ಬೇಕು ಎಂದು ಸಲ್ಲಿಸಿರುವ ಮನವಿಗೆ ಸಮ್ಮತಿಸಿರುವ ಮುಂಬೈನ ಕೌಟುಂಬಿಕ ನ್ಯಾಯಾಲಯ, ಈ ಬಗ್ಗೆ ಪತಿ-ಪತ್ನಿಯರು ಚರ್ಚಿಸಿ ತೀರ್ಮಾನಿಸಿ ಎಂದು ಸೂಚಿಸಿದೆ.

ಕೌಟುಂಬಿಕ ದೌರ್ಜನ್ಯದ ಆರೋಪ ಹೊರಿಸಿ 2017ರಲ್ಲಿ ವಿವಾಹ ವಿಚ್ಛೇದನಕ್ಕೆ ಮಹಿಳೆಯೊಬ್ಬರು ಕೋರ್ಟ್ ಮೊರೆ ಹೋಗಿದ್ದರು. ವಿಚಾರಣೆ ನಡೆಯುತ್ತಿದ್ದು, ಅಂತಿಮ ತೀರ್ಪು ಬಂದಿಲ್ಲ. ಈ ಮಧ್ಯೆ, ಕೋರ್ಟ್​ಗೆ ಹೊಸ ಅರ್ಜಿ ಹಾಕಿರುವ ಮಹಿಳೆ, ‘ತನಗೆ 35 ವರ್ಷವಾಗಿದ್ದು, ಸಂತಾನೋತ್ಪತ್ತಿ ಸಾಮರ್ಥ್ಯ ಕಳೆದುಕೊಳ್ಳುತ್ತಿದ್ದೇನೆ. ಹೀಗಾಗಿ ಹಾಲಿ ಪತಿಯ ವೀರ್ಯ ಪಡೆದು ಐವಿಎಫ್​ಗೆ(ಇನ್ ವಿಟ್ರೋ ಫರ್ಟಿಲೈಸೇಷನ್- ಪುರುಷರ ವೀರ್ಯ ಪಡೆದು ಗರ್ಭಧಾರಣೆ) ಅವಕಾಶ ಮಾಡಿಕೊಡಬೇಕು’ ಎಂದು ಮನವಿ ಸಲ್ಲಿಸಿದ್ದಾರೆ.

‘ಪತಿ ಇದಕ್ಕೆ ಸಮ್ಮತಿಸಿದರೆ ಹುಟ್ಟುವ ಮಗುವಿನ ಖರ್ಚನ್ನು ತಾನೇ ನೋಡಿಕೊಳ್ಳುತ್ತೇನೆ ಹಾಗೂ ಪತಿ ವಿರುದ್ಧದ ಕ್ರಿಮಿನಲ್ ಮೊಕದ್ದಮೆ ಹಿಂಪಡೆಯುತ್ತೇನೆ’ ಎಂದೂ ಹೇಳಿದ್ದಾರೆ. ಮಹಿಳೆಯ ಅರ್ಜಿ ಮಾನ್ಯ ಮಾಡಿರುವ ಕೋರ್ಟ್, ವೈವಾಹಿಕ ಸಮಾಲೋಚಕರು ಹಾಗೂ ಐವಿಎಫ್ ತಜ್ಞರೊಂದಿಗೆ ದಂಪತಿ ಭೇಟಿಗೆ ದಿನ ನಿಗದಿಪಡಿಸಿದೆ. ಆದರೆ, ಇದಕ್ಕೆ ಪತಿ ಆಕ್ಷೇಪವ್ಯಕ್ತಪಡಿಸಿದ್ದು, ವೀರ್ಯ ದಾನ ಅಸಾಧ್ಯ ಎಂದಿದ್ದಾರೆ. (ಏಜೆನ್ಸೀಸ್)

2 Replies to “ಪತಿ ಕೇಳಿದ್ದು ವಿಚ್ಛೇದನ ಆದರೆ ಪತ್ನಿಗೆ ಮತ್ತೊಂದು ಮಗು ಬೇಕಂತೆ! ಹೀಗೊಂದು ವಿಚಿತ್ರ ಘಟನೆ ಬಗ್ಗೆ ನ್ಯಾಯಾಲಯ ಹೇಳಿದ್ದೇನು?”

Leave a Reply

Your email address will not be published. Required fields are marked *