ರೈತನೆಂದು ಮೂಗು ಮುರಿಯಬೇಡಿ, ಈತನ ಮದುವೆಗೆ ವಧು ಮಂಟಪಕ್ಕೆ ಬಂದಿಳಿದಿದ್ದು ಹೆಲಿಕಾಪ್ಟರ್‌ನಲ್ಲಿ!

ಪಂಡರಾಪುರ: ಸಾಮಾನ್ಯವಾಗಿ ರೈತ ಎಂದರೆ ಕಣ್ಮುಂದೆ ಬರುವುದು ಬಡತನ. ಆದರೆ ತಾನು ಮದುವೆಯಾಗುವ ಹುಡುಗಿಯನ್ನು ಕರೆತರಲು ಹೆಲಿಕಾಪ್ಟರ್‌ನ್ನೇ ಕಳುಹಿಸಿದ ಎಂದರೆ ನೀವಿದನ್ನು ನಂಬಲೇಬೇಕು.

ಹೌದು, ಮಹಾರಾಷ್ಟ್ರದ ಸೋಲಾಪುರ ಜಿಲ್ಲೆ ಸಮೀಪದ ಪಂಡರಾಪುರದಲ್ಲಿ ಮಧುಮಗ ವಧುವನ್ನು ಮದುವೆ ಮಂಟಪಕ್ಕೆ ಕರೆತರಲು ಹೆಲಿಕಾಪ್ಟರ್‌ ಕಳುಹಿಸಲು ನಿರ್ಧರಿಸಿ ಕಳುಹಿಸಿದ್ದಾನೆ.

ಮಾದಾ ತಾಲೂಕಿನ ಉಪ್ಲಾಸಿ ಎಂಬ ಹಳ್ಳಿಯಲ್ಲಿ ಹೆಲಿಕಾಪ್ಟರ್‌ನಿಂದಾಗಿ ಈ ಮದುವೆ ಭಾರಿ ಗಮನ ಸೆಳೆದಿದ್ದು, ಊರಿನ ಜನ ಹೆಲಿಕಾಪ್ಟರ್‌ ಬರುವುದನ್ನೇ ನೋಡಲು ಕಾದು ನಿಂತಿದ್ದರು.

ಐಶ್ವರ್ಯಾ ಎಂಬ ಸುಶಿಕ್ಷಿತೆ, ಸುಶಿಕ್ಷಿತನಾಗಿ ಕೃಷಿ ಮಾಡುತ್ತಿದ್ದ ಯುವಕನನ್ನು ಮದುವೆಯಾಗಲು ನಿಶ್ಚಯಿಸಿದ್ದಳು. ಎಂಬಿಎ ಪದವೀಧರನಾಗಿದ್ದ ವರ ನಿತಿನ್‌ ಕೃಷಿಯ ಮೇಲಿನ ಮೋಹದಿಂದಾಗಿ ಕೃಷಿಯನ್ನೇ ವೃತ್ತಿಯನ್ನಾಗಿ ಆರಿಸಿಕೊಂಡಿದ್ದ.

ತನ್ನ ಮದುವೆಯು ವಿಶಿಷ್ಟವಾಗಿರಬೇಕೆಂದು ಬಯಸಿದ್ದ ನಿತಿನ್‌, ವಧುವಿನ ದಿಬ್ಬಣಕ್ಕೆ ಕುದುರೆ ಗಾಡಿ, ಎತ್ತಿನ ಗಾಡಿ ಮತ್ತು ಶೃಂಗಾರಗೊಂಡ ಕಾರಿನ ಬದಲಾಗಿ ಹೆಲಿಕಾಪ್ಟರ್‌ನ್ನೇ ವಧುವನ್ನು ಕರೆತರಲು ಕಳುಹಿಸಿದ್ದಾನೆ.

ನಿತೀನ್ ನಿರೀಕ್ಷಿಸಿದಂತೆ ಐಶ್ವರ್ಯ ಅತ್ಯಂತ ಸಂಭ್ರಮದಿಂದ ಮದುವೆ ಮಂಟಪಕ್ಕೆ ಬಂದಿದ್ದಾರೆ. ಇತ್ತ ಹೆಲಿಕಾಪ್ಟರ್‌ ಕರೆಸಿದ್ದು ಇಡೀ ಗ್ರಾಮವನ್ನೇ ಸಂತಸದ ಕಡಲಲ್ಲಿ ತೇಲಿಸಿದೆ. (ಏಜೆನ್ಸೀಸ್)

Leave a Reply

Your email address will not be published. Required fields are marked *