More

  VIDEO| ಬೋರ್‌ವೆಲ್‌ಗೆ ಬಿದ್ದಿದ್ದ ಬಾಲಕ ಮೃತ್ಯು; ರಕ್ಷಣಾ ಕಾರ್ಯಾಚರಣೆ ನೋಡಿ..

  ಮಹಾರಾಷ್ಟ್ರ: ಬೋರ್‌ವೆಲ್‌ಗೆ ಬಿದ್ದ ಐದು ವರ್ಷದ ಬಾಲಕನನ್ನು ರಕ್ಷಿಸಲು ನಡೆದ ಕನಿಷ್ಠ ಒಂಬತ್ತು ಗಂಟೆಗಳ ರಕ್ಷಣಾ ಕಾರ್ಯಾಚರಣೆ ವಿಫಲವಾಗಿದೆ. ಮಹಾರಾಷ್ಟ್ರದ ಅಹ್ಮದ್​​ನಗರ ಜಿಲ್ಲೆಯ ಹಳ್ಳಿಯೊಂದರಲ್ಲಿ ಈ ಘಟನೆ ನಡೆದಿದೆ.

  ಮೃತನನ್ನು ಸಾಗರ್ ಬರೇಲಾ(5) ಎಂದು ಗುರುತಿಸಲಾಗಿದೆ. ಸೋಮವಾರ ಸಂಜೆ 4 ಗಂಟೆ ಸುಮಾರಿಗೆ ಸುಮಾರು 200 ಅಡಿ ಆಳದ ಬೋರ್‌ವೆಲ್‌ನ ಮಧ್ಯದಲ್ಲಿ ಬೋರ್‌ವೆಲ್‌ಗೆ ಕರ್ಜತ್ ತಹಸಿಲ್ ವ್ಯಾಪ್ತಿಯ ಕೊಪರ್ಡಿ ಗ್ರಾಮದಲ್ಲಿ ಬಾಲಕ ಹೊಲದಲ್ಲಿ ಆಟವಾಡುತ್ತಾ ಬಿದ್ದಿದ್ದಾನೆ.

  ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್​​ಡಿಆರ್​ಎಫ್​​), ಸ್ಥಳೀಯ ಪೊಲೀಸರು ಮತ್ತು ಜಿಲ್ಲಾಡಳಿತದ ಸಿಬ್ಬಂದಿಗಳೊಂದಿಗೆ ಬಾಲಕನ ರಕ್ಷಣೆಗೆ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. ಆದರೆ ದುರಾದೃಷ್ಟವಶಾತ್​ ಬಾಲಕನ ಮೃತ ದೇಹವನ್ನು ಹೊರತೆಗೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

  ಇದನ್ನೂ ಓದಿ: ಡೆತ್​ ನೋಟ್​ ಬರೆದ ನಟಿ ಪಾಯಲ್​ ಘೋಷ್​ ; ನಾನು ಸತ್ತರೆ ಇವರೇ ಕಾರಣ..

  ಕರ್ಜತ್-ಜಮಖೇಡ್ ಶಾಸಕ ರೋಹಿತ್ ಪವಾರ್ ಟ್ವೀಟ್​​ ಮಾಡಿ, ‘ರೈತರು ತಮ್ಮ ಹೊಲಗಳಲ್ಲಿನ ಬೋರ್​​ವೆಲ್​ಗಳನ್ನು ಸರಿಯಾಗಿ ಮುಚ್ಚಿ ಕಾಳಜಿ ವಹಿಸಬೇಕು. ನನ್ನ ಕ್ಷೇತ್ರದಲ್ಲಿ ಬೋರ್‌ವೆಲ್‌ಗೆ ಬಿದ್ದು ಕೂಲಿ ಕಾರ್ಮಿಕನ ಮಗು ಮೃತಪಟ್ಟಿರುವ ಘಟನೆ ಅತ್ಯಂತ ದುರದೃಷ್ಟಕರ. ಎಷ್ಟೇ ಪ್ರಯತ್ನಿಸಿದರೂ ಆತನನ್ನು ರಕ್ಷಿಸಲಾಗಲಿಲ್ಲ. ಆದರೆ ಅಂತಹ ಘಟನೆಗಳನ್ನು ತಪ್ಪಿಸಲು, ರೈತರು ತಮ್ಮ ಹೊಲಗಳಲ್ಲಿನ ಕೊಳವೆ ಬಾವಿಗಳನ್ನು ಸರಿಯಾಗಿ ಮುಚ್ಚಲು ಕಾಳಜಿ ವಹಿಸಬೇಕು’ ಎಂದಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts