ನೀರಿನ ಕೊರತೆ, ಪ್ರವಾಹದಿಂದ ಕಬ್ಬು ನಾಶ

ಮಹಾಲಿಂಗಪುರ; ಈ ವರ್ಷ ನೀರಿನ ಕೊರತೆ ಮತ್ತು ಪ್ರವಾಹದಿಂದ ಸಾಕಷ್ಟು ಪ್ರಮಾಣದಲ್ಲಿ ಕಬ್ಬು ಬೆಳೆ ನಾಶವಾಗಿದೆ ಎಂದು ಸಮೀರವಾಡಿಯ ಗೋದಾವರಿ ಬಯೋರಿಫೈನರೀಜ್ ಕಾರ್ಯನಿರ್ವಾಹಕ ನಿರ್ದೇಶಕ ಬಾಲಚಂದ್ರ ಭಕ್ಷಿ ಹೇಳಿದರು.

ಪಟ್ಟಣದ ಕೆಎಲ್‌ಇ ಸಂಸ್ಥೆಯ ಎಸ್‌ಸಿಪಿ ವಿಜ್ಞಾನ ಮತ್ತು ಡಿ.ಡಿ. ಶಿರೋಳ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಐಕ್ಯೂಎಸಿ, ಅರ್ಥಶಾಸ ಮತ್ತು ಕೃಷಿ ಮಾರುಕಟ್ಟೆ ವಿಭಾಗ ಹಾಗೂ ಬೆಳಗಾವಿಯ ಎಸ್.ನಿಜಲಿಂಗಪ್ಪ ಶುಗರ್ ಇನ್ಸಿಟ್ಯೂಟ್ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಬ್ಬು ಬೆಳೆಯ ಕಡಿಮೆ ವೆಚ್ಚದ ತಂತ್ರಜ್ಞಾನ ಕುರಿತ ಚರ್ಚಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ಮೊದಲು ನೀರಿನ ಸಮಸ್ಯೆಯೆಂದು ರೈತರು ಸಂಕಷ್ಟಕ್ಕೆ ಒಳಗಾದರು. ಈಗ ಪ್ರವಾಹದಿಂದ ರೈತರು ಮತ್ತಷ್ಟು ಸಂಕಷ್ಟಕ್ಕೆ ಒಳಗಾಗಿದ್ದಾರೆ ಎಂದರು.

ರೈತ ಚಂದ್ರಶೇಖರ ನಿಂಬರಗಿ ಮಾತನಾಡಿ, ಕೃಷಿ ಲಾಭದಾಯಕ ಉದ್ಯೋಗ. ಅದಕ್ಕಾಗಿ ನಾವು ಅರ್ಪಣಾ ಮನೋಭಾವದಿಂದ ಕಾರ್ಯನಿರ್ವಹಿಸಬೇಕು. ಅಜ್ಞಾನದಿಂದ ಕೃಷಿ ಮಾಡಿದರೆ ನಷ್ಟ ಕಟ್ಟಿಟ್ಟ ಬುತ್ತಿ. ರೈತ ನಿಷ್ಠೆ, ಪ್ರಾಮಾಣಕತೆ, ನಿರಂತರ ಶ್ರಮದಿಂದ ಕೃಷಿಯನ್ನು ಮಾಡಿದರೆ ಅಧಿಕ ಲಾಭ ಪಡೆಯಲು ಸಾಧ್ಯವಾಗುತ್ತದೆ ಎಂದರು.

ಸಮೀರವಾಡಿಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಆರ್.ಬಿ.ಪಾಟೀಲ ಮತ್ತು ಜಿಬಿಎಲ್ ನಿರ್ದೇಶಕ ಬಾಲಚಂದ್ರ ಭಕ್ಷಿ ಅವರನ್ನು ಸನ್ಮಾನಿಸಲಾಯಿತು.

ಪ್ರಥಮ ಗೋಷ್ಠಿಯ ಸಂಪನ್ಮೂಲ ವ್ಯಕ್ತಿ ಡಾ.ಎನ್.ಆರ್.ಯಕ್ಕೆಲಿ ಕಬ್ಬು ಬೆಳೆ ಸುಲಭ ಮಾರ್ಗದ ಬಗ್ಗೆ ಮತ್ತು ನಾಟಿ ಮಾಡುವುದರಲಿನ್ಲ ತಾಂತ್ರಿಕತೆ, ಮಿಶ್ರಬೆಳೆ, ಸಾವಯುವ ಕೃಷಿ, ಮಣ್ಣ್ಣಿನ ಪೋಷಕಾಂಶ ಕುರಿತು ಸಮಗ್ರವಾಗಿ ಮಾತನಾಡಿದರು.

ಕೆಎಲ್‌ಇ ಸ್ಥಾನಿಕ ಆಡಳಿತ ಮಂಡಳಿ ಸದಸ್ಯ ಬಿ.ಎ. ಬಂತಿ ಕಾರ್ಯಕ್ರಮ ಉದ್ಘಾಟಿಸಿದರು. ಡಾ.ಬಿ.ಎಂ. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಐಕ್ಯೂಎಸಿ ಸಂಯೋಜಕ ಡಾ.ಕೆ.ಎಂ. ಅವರಾದಿ, ಸಂಘಟನಾ ಕಾರ್ಯದರ್ಶಿ ಡಾ.ಸುನಂದಾ ಸೋರಗಾಂವಿ, ಡಾ.ಜಿ.ಎನ್.ಪಾಟೀಲ ಇದ್ದರು. ಗಾಯತ್ರಿ ಬಾಗೇವಾಡಿ ನಿರೂಪಿಸಿದರು. ಡಾ.ಸುನಂದಾ ಸೋರಗಾಂವಿ ವಂದಿಸಿದರು. ಸಮೀರವಾಡಿ ಕಾರ್ಖಾನೆ ಗಣ್ಯ ಪಿ.ಎನ್. ದೇಸಾಯಿ, ಆರ್.ವಿ. ಕುಲಕರ್ಣಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *