ಮೆರವಣಿಗೆ ಮೆರಗು ಹೆಚ್ಚಿಸಿದ ಕಲಾ ತಂಡಗಳು

ಮಹಾಲಿಂಗಪುರ: ಮುಧೋಳ ತಾಲೂಕು ಭಗೀರಥ ಉಪ್ಪಾರ ಸಮಾಜ ಸೇವಾ ಸಂಘ ಹಾಗೂ ಮಹಾಲಿಂಗಪುರ ಯುವಕ ಸಂಘದ ಆಶ್ರಯದಲ್ಲಿ ಭಗೀರಥ ಜಯಂತ್ಯುತ್ಸವ ಶುಕ್ರವಾರ ಅದ್ದೂರಿಯಾಗಿ ಆಚರಿಸಲಾಯಿತು.

ಮಹಾಲಿಂಗೇಶ್ವರ ದೇವಸ್ಥಾನದಿಂದ ಕೆಂಗೇರಿಮಡ್ಡಿಯಲ್ಲಿರುವ ಭಗೀರಥ ದೇವಸ್ಥಾನದವರೆಗೆ ಮಹರ್ಷಿ ಭಗೀರಥ ಭಾವಚಿತ್ರ ಮೆರವಣಿಗೆ ಮಾಡಲಾಯಿತು. ಮಹಾಲಿಂಗೇಶ್ವರ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಮೆರವಣಿಗೆಗೆ ಚಾಲನೆ ನೀಡಿದರು.

ನಕಲು ಕುದುರೆ ಕುಣಿತ, ಮರಗಾಲು ನೃತ್ಯ, ಸೀ ವೇಷಧಾರಿ ಪುರುಷರು, ವಾದ್ಯಮೇಳಗಳು ಮೆರವಣಿಗೆಗೆ ಕಳೆ ತಂದವು. ಉಪ್ಪಾರಹಟ್ಟಿಯ ಸಿದ್ಧಾರೂಢ ಮಠದ ನಾಗೇಶ್ವರ ಚೇತನ ಸ್ವಾಮೀಜಿ, ಹೂಲಿಕಟ್ಟಿ ವಶಿಷ್ಠ ಆಶ್ರಮದ ಭಾರ್ಗವಾನಂದಗಿರಿ ಸ್ವಾಮೀಜಿ ಹಾಗೂ ರನ್ನಬೆಳಗಲಿಯ ಸಿದ್ಧಾರೂಢ ಶಿವಯೋಗಾಶ್ರಮದ ಸಿದ್ಧರಾಮ ಶಿವಯೋಗಿ ಸ್ವಾಮೀಜಿ ಅಶ್ವಾರೂಢರಾಗಿ ಮೆರವಣಿಗೆಯಲ್ಲಿ ಭಾಗವಹಿಸಿ ಗಮನಸೆಳೆದರು.

ಸಂಘದ ಅಧ್ಯಕ್ಷ ಮಹಾಲಿಂಗಪ್ಪ ಲಾತೂರ, ಕಾರ್ಯದರ್ಶಿ ರಾಜಶೇಖರ ಮುದಕಪ್ಪಗೋಳ, ರಾಜ್ಯಾಧ್ಯಕ್ಷ ಸುರೇಶ ಲಾತೂರ, ಜಿಲ್ಲಾ ಗೌರವಾಧ್ಯಕ್ಷ ಎನ್.ಆರ್. ಲಾತೂರ, ಪುರಸಭೆ ಸದಸ್ಯ ಶೇಖರ ಅಂಗಡಿ, ರವಿ ಜವಳಗಿ, ಮಹಾಲಿಂಗಪ್ಪ ಲಾತೂರ, ಗಂಗಪ್ಪ ಲಾತೂರ, ಲಕ್ಷ್ಮಣ ಮುಗಳಖೋಡ, ನಾಗಪ್ಪ ಲಾತೂರ, ಶ್ರೀಕಾಂತ ಲಾತೂರ, ಬಸು ಹೋಳಗಿ, ಮುತ್ತಪ್ಪ ಲಾತೂರ, ಲಕ್ಕಪ್ಪ ಲಾತೂರ, ಈರಪ್ಪ ನಾಗರಾಳ, ಸೋಮು ಜಮಖಂಡಿ, ದುಂಡಪ್ಪ ಕೈಸೊಲಗಿ ಇತರರಿದ್ದರು.

Leave a Reply

Your email address will not be published. Required fields are marked *