More

  ಶ್ರೀ ಗೋಚಂದ್ರ ಮಾರಮ್ಮದೇವಿ ದೇಗುಲದ ಮಹಾಕುಂಭಾಭಿಷೇಕ

  ಮೈಸೂರು: ದಲಿತ ಅಭಿವೃದ್ಧಿ ಸಂಘದಿಂದ ಬಂಬೂ ಬಜಾರ್‌ನ ಹೈವೇ ವೃತ್ತದ ಬಳಿಯ ಎಂಸಿಸಿ ಕಾಲನಿಯಲ್ಲಿರುವ ಶ್ರೀ ಗೋಚಂದ್ರ ಮಾರಮ್ಮದೇವಿ ದೇವಾಲಯದಲ್ಲಿ ವಿಗ್ರಹ ಮರು ಪ್ರತಿಷ್ಠಾಪನೆ ಮತ್ತು ಮಹಾಕುಂಭಾಭಿಷೇಕ ಕಾರ್ಯಕ್ರಮ

  ನಡೆಯಿತು.


  ಅವಧೂತ ದತ್ತಪೀಠದ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ಮಾತನಾಡಿ, ಮಕ್ಕಳಿಗೆ ಉತ್ತಮ ಸಂಸ್ಕಾರ, ಧ್ಯಾನ ಹಾಗೂ ಧಾರ್ಮಿಕ ಚಿಂತನೆ ಕಲಿಸಬೇಕಿದೆ. ಈ ಹಿನ್ನೆಲೆಯಲ್ಲಿ ಹಿರಿಯರು ತೋರಿದ ದಾರಿಯಲ್ಲಿ ಈಗಿನ ಮಕ್ಕಳು ಸಾಗಬೇಕು ಎಂದು ಸಲಹೆ ನೀಡಿದರು.


  ವಿಜ್ಞಾನದಿಂದ ಜೀವನ ಅರಳುವ ಬದಲು ನರಳುವಂತಾಗಿದೆ. ಆಧುನಿಕ ಯುಗದಲ್ಲಿ ಬಹಳಷ್ಟು ಸೌಲಭ್ಯ, ಸವಲತ್ತುಗಳಿದ್ದರೂ ಮನಃಶಾಂತಿ, ನೆಮ್ಮದಿ ಇಲ್ಲದಂತಾಗಿದೆ. ಧ್ಯಾನ, ಧಾರ್ಮಿಕ ಕಾರ್ಯದಲ್ಲಿ ಸಕ್ರಿಯವಾಗುವ ಮೂಲಕ ನೆಮ್ಮದಿ, ಸಮಾಧಾನವನ್ನು ಪಡೆದುಕೊಳ್ಳಬಹುದಾಗಿದೆ ಎಂದರು.


  ಶ್ರೀ ಗೋಚಂದ್ರ ಮಾರಮ್ಮದೇವಿ ದೇವಾಲಯದ ಟ್ರಸ್ಟಿ, ಮಾಜಿ ಮೇಯರ್ ನಾರಾಯಣ್ ಮಾತನಾಡಿ, ಅಂದಾಜು 37 ಲಕ್ಷ ರೂ. ವೆಚ್ಚದಲ್ಲಿ ದೇವಿಯ ವಿಗ್ರಹವನ್ನು ಮರು ಪ್ರತಿಷ್ಠಾಪಿಸಲಾಗಿದೆ. ಶತಮಾನದಷ್ಟು ಐತಿಹಾಸಿಕ ಹಿನ್ನೆಲೆಯಿರುವ ಈ ದೇವಾಲಯವು ಭಕ್ತಿ ಮತ್ತು ಭಾವೈಕ್ಯದ ಸಂಕೇತವಾಗಿದೆ ಎಂದು ಹೇಳಿದರು.


  ಪಾಲಿಕೆ ಮಾಜಿ ಸದಸ್ಯರಾದ ಟಿ.ರಾಮು, ಆರ್.ಶಿವಣ್ಣ, ಆದಿಜಾಂಬವ ಮಹಾಸಂಘದ ಅಧ್ಯಕ್ಷ ಗಂಗಣ್ಣ, ಪ್ರಧಾನ ಕಾರ್ಯದರ್ಶಿ ಎಂ.ಡಿ.ವೆಂಕಟೇಶ್, ಜಿಲ್ಲಾ ಕಾಂಗ್ರೆಸ್ ಸಫಾಯಿ ಕರ್ಮಚಾರಿ ಘಟಕದ ಎಸ್.ನಾಗರಾಜು, ದಲಿತ ಅಭಿವೃದ್ಧಿ ಸಂಘದ ಪದಾಧಿಕಾರಿಗಳಾದ ಪರಶುರಾಮ್, ಎಂ.ವಿ.ವೆಂಕಟೇಶ್, ಉಪಶಾಖೆ ಪದಾಧಿಕಾರಿಗಳಾದ ಯತಿರಾಜ್, ಹನುಮಂತು, ನರಸಿಂಹ, ಮಂಜುನಾಥ್ ಇತರರು ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts