ರಾಣೆಬೆನ್ನೂರ ಕಾ ರಾಜಾ ವಿಸರ್ಜನೆ

ರಾಣೆಬೆನ್ನೂರ: ವಂದೇ ಮಾತರಂ ಸೇವಾ ಸಂಸ್ಥೆ ವತಿಯಿಂದ ನಗರದ ಪಿ.ಬಿ. ರಸ್ತೆಯ ಮೈಸೂರು ಪ್ಯಾಲೇಸ್​ನಲ್ಲಿ ಪ್ರತಿಷ್ಠಾಪಿಸಿದ್ದ ‘ರಾಣೆಬೆನ್ನೂರ ಕಾ ರಾಜಾ’ ಮಹಾಗಣಪತಿ ವಿಸರ್ಜನಾ ಮೆರವಣಿಗೆ ಗುರುವಾರ ವಿಜೃಂಭಣೆಯಿಂದ ಜರುಗಿತು.

ಪಿ.ಬಿ. ರಸ್ತೆಯ ಗ್ರಾಮೀಣ ಠಾಣೆ ಸಮೀಪದ ವೃತ್ತದಿಂದ ಆರಂಭವಾದ ಮೆರವಣಿಗೆ ಕುರುಬಗೇರಿ ಕ್ರಾಸ್, ಹಲಗೇರಿ ಕ್ರಾಸ್, ಕೋರ್ಟ್ ವೃತ್ತ, ಪೋಸ್ಟ್ ವೃತ್ತ, ಎಂ.ಜಿ. ರಸ್ತೆ, ದುರ್ಗಾ ವೃತ್ತ, ಪಿ.ಬಿ. ರಸ್ತೆ, ಮಿನಿ ವಿಧಾನಸೌಧದ ಮಾರ್ಗದ ಮೂಲಕ ತುಂಗಭದ್ರಾ ಯೋಜನೆಯ ಕಾಲುವೆಯಲ್ಲಿ ಗಣೇಶ ವಿಸರ್ಜನೆಗೊಳ್ಳಲಿದೆ.

ಡೊಳ್ಳು ಕುಣಿತ, ಕೋಲಾಟ, ಸಮಾಳವಾದ್ಯ, ಹಲಗೆ ಮೇಳ, ನಂದಿ ಕಂಬ, ಭಜನೆ, ಜಾಂಜ್, ಅಣಕು ಗೊಂಬೆಗಳು, ಹುಲಿಕುಣಿತ, ಪೂಜಾ ಕುಣಿತ, ವೀರಗಾಸೆ, ಜಂಬೂ ಸವಾರಿ ಸೇರಿ ಡಿಜೆಯೊಂದಿಗೆ ಬೃಹತ್ ಶೋಭಾಯಾತ್ರೆ ನಡೆಯಿತು. ಸುಮಾರು ಐವತ್ತು ಸಾವಿರ ಜನರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಯುವಕರು ಕೇಸರಿ ಪೇಟ, ಭಗವಾಧ್ವಜ ಹಿಡಿದು ಕುಣಿದು ಕುಪ್ಪಳಿಸಿದರು. ಮಹಾಗಣಪತಿ ಮೂರ್ತಿ ಬೀದಿಗಳಲ್ಲಿ ಬರುತ್ತಿದ್ದಂತೆ ಸಾರ್ವಜನಿಕರು ಪೂಜೆ ಸಲ್ಲಿಸಿದರು.

ಆಯಕಟ್ಟಿನ ಸ್ಥಳ, ಪ್ರಾರ್ಥನಾ ಮಂದಿರಗಳು ಸೇರಿ ವಿವಿಧಡೆ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.