ರಾಜ್ಯದ ಒಂದು ಹನಿ ನೀರು ವ್ಯರ್ಥವಾಗಲು ಬಿಡಲ್ಲ: ಡಿಕೆಶಿ

ಕೊಪ್ಪಳ: ರಾಜ್ಯದ ಒಂದು ಹನಿ ನೀರನ್ನು ಕೂಡ ವ್ಯರ್ಥ ಆಗಲು ಬಿಡುವುದಿಲ್ಲ. ಟಿಬಿ ಡ್ಯಾಂ ಹೂಳು ತೆಗೆಯುವುದು ಅಸಾಧ್ಯ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ತಿಳಿಸಿದರು.

ಟಿಬಿ ಡ್ಯಾಂಗೆ ಬಾಗಿನ ಅರ್ಪಿಸಿದ ಬಳಿಕ ಮಾತನಾಡಿ, ವಿದೇಶಿ ತಜ್ಞರು ಸೇರಿದಂತೆ 200ಕ್ಕೂ ಹೆಚ್ಚು ತಜ್ಞರಿಂದ ಸಲಹೆ ಪಡೆಯಲಾಗಿದ್ದು, ಹೂಳು ತೆಗೆಯುವುದು ಕಷ್ಟ ಸಾಧ್ಯ ಎಂದು ಸಲಹೆ ನೀಡಿದ್ದಾರೆ. ಸಮನಾಂತರ ಜಲಾಶಯ ‌ನಿರ್ಮಾಣ ಕುರಿತು ಚರ್ಚೆ ನಡೀತಿದೆ. ನೀರು ಉಳಿಸಲು ಸಮ್ಮಿಶ್ರ ಸರ್ಕಾರ ಬದ್ಧ. ಜಲಾಶಯದ ನೀರಿನ ಸಂಗ್ರಹ ಹೆಚ್ಚಿಸಲು ಯೋಜನೆ ರೂಪಿಸಲಿದೆ ಎಂದರು.

ಮಹದಾಯಿ ವಿವಾದ ಸಂಬಂಧ ಕರಾಳ ತೀರ್ಪು ಸಂಬಂಧ ಪ್ರತಿಕ್ರಿಯಿಸಿ, ತೀರ್ಪಿಗೂ ಮುನ್ನ ಪ್ರತಿಯನ್ನು ಕೇಂದ್ರಕ್ಕೆ ಕಳುಹಿಸಲಾಗಿದೆ. ಬಳಿಕ ತೀರ್ಪು ಪ್ರಕಟಿಸಿರುವುದು ಅನುಮಾನ ಮೂಡಿಸಿದೆ. ತೀರ್ಪಿಗೂ ಮುನ್ನವೇ ಬಿಎಸ್​ವೈ ಅಭಿನಂದನೆ ಸಲ್ಲಿಸಿದರು ಎಂದು ತಿಳಿಸಿದರು.