More

    VIDEO| ಕಳಪೆ ಕಾಮಗಾರಿ; ಬರಿಗೈಯಲ್ಲಿ ಡಾಂಬರು ಕಿತ್ತೆಸೆದ ಗ್ರಾಮಸ್ಥರು

    ಮುಂಬೈ: ಕಳಪೆ ಗುಣಮಟ್ಟದ ಕಾಮಗಾರಿಗಳು, ರಸ್ತೆ ಗುಂಡಿಗಳು ದೇಶದ ಜನತೆಗೆ ಇತ್ತೀಚಿನ ದಿನಗಳಲ್ಲಿ ಮಾಮೂಲಿಯಾಗಿದೆ. ಸುಸ್ಥಿತಿಯಲ್ಲಿರುವ ರಸ್ತೆ ಕೂಡ ಎಡಬಿಡದೆ ಮಳೆ ಸುರಿದರೆ ಅದರ ರಭಸಕ್ಕೆ ಗುಂಡಿ ಬೀಳುವುದು ಸಹಜವಾಗಿದೆ.

    ಇದೀಗ ಘಟನೆಯೊಂದರಲ್ಲಿ ಮಹಾರಾಷ್ಟ್ರದ ಜಲ್ನಾ ಜಿಲ್ಲೆಯ ಗ್ರಾಮ ಒಂದರಲ್ಲಿ ರಸ್ತೆಗಳಿಗೆ ಡಾಂಬರೀಕರಣ ಮಾಡಿದ ಕೆಲವೇ ದಿನಗಳಲ್ಲಿ ಕಿತ್ತು ಬಂದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

    ಕಿತ್ತು ಬಂದ ರಸ್ತೆ

    ಈ ಗ್ರಾಮದ ರಸ್ತೆಯಲ್ಲಿ ಬಿದ್ದಿದ್ದ ಗುಂಡಿಗಳನ್ನು ಜರ್ಮನ್​ ತಂತ್ರಜ್ಞಾನದ ಮೂಲಕ ಮುಚ್ಚುವುದಾಗಿ ಹೇಳಿ ಗುತ್ತಿಗೆದಾರನೊಬ್ಬ ಕಳಪೆ ಕಾಮಗಾರಿಯನ್ನು ಮಾಡಿರುವ ಅಕ್ರಮವನ್ನು ಗ್ರಾಮಸ್ಥರು ಬಯಲಿಗೆಳೆದಿದ್ದಾರೆ.

    ಜಿಲ್ಲೆಯ ಹಸ್ತ್ ಪೋಖಾರಿ ಮತ್ತು ಕರ್ಜತ್ ಗ್ರಾಮದ ನಿವಾಸಿಗಳಿಗೆ ಜರ್ಮನ್​ ತಂತ್ರಜ್ಞಾನದ ಮೂಲಕ ರಸ್ತೆಗಳನ್ನು ನಿರ್ಮಿಸಲಾಗುವುದು ಎಂದು ಹೇಳಿ ಕಾಮಗಾರಿ ಮಾಡಿದ್ದಾನೆ.

    ಇದನ್ನೂ ಓದಿ: ವಿದ್ಯಾರ್ಥಿನಿಯರಿಗೆ ಹಿಜಾಬ್​ ಧರಿಸುವಂತೆ ಒತ್ತಾಯ; ತನಿಖೆಗೆ ಆದೇಶಿಸಿದ ಮಧ್ಯಪ್ರದೇಶ ಸರ್ಕಾರ

    ಬರಿಗೈಯಲ್ಲಿ ಡಾಂಬರು ಕಿತ್ತ ಗ್ರಾಮಸ್ಥರು

    ರಸ್ತೆ ನಿರ್ಮಿಸಿದ ಕೆಲವು ದಿನಗಳ ಬಳಿಕ ಕಿತ್ತುಬಂದಿರುವುದನ್ನು ಗಮನಿಸಿದ ಗ್ರಾಮಸ್ಥರು ಬಳಿಕ ಗುಣಮಟ್ಟವನ್ನು ಪರಿಶೀಲಿಸಿದಾಗ ಡಾಂಬರೀಕರಣ ಆದ ರಸ್ತೆಯನ್ನು ಕೈಯಲ್ಲಿ ಆರಾಮಾಗಿ ಎತ್ತುವ ಮೂಲಕ ಅಕ್ರಮ ಬಯಲಿಗೆಳೆದಿದ್ದಾರೆ.

    ಸದ್ಯ ವೈರಲ್​ ಆಗಿರುವ ವಿಡಿಯೋದಲ್ಲಿ ಗ್ರಾಮಸ್ಥರು ರಸ್ತೆಯ ಗುಣಮಟ್ಟವನ್ನು ತೋರಿಸುತ್ತಿರುವುದು ಕಂಡು ಬರುತ್ತದೆ. ಬಳಿಕ ಅಕ್ರಮ ಎಸಗಿರುವ ಗುತ್ತಿಗೆದಾರ ಹಾಗೂ ಇದರಲ್ಲಿ ಶಾಮೀಲಾಗಿರುವ ಅಧಿಕಾರಿಯ ಹೆಸರನ್ನು ಹೇಳುತ್ತಿರುವುದು ಕಂಡು ಬಂದಿದೆ.

    ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು ಅಕ್ರಮ ಎಸಗಿದವರ ವಿರುದ್ಧ ಜನತೆ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ ಮತ್ತು ಸರ್ಕಾರದ ವಿರುದ್ಧ ವಿಪಕ್ಷಗಳು ಹರಿಹಾಯ್ದಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts