ಸಂಗಮದಲ್ಲಿ ಸಿಎಂ ಯೋಗಿ ಆದಿತ್ಯನಾಥ ಸಹಿತ ಸಂಪುಟ ಸಚಿವರ ಪುಣ್ಯಸ್ನಾನ | ಇಸ್ರೋ ಚಿತ್ರ ಬಿಡುಗಡೆ
ಮಹಾಕುಂಭನಗರ (ಪ್ರಯಾಗ್ರಾಜ್): ಉತ್ತರ ಪ್ರದೇಶದ ಪ್ರಯಾಗರಾಜ್ನಲ್ಲಿ ನಡೆಯುತ್ತಿರುವ ಜಗತ್ತಿನ ಅತಿದೊಡ್ಡ ಧಾರ್ವಿುಕ ಕಾರ್ಯಕ್ರಮ ಬಾಹ್ಯಾಕಾಶದಿಂದ ಹೇಗೆ ಕಾಣುತ್ತಿದೆ ಎಂಬ ಫೋಟೋಗಳನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಬಿಡುಗಡೆ ಮಾಡಿದೆ.
ಗಂಗಾ, ಯಮುನಾ ನದಿ ತಟದಲ್ಲಿ ಒಂದು ತಾತ್ಕಾಲಿಕ ನಗರವನ್ನೇ ನಿರ್ವಿುಸಲಾಗಿದೆ. ಈ ಮಹಾಕುಂಭ ನಗರದ ಫೋಟೋಗಳನ್ನು ಇಸ್ರೋದ ಉಪಗ್ರಹಗಳು ಸೆರೆ ಹಿಡಿದಿವೆ. ಇಸ್ರೋದ ಇಒಎಸ್-04 ಸಿ ಎಂಬ ಉಪಗ್ರಹ ಹೈ ರೆಸ್ಯುಲ್ಯೂಷನ್ ಚಿತ್ರಗಳನ್ನು ಸೆರೆ ಹಿಡಿದೆ. ಇಸ್ರೋ ಬಿಡುಗಡೆ ಮಾಡಿರುವ ಚಿತ್ರಗಳಲ್ಲಿ 2023ರ ಸೆಪ್ಟೆಂಬರ್ನಿಂದ 2024ರ ಡಿಸೆಂಬರ್ 29ರವರೆಗೆ ಕುಂಭ ಮೇಳದ ಪ್ರದೇಶ ಹೇಗೆ ಬದಲಾಗಿದೆ ಎಂಬುದನ್ನು ತೋರಿಸಲಾಗಿದೆ. ಕುಂಭ ಮೇಳದ ಆಕರ್ಷಣೆಗಳಾಗಿರುವ ಶಿವಾಲಯ ಪಾರ್ಕ್ ಮತ್ತು ಭಾರತ ನಕ್ಷೆಯ ಪಾರ್ಕ್ನ ಚಿತ್ರವನ್ನೂ ಇಸ್ರೋ ಬಿಡುಗಡೆ ಮಾಡಿದೆ.
ಪುಣ್ಯಸ್ನಾನ
ಸಚಿವ ಸಂಪುಟ ಸಭೆ ಬಳಿಕ ಯೋಗಿ ಆದಿತ್ಯನಾಥ, ಡಿಸಿಎಂ ಗಳಾದ ಕೇಶವ ಪ್ರಸಾಧ್ ಮೌರ್ಯ, ಬ್ರಜೇಶ್ ಪಾಠಕ್ ಸೇರಿ ಸಂಪುಟದ ಎಲ್ಲಾ ಸಚಿವರೊಂದಿಗೆ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದರು. 2019ರಲ್ಲಿ ನಡೆದಿದ್ದ ಕುಂಭ ಮೇಳದಲ್ಲೂ ಭೇಟಿನೀಡಿ ಪುಣ್ಯಸ್ನಾನ ಮಾಡಿದ್ದರು.
ವಿಶೇಷ ಸಂಪುಟ ಸಭೆ
ಮಹಾಕುಂಭ ಮೇಳದಲ್ಲಿ ಸಿಎಂ ಯೋಗಿ ಆದಿತ್ಯನಾಥ ಅವರು ವಿಶೇಷ ಸಚಿವ ಸಂಪುಟ ಸಭೆ ನಡೆಸಿದರು. ಬುಧವಾರ ನಡೆದ ಸಚಿವ ಸಂಫುಟ ಸಭೆಯಲ್ಲಿ ಹಲವು ಮಹತ್ವದ ತೀರ್ವನಗಳನ್ನು ತೆಗೆದುಕೊಳ್ಳಲಾಗಿದೆ. ಸಭೆ ಬಳಿಕ ಮಾತನಾಡಿದ ಯೋಗಿ ಆದಿತ್ಯನಾಥ, ಮೇಳಕ್ಕೆ ದಾಖಲೆ ಪ್ರಮಾಣದ ಭಕ್ತರು ಆಗಮಿಸುತ್ತಿದ್ದಾರೆ. ಇದುವರೆಗೆ 9.25 ಕೋಟಿ ಜನರು ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ಪತ್ರಕರ್ತ ಸೇರಿ ಇಬ್ಬರ ಬಂಧನ
ಕುಂಭ ಮೇಳದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಾರ್ಹ ಕಾಮೆಂಟ್ ಮಾಡಿದ್ದ ಪತ್ರಕರ್ತ ಮತ್ತು ಮತ್ತೊಬ್ಬ ವ್ಯಕ್ತಿಯನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ. ಕಮ್ರಾನ್ ಅಲ್ವಿ ಎಂಬ ಪತ್ರಕರ್ತ ಕುಂಭ ಮೇಳದ ಕುರಿತು ಆಕ್ಷೇಪಾರ್ಹ ವಿಡಿಯೋ ಪೋಸ್ಟ್ ಮಾಡಿದ್ದ. ಈತನನ್ನು ಬಿಎನ್ಎಸ್ ಕಾಯ್ದೆಯ ಸೆಕ್ಷನ್ 299ರ ಅಡಿ ಬಂಧಿಸಲಾಗಿದೆ ಎಂದು ಬಾರಾಬಂಕಿ ಪೊಲೀಸರು ತಿಳಿಸಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ಮಹಾಕುಂಭ ಮತ್ತು ಹಿಂದು ಭಕ್ತರ ಕುರಿತು ಜಾಲತಾಣಗಳಲ್ಲಿ ಆಕ್ಷೇಪಾರ್ಹ ಕಾಮೆಂಟ್ ಮಾಡಿದ್ದ ಜೈಯದ್ಪುರ ಬೋಜ್ ಗ್ರಾಮದ ಅಭಿಷೇಕ್ ಕುಮಾರ್ ಎಂಬಾತನನ್ನು ಬಂಧಿಸಲಾಗಿದೆ.